ಮಕ್ಕಳ‌ ರಕ್ಷಣೆ ಆರೋಗ್ಯ ಶಿಕ್ಷಣ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಅಗತ್ಯ ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ಡಾ. ರೆಜಿ ಜೇಕಬ್ ಸಲಹೇ ನೀಡಿದರು.

By: shukradeshe news
Kannada online portel news
Date:

13 December 2025,
ಜಗಳೂರು ಪಟ್ಟಣದ ನವಚೇತನ ಶಾಲಾ ಸಭಾಂಗಣದಲ್ಲಿ ಡಾನ್ ಬಾಸ್ಕೋ ಬಾಲಕಾರ್ಮಿಕರ ದಾವಣಗೆರೆ ಬ್ರೆಡ್ಸ್ ಸಂಸ್ಥೆ‌ ಬೆಂಗಳೂರು ಹಾಗೂ ಪ್ರಗತಿಪರ ಸ್ವಯಂ‌ ಸೇವಾ ಸಂಸ್ಥೆಗಳ‌ ಸಂಯುಕ್ತಾಶ್ರಯದಲ್ಲಿ‌ ಜರುಗಿದ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ದತ್ತು ಸ್ವೀಕಾರ ನೀಯಮ ಸೇರಿದಂತೆ ವಿವಿಧ ಜಾಗೃತಿ ಸಭೆಯ ಉದ್ಗಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳ ಆರೋಗ್ಯ ಶಿಕ್ಷಣ ಮಕ್ಕಳ ರಕ್ಷಣೆಯ ಹಕ್ಕು ಸಮಾನತೆಯ
ಹಕ್ಕುಗಳು ಮತ್ತು ರಕ್ಷಣೆ ಪ್ರತಿಯೊಬ್ಬ ಮಗುವಿಗೂ ಸುರಕ್ಷಿತ, ಆರೋಗ್ಯಕರ ಮತ್ತು ಸಮಾನ ಅವಕಾಶಗಳೊಂದಿಗೆ ಬೆಳೆಯಲು ಆವಕಾಶ ಕಲ್ಪಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ, ನಿಂದನೆ ಆಪರಾಧ ತಡೆದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಿ ಸಮಾನ ಆವಕಾಶ ಕಲ್ಪಿಸಬೇಕು ಎಂದರು

ಡಾನ್ ಬಾಸ್ಕೊ ಸಂಸ್ಥೆ ಸಂಯೋಜಕರು ಹಿರೇನಾಯ್ಕ್ ಮಾತನಾಡಿ ದತ್ತು ಮತ್ತು ಪೋಷಕತ್ವದ ದತ್ತು ಪಡೆಯಲು ಆರ್ಹತೆ ಬೆಕು 40 ವರ್ಷಗಳ ನಂತರ ಮಹಿಳೆ ಇಚ್ಚಶಕ್ತಿಯಿಂದ ರಾಜ್ಯ ಮತ್ತು ಕೇಂದ್ರ ದತ್ತು ಸಂಪನ್ಮೋಲ ಕೇಂದ್ರದಲ್ಲಿ ಮತ್ತು ಸಾರ. ಪಂಚರಾಜ್ಯದ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಿ ದತ್ತು ಪಡೆಯುಬಹುದು ದತ್ತು ಪಡೆಯಲು ಗಂಡ ಹೆಂಡತಿ ದಂಪತಿಗಳು ಸದೃಡ ಆರೋಗ್ಯವಂತರಾಗಿರಬೇಕು.ಸ್ವಂತ ಉದ್ಯೋಗ ಹೊಂದಿರಬೇಕು.ದತ್ತು ಪಡೆಯಲು ಕನಿಷ್ಠ ದಂಪತಿಗಳು 15 ಸಾವಿರ ಸಂಬಳ ದುಡಿಯಬೇಕು.ಅನೇಕ ನೀಯಮಗಳ ಪಾಲನೆ ಮೂಲಕ ದತ್ತು ಪಡೆಯಬಹುದು ಅಭಿಪ್ರಾಯಪಟ್ಟರು.


