ಕನ್ನಡ ಮಡಿಲಲ್ಲಿ ಜನಿಸಿದ ನಾವು ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಉತ್ತಮ ವಿದ್ಯಾಬ್ಯಾಸದಿಂದ ಮಾತ್ರ ಉನ್ನತ ಅಧಿಕಾರಿ ಹುದ್ದೆ ಹಿಡಿಯಲು ಸಾದ್ಯ ಶುಕ್ರದೆಸೆ ನ್ಯೂಸ್ ಮೀಡಿಯಾ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಜೆ.ಪಿ ಓಬಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು .
.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ

ಸುದ್ದಿ ಜಗಳೂರು
ಜಗಳೂರು ಪಟ್ಟಣದಲ್ಲಿ‌ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಶುಕ್ರದೆಸೆ ನ್ಯೂಸ್ ಪತ್ರಿಕೆ ಹಾಗೂ ಬಯಲು ಸಿರಿ ಸಾಹಿತ್ಯ ವೇದಿಕೆ ಮತ್ತು ಕಾವೇರಿ ಸಂಸ್ಥೆ ಸಹಯೋಗದಲ್ಲಿ ಜರುಗಿದ 70 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು ನುಡಿ ವಿಚಾರ ಸಂಕಿರಣ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕವಿ ಗೋಷ್ಠಿ .ಮತ್ತು ವಿವಿಧ ಸಾಧಕರ ಸನ್ಮಾನ ಕಾರ್ಯಕ್ರಮವನ್ನ ಉದ್ಗಾಟಿಸಿ ಅವರು ಮಾತನಾಡಿದರು

ಕನ್ನಡ ನಾಡು ನುಡಿ ಎಂದರೆ ಸುಂದರವಾದ ಪ್ರಕೃತಿ, ಶ್ರೀಮಂತ ಇತಿಹಾಸ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಒಳಗೊಂಡ ಕನ್ನಡ ಭಾಷೆ ಸಮೃದ್ದವಾಗಿದೆ ನಮ್ಮ ಕ್ಷೇತ್ರದಲ್ಲಿಯು ಸಹ ಅನೇಕ ಇತಿಹಾಸವಿದೆ..ಈ ಜನ್ಮಭೂಮಿಯಲ್ಲಿ ಜನಿಸಿದ ನಾವು ಸಮಾಜ ಸ್ಮರಿಸುವಂತ ಕೆಲಸ ಮಾಡುವುದೆ ಕನ್ನಡ ಸಂಸ್ಕೃತಿ ಮತ್ತು ಸಂಸ್ಕಾರ ಎಂದು ತಿಳಿಸಿದರು

ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪ ತಾಯಿ ಭುವನೇಶ್ವರಿ ಬಾಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ದೇಶಿಸಿ ಮಾತನಾಡಿದರು ಬಯಲು ಸಿರಿ ಸಾಹಿತ್ಯ ವೇದಿಕೆ ಉದಯೊನ್ಮಖ ಕವಿಗಳ ಮತ್ತು ಗಾಯಕರನ್ನ.ಸಾಧಕರನ್ನ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯವಾಗಿದೆ.
ಶುಕ್ರದೆಸೆ ನ್ಯೂಸ್ ಮೀಡಿಯಾ ಮತ್ತು ಬಯಲು ಸಿರಿ ಸಾಹಿತ್ಯ ವೇದಿಕೆ ಅದ್ಯಕ್ಷ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ ಉತ್ತಮ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟಿದ್ದಾರೆ .ಈ ನೆಲದ ಸಂಸ್ಕೃತಿ ಬಿಂಬಿಸುವ ಸಾಹಿತ್ಯ ರಚಿಸಿ ರಾಗ ಸಂಯೋಜಿಸಿ ದ್ವನಿ ಸುರುಳಿ ಬಿಡುಗಡೆ ಒಂದು ವಿಶೇಷತೆ ಎಂದರು .

ಪಟ್ಟಣ ಪಂಚಾಯಿತಿ ಮಾಜಿ ಅದ್ಯಕ್ಷರಾದ ನಾಗೇಂದ್ರರೆಡ್ಡಿ ಮಾತನಾಡಿ ಕನ್ನಡದ ನೆಲದ‌ ಅಸ್ಮಿತೆಯ‌ ಉಳಿಸಿ ಬೆಳೆಸುವ ಕಾರ್ಯಕ್ರಮಗಳು ನಿತ್ಯೋತ್ಸವವಾಗಬೇಕು ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ಕಾರ್ಯಕ್ರಮಗಳು ಆಗಬಾರದು . ನಿರಂತರ ಕನ್ನಡಿಗರ ಹೆಮ್ಮೆ ಹಬ್ಬವಾಗುವಂತೆ ಸಲಹೇ ನೀಡಿದರು.

