Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on november 25_11_2025
ಸುದ್ದಿ ಜಗಳೂರು.
ವಿರೋಧ ಪಕ್ಷದವರು ಕೇವಲ ಟಿಕೆ ಮಾಡುತ್ತಾರೆ ನಮ್ಮ ಅಭಿವೃದ್ದಿ ಕೆಲಸಗಳನ್ನು ಒಮ್ಮೆ ನೋಡಲಿ ಕೇವಲ ಎರಡುವರೆ ವರ್ಷದಲ್ಲಿ ಹೆಚ್ಚು ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ಪಣತೊಟ್ಟಿರುವೆ ಶಾಸಕ.ಬಿ ದೇವೇಂದ್ರಪ್ಪ ವಿಶ್ವಾಸ
12,50 ಕೋಟಿ ರೂಗಳಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದರು
ಜಗಳೂರು ಪಟ್ಟಣದಲ್ಲಿ ಸುಮಾರು 12,50 ಕೋಟಿ ರೂಗಳಲ್ಲಿ ಸೋಮವಾರ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿ ಚಾಲನೆ ನೀಡಿದರು, ಭರಮಸಮುದ್ರ ಗ್ರಾಮದಲ್ಲಿ 16.50 ಲಕ್ಷ ರೂಗಳಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ ಲೋಕರ್ಪಣೆ ವೇದಿಕೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಉದ್ದೇಶಿಸಿ ಮಾತನಾಡಿದರು
ಪಟ್ಟಣದ ಚಳ್ಳಕೆರೆ ಗೇಟ್ ನಿಂದ ಹೋಚಿಬೋರಯ್ಯ ಕಾಲೇಜುವರೆಗೂ 2,75 ಕೋಟಿ ರೂಗಳಲ್ಲಿ ರಸ್ತೆ ಅಭಿವೃದ್ದಿ ತಾಲ್ಲೂಕಿನ ಭರಮಸಮುದ್ರ ಕ್ರಾಸ್ ನಿಂದ ಗ್ರಾಮದ ಯಲ್ಲಮ್ಮ ದೇವಸ್ಥಾನದ ವರೆಗೆ 2,50 ಕೋಟಿ ರೂಗಳಲ್ಲಿ ಡಾಂಬರು ರಸ್ತೆ ಪಟ್ಟಣದ ಹೊರಬಾಗದ ಲಿಂಗಣ್ಣಹಳ್ಳಿ 5,25 ಕೋಟಿ ರೂಗಳಲ್ಲಿ ಒಂದುವರೆ ಕಿಲೋಮಿಟರ್ ರಸ್ತೆ ಅಭಿವೃದ್ದಿ ಒಟ್ಟಾರೆ 12,50 ಕೋಟಿ ರೂಗಳಲ್ಲಿ ಗ್ರಾಮೀಣ ಬಾಗದ ಮತ್ತು ಪಟ್ಟಣದ ವಿವಿಧ ರಸ್ತೆ ಅಭಿವೃದ್ದಿಗೆ ಶ್ರಮಿಸುತ್ತಿದ್ದೆವೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಭರಮಸಮುದ್ರ ಹಾಗೂ ಪಟ್ಟಣದ ಕೆಲ ರಸ್ತೆ ಅಭಿವೃದ್ದಿ ಕಾಮಾಗಾರಿಗಳು
ನಂತರ ಸುಮಾರು 5 ಕೋಟಿ ರೂಗಳಲ್ಲಿ ಬಗ್ಗೆನಹಳ್ಳಿಯಿಂದ ದೇವಿಕೆರೆಯವರೆಗೂ ಮರು ಡಾಂಬರಿಕರಣ ರಸ್ತೆ ಅಭಿವೃದ್ದಿಪಡಿಸಲಾಗುವುದು ಎಂದು ತಿಳಿಸಿದರು.
ಜಗಳೂರು ಟ್ಟಣದ ಮುಖ್ಯರಸ್ತೆ ಅಗಲಿಕರಣ ಅಭಿವೃದ್ದಿಗೆ ಸಂಕಲ್ಪದಂತೆ ಕ್ಷೇತ್ರವನ್ನ ಇನ್ನು ಎರಡುವರೆ ವರ್ಷಗಳ ನನ್ನ ಅವಧಿ ಬಾಕಿಯಿದ್ದು ಸರ್ಕಾರದಿಂದ ಹೆಚ್ಚು ಅನುದಾನ ತಂದು ಅಭಿವೃದ್ದಿಪಡಿಸಲಾಗುವುದು ಎಂದು ಭರವಸೆ ನೀಡಿದರು .
ಕೋಡಿ ಬಿದ್ದು ನೀರು ಅನಗತ್ಯವಾಗಿ ಹರಿದು ಹೋಗದಂತೆ 3 ಕೋಟಿ ರೂಗಳಲ್ಲಿ ಭರಮಸಮುದ್ರ ಕೆರೆ ಅಭಿವೃದ್ದಿ ಸೇರಿದಂತೆ ಕೆರೆ ಕೋಡಿ ಅಭಿವೃದ್ದಿಗೆ ಒತ್ತು ನೀಡಿ ಅನಗತ್ಯವಾಗಿ ಹರಿದು ಹೋಗುವ ನೀರನ್ನ ಶೇಕರಣೆಗೆ ಒತ್ತು ನೀಡುವೆ ಎಂದು ಗ್ರಾಮಸ್ಥರಿಗೆ ವಿಶ್ವಾಸ ಮೂಡಿಸಿದರು .
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಕಾಂಗ್ರೇಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್.ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅದ್ಯಕ್ಷ ಪುಷ್ಪಾ . ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ಅಜ್ಜಪ್ಪ ನಾಡಿಗರ್. ಇಂಜಿನಿಯರ್ ಪುರುಷೋತ್ತಮ.ಮುಖಂಡ ತಿಪ್ಪೇಸ್ವಾಮಿ ಗೌಡ.ಪ್ರಕಾಶರೆಡ್ಡಿ.ಕುರಿಜಯ್ಯಣ್ಣ. ಮುಖಂಡ ಆದರ್ಶ.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಬಿ ಮಹೇಶ್ವರಪ್ಪ .ಮುಖಂಡರಾದ ಪ್ರಕಾಶರೆಡ್ಡಿ ಸೇರಿದಂತೆ ಮುಂತಾದವರು ಹಾಜುರಿದ್ದರು.

