ಕನ್ನಡ ಭಾಷೆಗೆ ತನ್ನದೇಯಾದ ಸ್ಥಾನಮಾನವಿದೆ
ಕನ್ನಡದ ಪ್ರಮುಖ ಕವಿ ಎಂ. ಗೋಪಾಲಕೃಷ್ಣ ಅಡಿಗರು ಸಾಗರದ ಕಾಲೇಜಿನೊಂದರಲ್ಲಿ ಕರ್ತವ್ಯ ನಿರ್ವಹಿಸಿದ ಪುಣ್ಯಭೂಮಿ ಎಂದು ಮಾಜಿ ಕ.ಸಾ.ಪ‌ ಅದ್ಯಕ್ಷರಾದ ವಿ ಗಣೇಶ್ ಅಭಿಪ್ರಾಯಟ್ಟರು.

ಇತ್ತಿಚಿಗೆ ಶಿಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಪವಿತ್ರ ರೆಸ್ಸಿಡೆನ್ಸಿ ಸಭಾಂಗಣದಲ್ಲಿ ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕದ ವತಿಯಿಂದ ಕವಿಗೋಷ್ಠಿ .ಸಾಂಸ್ಕೃತಿಕ ಸಮ್ಮೇಳನ ಮತ್ತು ವಿವಿಧ ಸಾಧಕರ ಸನ್ಮಾನ ಪದಾಧಿಕಾರಿಗಳ ಪದಗ್ರಹಣ.ಸಾಹಿತಿ ರಮಾ ಕಲಘಟಗಿ ರಚಿಸಿದ ಭಾವನೆಗಳ ಬೆಸುಗೆ ಕೃತಿ ಲೋಕಾರ್ಪಣೆ .ಗ್ರಂಥಾಲಯ ಉದ್ಗಾಟನೆ ಕಾರ್ಯಕ್ರಮದಲ್ಲಿ ಉದ್ಗಾಟಿಸಿ ಅವರು ಮಾತನಾಡಿದರು
ಕನ್ನಡ ಸಮೃದ್ದ ಭಾಷೆಯನ್ನ ಮೀರಿಸುವಂತ ಮತ್ತೊಂದು ಯಾವುದು ಇಲ್ಲ ಕನ್ನಡ ಭಾಷೆಯೆ ಕನ್ನಡಕ್ಕೆ ಸರಿಸಾಟಿ ವಿವಿಧ ರೀತಿ ಕಾರ್ಯಕ್ರಮಗಳನ್ನು ಆಯೋಜನೆ ಮೂಲಕ ಕನ್ನಡ ನಾಡು ನುಡಿ ಸಂಪತ್ಭರಿತ‌ ನಾಡಿನಲ್ಲಿ ಅನೇಕ ಸಾಹಿತಿಗಳು ಕನ್ನಡ ಪದ ಭಾಷೆಯನ್ನ ಅವರದ್ದೆ ಆದ ರೀತಿಯಲ್ಲಿ ಉತ್ತಂಗಕ್ಕೆ ಕೊಂಡುಯ್ಯುದಿದ್ದಾರೆ‌ .ಅಂತ ಪ್ರಮುಖ ಕವಿಗಳಲೊಬ್ಬರಾದ ಗೋಪಾಲ ಕೃಷ್ಣ ಅಡಿಗರು ಇಲ್ಲಿನ ಕಾಲೇಜು ಒಂದರಲ್ಲಿ ಕರ್ತವ್ಯ ನಿರ್ವಹಿಸಿ ನೆಲೆದ್ದ ಊರು ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ
, ಹಾ ಮಾ ಸತೀಶ್ ಇವರು ಗಜಲ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು, ಸ್ಟ್ಯಾನಿ ಲೋಪಿಸ್ ಕಾರ್ಗಲ್ . ಗಂಗಾಧರ್ ಅತ್ರಯ್ .ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ‌
ಕುಮಾರಿ ಶಾಂತ ಹೆಚ್ ಹರಪನಹಳ್ಳಿ ಶ್ರೀಮತಿ ಸಹನಾ ಭಟ್ ವಕೀಲರು .

