ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿ ನಿಧನ

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on november 25_11_2025
25 November 2025, 10:08 PM

ಕಲಬುರ್ಗಿ ಜಿಲ್ಲೆಯ ಜೀವರ್ಗಿ ಸಮೀಪ ರಸ್ತೆ ಅಪಘಾತದಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ

ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಸಹೋದರ ಸೇರಿದಂತೆ ಕುಟುಂಬದ ಮೂವರು
ಸಾವನ್ನಪ್ಪಿದ್ದು, ಇನ್ನಿಬ್ಬರು ಶಂಕರ್ ಬೀಳಗಿ, ಈರಣ್ಣ ಬೀಳಗಿ ಎಂದು ಗುರುತಿಸಲಾಗಿದೆ. ವಿಜಯಪುರದಿಂದ ಕಲಬುರ್ಗಿಗೆ ಆಗಮಿಸುತ್ತಿದ್ದ ವೇಳೆ ಜೇವರ್ಗಿ ಬೈಪಾಸ್ ದಲ್ಲಿ ಕಾರು ಅಪಘಾತವಾಗಿದ್ದು, ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಸುಮಾರು 40ಅಡಿ ಕಂದಕಕ್ಕೆ ಉರುಳಿ ಬಿದ್ದಿದೆ.

ದಾವಣಗೆರೆಯಲ್ಲಿ 2019 ರಿಂದ 2022 ರವರೆಗೆ ಜಿಲ್ಲಾಧಿಕಾರಿಗಳಾಗಿದ್ದ ಮಹಾಂತೇಶ ಬೀಳಗಿಯವರು ಸದಾ ಹಸನ್ಮುಖಿಯಾಗಿ ಜನಪ್ರಿಯತೆ ಗಳಿಸಿದ್ದರು. ಸದಾ ಹಣೆಯ ಮೇಲಿನ ವಿಭೂತಿಯಿಂದ
ಬಸವಣ್ಣನವರ ಚಿಂತನೆಗಳ ಅನುಯಾಯಿಗಳಾಗಿದ್ದರು.‌ ಜನಸ್ಪಂದನ ಕಾರ್ಯಕ್ರಮವನ್ನು ತಾಲೂಕಿನ ಮಟ್ಟದಲ್ಲಿ ಆಯೋಜಿಸಿ ಅಲ್ಲಿ ಜನರು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ಧ ಮಹಾಂತೇಶ ಬೀಳಗಿಯವರು ಜನಮನ್ನಣೆ ಗಳಿಸಿದ್ದರು.

ನಂತರ
ದಾವಣಗೆರೆ ಜಿಲ್ಲಾಧಿಕಾರಿಗಳಾಗಿದ್ದು ಇಲ್ಲಿಂದ ವರ್ಗವಣೆಯಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅವರು ಒಂದು ತಿಂಗಳ ಹಿಂದಷ್ಟೇ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇವರು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅನೇಕ ಬಡವರ್ಗದ ಜನರಿಗೆ ತಾನು ಹುಟ್ಟಿ ಬೆಳೆದ ಕಷ್ಟಸಂಕೋಲೆಗಳ ಬಗ್ಗೆ ತಿಳಿಸಿ ದುಡಿಯಬೇಕು ಈಸಬೇಕೆ‌ಇದ್ದು ಜೈಸಬೇಕು ನಮ್ಮ ತಾಯಿ ರೊಟ್ಟಿ ಬಡಿದು ನನ್ನ ಸಾಕಿದ್ದಾಳೆ ಕಷ್ಟಪಟ್ಟು ಓದಿದ್ದೆನೆ ವಿದ್ಯಾರ್ಥಿಗಳು‌ ಕೂಡ ಚೊಲ ವಿದ್ಯಾಬ್ಯಾಸ ಮಾಡಿ ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸುವಂತೆ ವಿವೇಕದ ಮಾತುಗಳು ಮೂಲಕ ಸಭೆ‌ ಸಮಾರಂಭಗಳಲ್ಲಿ ಜನಜಾಗೃತಿ ಮೂಡಿಸುತ್ತಿದ್ದರು.

Leave a Reply

Your email address will not be published. Required fields are marked *

You missed

error: Content is protected !!