ಇತಿಹಾಸ ಸಂಶೋಧಕ ಬುರುಡೆಕಟ್ಟೆ ಮಂಜಪ್ಪ ಮಾತನಾಡಿ ಇತಿಹಾಸ ಪ್ರಸಿದ್ದವಾದ ಜಗಳೂರಿನಲ್ಲಿ ಸಾಕುಷ್ಟು ಸಂಶೋಧನೆಗಳು ಅತ್ಯವಶ್ಯಕವಾಗಿದೆ ಇಲ್ಲಿ ಅಂದು ನೆಲೆಸಿದ್ದ ಮಹಾಲಿಂಗ ರಂಗ ಕವಿ ಇದೆ ಕೊಣಚಗಲ್ ಬೆಟ್ಟದಲ್ಲಿ ತನ್ನ ಜೀವಿತಾ ಅವಧಿ ಕಳೆದಿರುವ ನೆಲೆಯಾಗಿದ್ದು ಅನುಭವ ಅಮೃತದ ಕವಿ ಮೂಲತ ಹುಚ್ಚಂಗಿದುರ್ಗದಲ್ಲಿ ಜನಿಸಿ ಬೆಳೆದಿದ್ದಾರೆ ‌ಇಂತ ಕಾರ್ಯಕ್ರಮಗಳ ಮೂಲಕ ನೈಜಾ ಇತಿಹಾಸ ಹೊರ ಚೆಲ್ಲುವ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಅಯುಕ್ತರಾದ ಜೆ ಪಿ.ಓಬಣ್ಣ ಹಾಗೂ ಅವರ ದರ್ಮ ಪತ್ನಿ ನಾಗವೇಣಿ ದಂಪತಿಗಳು ಹಾಡಿದ ಕನ್ನಡ ಹಾಡಿಗೆ ಜನರ ಚಪ್ಪಾಳೆ ಸುರಿಮಳೆಗೈದವು ಕಾರ್ಯಕ್ರಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಅರ್ಕೆಸ್ಟ್ರಾ ವತಿಯಿಂದ ಸಾಂಸ್ಜೃತಿಕ ಕಾರ್ಯಕ್ರಮ ಜರುಗಿದವು .

ಈ ಸಂದರ್ಭದಲ್ಲಿ ಬೆಂಗಳೂರಿನ ವಾಣಿಜ್ಯೋದ್ಯಮಿಗಳು ನಾಗವೇಣಿ ಜೆ.ಪಿ ಓಬಣ್ಣ.ಬಯಲು ಸಿರಿ ಸಾಹಿತ್ಯ ವೇದಿಕೆ ಗೌರವದ್ಯಕ್ಷ ನಿಬಗೂರು ರಾಜಣ್ಣ. ಶುಕ್ರದೆಸೆ ನ್ಯೂಸ್ ಮೀಡಿಯಾ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ . ಬಿ.ಟಿ.ವಿ.ನ್ಯೂಸ್ ಕೆ.ಟಿ ಪ್ರಸನ್ನಕುಮಾರ್ . .ಶಿಕ್ಷಕ ರಂಗಣ್ಣ ಡಿ .ಎಸ್ ಎಸ್.ಸಂಚಾಲಕ ಕುಬೇರಪ್ಪ. ಪತ್ರಕರ್ತರಾದ ಪುರಂದರ ಲೋಕಿಕೆರೆ.ಅನಂತಕುಮಾರ್.ರೈತ ಸಂಘದ ಚೌಡಮ್ನ . ಕಾವೇರಿ ಸಂಸ್ಥೆ ರವಿಕುಮಾರ್. ಯುವ ಪ್ರಶಸ್ತಿ ಪುರಸ್ಕೃತರು ಬಡಪ್ಪ .ರೈತ ಸಂಘದ ಚೌಡಮ್ಮ.ನಿರೂಪಕಿ ರೇಖಾ .ರೂಪಾ.ಹಾಲೇಶಿ ಸೇರಿದಂತೆ ಭಾಗವಹಿಸಿದ್ದರು

.

Leave a Reply

Your email address will not be published. Required fields are marked *

You missed

error: Content is protected !!