ದೀಪದ ಜೊತೆಗೆ ಮಕ್ಕಳ ಚಂಡೆವಾದ್ಯವು ಉದ್ಘಾಟನೆಗೆ ಸಂಸ್ಥಾಪಕರಾದ ಡಾ ಎಸ್ ವೀರೇಶ್ ಕುಮಾರ್ . ಡಾ ಸ್ಕ್ಯಾನಿ ಲೋಪೀಸ್ .

ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅದ್ಯಕ್ಷರಾದ ವೀರೇಶ್ ರವರು ವಿವಿಧ ಪದಾಧಿಕಾರಿಗಳಿಗೆ ಪದಗ್ರಹಣದ ಮೂಲಕ ಅಧಿಕಾರ ಅಸ್ತಂತರಿಸಿದರು ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ರಮಾ ಕೆ ಕಲಘಟಗಿ, ಕುಮಾರಿ ಶಾಂತ ಹೆಚ್ ವಿಜಯನಗರದ ಜಿಲ್ಲಾಧ್ಯಕ್ಷರಾಗಿ, ಶ್ರೀಮತಿ ನಾಗರತ್ನ ಚೇಗೂರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾಗಿ, ಶ್ರೀಮತಿ ರೇಖಾ ನಾಲ್ವಡ್ ಗದಗ್ ಜಿಲ್ಲೆಯ ಅಧ್ಯಕ್ಷರಾಗಿ ಪದಗ್ರಹಣವನ್ನು ಸ್ವೀಕರಿಸಿದರು
ಎಲ್ಲಾ ಜಿಲ್ಲೆಗಳಿಂದಲೂ ಕವಿಗಳೆಲ್ಲ ಆಗಮಿಸಿ ಕವಿಗೋಷ್ಠಿಯ ಸುಂದರ ಕಾರ್ಯಕ್ರಮವನ್ನು ನಡೆಸಲಾಯಿತು ಮತ್ತು ಅವರಿಗೆ ಗೌರವ ಸನ್ಮಾನವನ್ನು ಕಾರ್ಯಕ್ರಮ ಜರುಗಿತು. ಎಲ್ಲರ ಮುಖದಲ್ಲಿ ಮಂದಹಾಸವು ಮೂಡಿತ್ತು ಇದರ ಜೊತೆಯಲ್ಲಿ ಐದು ಪುಸ್ತಕಗಳ ಲೋಕಾರ್ಪಣೆ ನಡೆಯಿತು ಭಾವನೆಗಳ ಬೆಸುಗೆ ಮತ್ತು ಭಕ್ತಿ ಲಹರಿಯನ್ನು ಶ್ರೀಮತಿ ರಮಾ ಕೆ ಕಲಘಟಗಿ, ಒಂಟಿತನ ಕಾಡುತ್ತಿದೆ ಡಾ ವೀರೇಶ್ ಕುಮಾರ್ , ಹೃದಯದ ಮಾತು ಅಶೋಕ್ ಬೇಳಂಜೆ, ರವಿಕಿರಣಗಳ ಸಂಗಮ ಎಲ್ಲಾ ಕವಿಗಳಂದ. ಈ ೫ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು
ಅಂಬಿಕಾ, ಆಶಾ, ಲೋಕೇಶ್, ಡಾ ವೀರೇಶ್ ಕುಮಾರ್ ಮತ್ತು ರಕ್ಷಾ ಅವರು ಈ ಪುಸ್ತಕಗಳ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ರೇಖಾ ನಿರೂಪಿಸಿದರು
ಈ ಸುಂದರ ಕಾರ್ಯಕ್ರಮವನ್ನು ಸೆರೆಹಿಡಿದ ಚಂದನ ವಾಹಿನಿಯಲ್ಲಿ ಬಿತ್ತರಿಸಿದರು ಪತ್ರಕರ್ತರು ಮತ್ತು ವರದಿಗಾರರಾದ ದೀಪಕ್ ಅವರು. ಮತ್ತು ಈ ಕಾರ್ಯಕ್ರಮಕ್ಕೆ ಶ್ರೀ ಕೃಷ್ಣಮೂರ್ತಿ ಕಲಘಟಗಿಯವರು ತುಂಬಾ ಸಹಕರಿಸಿದರು.

Leave a Reply

Your email address will not be published. Required fields are marked *

You missed

error: Content is protected !!