ಸಿ.ಡಿ.ಪಿ.ಓ ಇಲಾಖೆ ಮೇಲ್ವಾಚಾರಕಿ ಶಾಂತಮ್ಮ ಮಾಹಿತಿ‌ ನೀಡಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಎಷ್ಟೇ ಜಾಗೃತಿ ಮೂಡಿಸಿದರು ಸಹ ಬಾಲವಿವಾಹ ಪದ್ದತಿ ಸಂಪೂರ್ಣವಾಗಿ‌ ನಿಷೇದ್ದವಾಗುತ್ತಿಲ್ಲ ಹೆಚ್ಚು ಮೋಬೈಲ್ ಪೊನ್ ಬಳಕೆಯಿಂದ ಬಾಲ್ಯವಿವಾಹಗಳು ನಡೆಯಲಿವೆ.ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಅಭಿಪ್ರಾಯಟ್ಟರು .


ಪ್ರೇರಣ ಚರ್ಚ ಮುಖ್ಯಸ್ಥರು ಪಾದರ್ ಸೆಲ್ವರ್ ಸ್ಟರ್ ಪ್ರಾಸ್ತವಿಕವಾಗಿ ಮಾತನಾಡಿ ಪ್ರಗತಿಪರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಾಮಾಜದಲ್ಲಿ ನಡೆಯುವ ಅವ್ಯವಸ್ಥೆಗಳ ಬಗ್ಗೆ ಚರ್ಚೆ ನಿರ್ಣಯ ಮೂಲಕ ಪರಿಹಾರ ಕಂಡುಕೊಳ್ಳುವ ವಿಶಿಷ್ಟ ಸಭೆಯಾಗಿದೆ .


ಪತ್ರಕರ್ತ‌ ಪ್ರಗತಿಪರ ಹೋರಾಟಗಾರ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ತಂತ್ರಜ್ಘಾನ 21 ನೇ ಶತಮಾನದ ಕಾಲಘಟದಲ್ಲೂ ಜಾತಿ ವ್ಯವಸ್ಥೆ ಮೌಡ್ಯ ಕಂದಚಾರಗಳು ಸಮಾಜದಲ್ಲಿ ಅತ್ಯಚಾರ ಮಹಿಳೆಯರ ಮೇಲಿನ ದೌರ್ಜನ್ಯಗಳು ವ್ಯಾಪಕವಾಗಿ ನಡೆಯುತ್ತಿವೆ .ಸರ್ಕಾರ ಮತ್ತು ಸ್ಚಯಂ ಸೇವಾ ಸಂಘ ಸಂಸ್ಥೆಗಳು ಸಾಮಾಜಿಕ ಅನಿಷ್ಟ ಪದ್ದತಿಗಳ ನಿರ್ಮೂಲನೆಗಾಗಿ ಹೋರಾಟ ಮಾಡುತ್ತಿದ್ದರು ಸಂಪೂರ್ಣವಾಗಿ ತೋಲಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು

.ಈ ಸಂದರ್ಭದಲ್ಲಿ ಆಲ್ ಪಾತೀಮ ಸಂಸ್ಥೆ ಶಾಹಿನ್ ಬೇಗಂ.ಕಾವೇರಿ ಸಂಸ್ಥೆ ರವಿಕುಮಾರ್. ಡಾನ್ ಬಾಸ್ಕೊ ಸಂಸ್ಥೆ ಸಂಯೋಜಕ ನಟರಾಜ್.ಡಾನ್ ಬಾಸ್ಕೋ ಸಂಸ್ಥೆ ಲೋಕಮ್ಮ ಮಾರನಾಯ್ಕ್ .ಜನಸಂಕಲ್ಪ ಸಂಸ್ಥೆ ಮಹಮದ್ ರಪಿಕ್ ಸೇರಿದಂತೆ ಹಾಜುರಿದ್ದರು..ಪ್ರಾರ್ಥನೆ ರೇಣುಕಮ್ಮ ಅನೂಸಯಮ್ಮ ವಂದಿಸಿದರು.ಟೂಷನ್ ಶಿಕ್ಷಕಿಯರು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!