ದಾವಣಗೆರೆ ಜಿಲ್ಲೆ ಜಗಳೂರು ನ್ಯೂಸ್
ಸಿನೀಯರ್ ಲ್ಯಾಬ್ ಟೆಕ್ನಿಷೀಯನ್ ಮಹಾದೇವಸ್ವಾಮಿಗೆ ಕಣ್ಣು ಕಾಣಿಸುವುದಿಲ್ಲ ಜನರ ಕಾಯಿಲೆ ಬಗ್ಗೆ ಯಾವ ರೀತಿ ಪರೀಕ್ಷೆ ಮಾಡಲು ಸಾದ್ಯ ಬದಲಾವಣೆ ಮಾಡಿ ಎಂದು ಡಿ ಎಚ್ ಓ ರವರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮನವಿ ಮಾಡಿದ್ದಾರೆ.
ಜಗಳೂರು ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಷಣ್ಮುಖಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಮನವಿ ಮಾಡಿಕೊಂಡರು ಲ್ಯಾಬ್ ನಲ್ಲಿ ಅನೇಕ ಮಷಿನ್ ಗಳಿದ್ದು ಸರಿಯಾದ ನಿರ್ವಹಣೆ ಕೊರತೆ ಕಂಡು ಬರಲಿದೆ ಸರಿಪಡಿಸುವಂತೆ ತಿಳಿಸಿದರು
ಮೊಟ್ಟಮೊದಲಿನಿದಾಗಿ ಲ್ಯಾಬ್ ನಲ್ಲಿರುವ ಸಿನೀಯರ್ ಲ್ಯಾಬ್ ಟೆಕ್ನಿಷೀಯನ್ ಮಹಾದೇವಸ್ವಾಮಿಗೆ ಕಣ್ಣು ಕಾಣಿಸುವುದಿಲ್ಲ ಯಾವ ರೀತಿ ಪರಿಕ್ಷೇ ಮಾಡಲು ಸಾದ್ಯ ಶೀಘ್ರವೇ ಬದಲಾವಣೆ ಮಾಡಿ ಎಂದು ಪದಾಧಿಕಾರಿಗಳು ತಿಳಿಸಿದರು
.ಇಲ್ಲಿನ ಟಿ .ಎಚ್ .ಓ ಡಾ ವಿಶ್ವನಾಥ ತಮ್ಮ ಟಿ ಎಚ್ ಓ ಕಛೇರಿ ಸುತ್ತ ಮುತ್ತ ಸ್ವಚತೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಮೊದಲು ಸ್ವಚತೆಗೆ ಮುಂದಾಗಬೇಕೆಂದರು ಸ್ವಚತೆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾದರು ಬೇಜವಾಬ್ದರಿ ಅಧಿಕಾರಿ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿದರು.
ಪ್ರಗತಿಪರ ಸಂಘಟನೆ ಹೋರಾಟಗಾರ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮನವಿ ಮಾಡಿ ಮಾತನಾಡಿದರು . ಜಗಳೂರು ಕ್ಷೇತ್ರ ಹಿಂದೂಳಿದ ಪ್ರದೇಶವಾಗಿದ್ದು ಇಲ್ಲಿ ಹೆಚ್ಚು ಬಡವರ್ಗದ ಜನರು ಸಾರ್ವಜನಿಕ ಅಸ್ಪತ್ರೆಯನ್ನ ಅವಲಂಭಿಸಿ ಬರುವಂತ ಅನೇಕ ಗರ್ಭಿಣಿ ಬಾಣಂತಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮಷಿನ್ ಗಳು ಇದ್ದರು ಸ್ಕ್ಯಾನಿಂಗ್ ತಜ್ಘರ ಕೊರತೆಯಿಂದ ಖಾಸಗಿ ಲ್ಯಾಬ್ ನಲ್ಲಿ ಮಾರುಹೋಗಿ ದುಪ್ಪಟ ಹಣ ಕೊಟ್ಟು ಸ್ಕ್ಯಾನಿಂಗ್ ಮಾಡಿಸುವ ಅನಿವಾರ್ಯತೆ ಇದೆ ತಾವುಗಳು ಶೀಘ್ರವೇ ಸರಿಪಡಿಸುವಂತೆ ಮನವಿ ಮಾಡಿಕೊಳ್ಳಲಾಯಿತು.
