ಶುಕ್ರದೆಸೆ ನ್ಯೂಸ್

70 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿ‌ ವಿಚಾರ ಸಂಕಿರಣ ಕಾರ್ಯಕ್ರಮ ಮತ್ತು ಎಂ.ರಾಜಪ‌್ಪ‌ವ್ಯಾಸಗೊಂಡನಹಳ್ಳಿ ಸಾಹಿತ್ಯ ರಚನೆಯ ಜಗದಗಲ ಮುಗಿಲಗಲ ಧ್ವನಿ ಸುರುಳಿ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ,
November 28, 2025

ದಾವಣಗೆರೆ, ಇದೆ ತಿಂಗಳ 30ನೇ ತಾರೀಖು ಭಾನುವಾರ 10_30 ಕ್ಕೆ ಜಗಳೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಗದಗಲ ಮುಗಿಲಗಲ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ

ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಕ್ರ ದೆಸೆ ಪತ್ರಿಕೆ ಸಂಪಾದಕ ರಾಜಪ್ಪ ವ್ಯಾಸಗೊಂಡನ ಹಳ್ಳಿ ತಿಳಿಸಿದ್ದಾರೆ.

ಈ ದಿನ ದಾವಣಗೆರೆ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಮಾಡಿ ಮಾತನಾಡಿದ ಅವರು, ನವಂಬರ್ 30.ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ, ಜಗಳೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ, ಬಿ ದೇವೇಂದ್ರಪ್ಪ ಸರ್ ಉದ್ಘಾಟನೆ ಮಾಡಲಿದ್ದಾರೆ,ಹಾಗೆಯೇ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಆದ ಓಬಣ್ಣ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು ,ಜಗದಗಲ ಮುಗಿಲಗಲ ಹಾಡು ಸಂಯೋಜಕ ವೀರು,

ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ, ಹಾಗೂ ಮಾಜಿ ಶಾಸಕ, ಹೆಚ್ ಪಿ ರಾಜೇಶ್, ಕೆ.ಟಿ ಪ್ರಸನ್ನಕುಮಾರ್ ಬಿ.ಟಿ ವಿ.ನ್ಯೂಸ್ ಜನತಾ ವಾಹಿನಿ ನಿರ್ದೇಶಕರು ಹಾಗೂ ಸಂಶೋಧಕರಾದ ಬುರುಡೆ ಕಟ್ಟೆ ಮಂಜಪ್ಪ, ಶಿಕ್ಷಕರಾದ ರಂಗಣ್ಣ .ಮತ್ತು ಮಾಲತೇಶ ಚೊಳಚಗುಡ್ಡ ದೇಸಾಹಿ ಚಲನಚಿತ್ರ ನಿರ್ಮಾಪಕರು,

ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿ ಕುಮಾರ್, ಕೆ ಪಿ ಪಾಲಣ್ಣ, ಹಲವಾರು ಗಣ್ಯಮಾನ್ಯರು ನಾಡು ನುಡಿ ಭಾಷೆ ಉಳಿವಿಗಾಗಿ ಹೋರಾಡಿದ ಗಣ್ಯ ಮಾನ್ಯರಿಗೆ ಸನ್ಮಾನ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ,

ಈ ಸಂದರ್ಭದಲ್ಲಿ, ನಿಬಗೂರು ರಾಜಣ್ಣ ಬಯಲು ಸಿರಿ ಸಾಹಿತ್ಯ ವೇದಿಕೆ ಗೌರವ ಅಧ್ಯಕ್ಷರು, ಹಾಗೂ ಹಿರಿಯ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಪುರಂದರ ಲೋಕಿಕೆರೆ, ಹಾಗೂ ಇತರರು ಇದ್ದರು.

ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ 9902997378

Leave a Reply

Your email address will not be published. Required fields are marked *

You missed

error: Content is protected !!