ಮಾನವ ಹಕ್ಕುಗಳ ಹೋರಾಟ ಸಮಿತಿ ತಾಲ್ಲೂಕು ಅದ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಲ್ಯಾಬ್ ನಲ್ಲಿ ಕೆಲ ಕಾಯಿಲೆ ಬಗ್ಗೆ ಪರಿಕ್ಷೇಗಳು ರೋಗಿಗಳಿಗೆ ಸಿಗದೇ ಜಿಲ್ಲಾ ಕೇಂದ್ರಗಳಿಗೆ ಜನರು ತೆರಳುತ್ತಾರೆ. ಆಸ್ಪತ್ರೆಯಲ್ಲಿ ಮಳೆಗಾಲದಲ್ಲಿ ಬಿಲ್ಡಿಂಗ್ ನ ಮೇಲಿಂದ ಮಳೆ ನೀರು ವಾರ್ಡಗಳಿಗೆ ಹರಿದುಹೊಗಲಿವೆ ಶಾಶ್ವತ ಪರಿಹಾರ ನೀಡಬೇಕು ಹೆಚ್. ಬಿ.ಎ.ಒನ್ ಸಿ .ಪರೀಕ್ಷೆಗಳು ನಡೆಸುವುದಿಲ್ಲ ದಿನಾಂಕ ಅವಧಿ ಮುಗಿದ ತಕ್ಷಣ ಕಸದ ಬುಟ್ಟಿಗೆ ಎಸೆಯುವರು ಎಂದು ಆರೋಪಿಸಿದರು.
ಸಂಘಟಕರ ಮನವಿಗೆ ಸ್ವಂದಿಸಿದ ಡಿ .ಎಚ್. ಓ ಇಲ್ಲಿನ ಸಮಸ್ಯೆಗಳಿಗೆ ಅಂತ ಅಂತವಾಗಿ ಪರಿಹರಿಸುವುದಾಗಿ ಪ್ರತಿಕ್ರಿಯೆಸಿ ನಂತರ ಆಸ್ಪತ್ರೆಯ ವಿವಿಧ ವಾರ್ಡಗಳಿಗೆ ತೆರಳಿ ಪರಿಶೀಲನೆ ನಡೆಸಿದರು ಜನರಿಗೆ ಸಿಗುವಂತ ಸೌಲಭ್ಯಗಳನ್ನ ಸಮರ್ಪಕವಾಗಿ ಒದಗಿಸುವಂತೆ ಜಿಲ್ಲಾ ಡಿ ಎಚ್ ಓ ಅಧಿಕಾರಿ ಷಣ್ಮುಖಪ್ಪರವರು ಸಿಬ್ಬಂದಿಗಳಿಗೆ ಸಲಹೇ ನೀಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಘವೇಂದ್ರ ವೈದ್ಯರಾದ ಜಗನಾಥ ಹಾಗೂ ಸಿಬ್ಬಂದಿ ಸೇರಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ
ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ. ಜಿ. ಟಿ ಉಪಾಧ್ಯಕ್ಷ . ಸಿದ್ದೇಶ. ಕೆ ಎಸ್. ಜಂಟಿ ಕಾರ್ಯದರ್ಶಿ ಡಿ ವಿ ನಾಗರಾಜ್, ಜಿಲ್ಲಾ ಮಾಧ್ಯಮ ಘಟಕದ ಅಧ್ಯಕ್ಷ ಎಂ.ಡಿ ಅಬ್ದುಲ್ ರಖೀಬ್.ಜನಾಪರ ವೇದಿಕೆ ರಹಮತ್ ,ಸೇರಿದಂತೆ ಹಾಜುರಿದ್ದರು
