ಚಿಕ್ಕಮ್ಮನಹಟ್ಟಿ ಗ್ರಾಮವನ್ನ ಸುಂದರ ನಂದನ ವನವನ್ನಾಗಿ ಅಭಿವೃದ್ದಿಗೆ ಪೂರಕವಾಗಿ ಸ್ವರ್ಗದಂತೆ ನಿರ್ಮಿಸಿರುವ ಶಾಸಕ ಬಿ ದೇವೇಂದ್ರಪ್ಪ ಪೂಜಾರಜ್ಜ ಮಹಾದ್ವಾರವನ್ನ ನಿರ್ಮಿಸಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಚಿತ್ರದುರ್ಗದ ಗೊಲ್ಲಗಿರಿ ಶ್ರೀ ಕೃಷ್ಣಯಾದವನಂದ ಸ್ವಾಮಿಜಿ ಹೇಳಿದರು.
ಸುದ್ದಿ ಜಗಳೂರು
ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ನಡೆಯುವ
ದುರ್ಗಾಂಬಿಕಾ ಜಾತ್ರಮಹೋತ್ಸವದ ಅಂಗವಾಗಿ ನೂತನ ಮಹಾದ್ವರಾ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಭಯ ಸ್ವಾಮಿಜಿಗಳಾದ ಗೊಲ್ಲಗಿರಿ ಚಿತ್ರದುರ್ಗ ಶ್ರೀ ಕೃಷ್ಣಯಾದವನಂದ ಸ್ವಾಮಿಜಿ ಹಾಗೂ ಶ್ರೀ ಕಣ್ವಕುಪ್ಪೆ ನಾಲ್ವಡಿ ಶಾಂತಲಿಂಗ ಶಿವಾಚರ್ಯ ಸ್ವಾಮಿಜಿ ನೂತನ ಮಹಾದ್ವಾರ ಉದ್ಘಾಟನೆ ಮಾಡಿ ಅಶಿರ್ವಾಚನ ನೀಡಿದರು .
ಶಾಸಕರ ಗ್ರಾಮದಲ್ಲಿ ನಡೆಯುವ ಜಾತ್ರಮಹೋತ್ಸವ ಕರ್ನಾಟಕದಲ್ಲಿ ಅತ್ಯಂತ ಅದ್ದೂರಿ ಜಾತ್ರಮಹೋತ್ಸವವಾಗಿದೆ.ಗ್ರಾಮಕ್ಕೆ ಸುಂದರವಾದ ಕೆರೆ ನಿರ್ಮಾಣ ದೇವಾಸ್ಥಾನ ನಿರ್ಮಾಣ ಸೇರಿದಂತೆ ಮಾದರಿ ಸ್ಕೂಲ್ ನಿರ್ಮಾಣ ಇನ್ನಿತರೆ ಸೌಲಭ್ಯಗಳಿಂದ ಇದೀಗ ಮಾದರಿ ಗ್ರಾಮವಾಗಿ ಕಂಗೋಳಿಸುತ್ತಿದೆ .ಶ್ರೀ ಕೃಷ್ಣಯಾದವನಂದ ಸ್ವಾಮಿಜಿ ಹೇಳಿದರು
ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಅಶಿರ್ವಾಚನ ನೀಡಿದರು ಶಾಸಕರಾದ ಬಿ.ದೇವೇಂದ್ರಪ್ಪರವರು ಬಂದ ಸಂಕಷ್ಟಗಳನ್ನ ಮೆಟ್ಟಿ ನಿಂತು ಹೋರಾಟದ ಬದುಕಿನೊಂದಿಗೆ ಉನ್ನತ ಸ್ಥಾನಕ್ಕೆ ಬೆಳೆದು ಜಗಳೂರು ಕ್ಷೇತ್ರ ಅಭಿವೃದ್ದಿ ಜೊತೆ ಜೊತೆಗೆ ಅವರು ಜನಿಸಿದ ಗ್ರಾಮವನ್ನ ಸ್ವರ್ಗದಂತೆ ನಿರ್ಮಿಸಿರುವ ದೂರದೃಷ್ಠಿ ಚಿಂತನೆಗೆ ಸಾಕ್ಷಿಯಾಗಿದ್ದಾರೆ. ಗ್ರಾಮದಲ್ಲಿ ನಿರ್ಮಿಸಿರುವ ಕೆರೆ ಮಿನಿ ಕಲ್ಯಾಣಿಯಂತೆ ಅಭಿವೃದ್ದಿಪಡಿಸಿ ರಾಜ್ಯದಲ್ಲಿಯೇ ಆದರ್ಶ ಶಾಸಕರಾಗಿದ್ದಾರೆ ಎಂದು ಬಣ್ಣಿಸಿದರು . ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾ ಸಂಸ್ಕಾರ ಮಾನವೀಯ ಮೌಲ್ಯಗಳನ್ನ ಧಾರೆ ಎರೆಯಬೇಕೆಂದು ಕಿವಿ ಮಾತು ಹೇಳಿದರು.
ಶಾಸಕ ಬಿ ದೇವೇಂದ್ರಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು ಶ್ರೀ ಪೂಜಾರಜ್ಜ ನೂತನ ಮಹಾದ್ವಾರ ಲೋಕಾರ್ಪಣೆಯಿಂದ ಆ ದೇವರೆ ಧರೆಗೆ ಇಳಿದಂತಾಗಿದೆ . ಗ್ರಾಮಸ್ಥರ ಮತ್ತು ಸದ್ಬಕ್ತರ ಸಹಕಾರದಿಂದ ಪೂಜಾರಜ್ಜನ ಮಹಾದ್ವಾರ ನಿರ್ಮಿಸಿದ್ದು ಆ ಪರಮಾತ್ಮ ನೆಲಸಿರುವಂತಹ ಜಾಗವೇ ಕೈಲಾಸ ರೂಪದಲ್ಲಿದೆ. ಒಂದು ಸುಂದರವಾದ ಜಾಗದಲ್ಲಿ ಶ್ರೀ ಪೂಜಾರಜ್ಜ ನೆಲೆಸಿ ಭಕ್ತರ ಕಣ್ಮನ ಸೆಳೆದಿರುವುದಕ್ಕೆ ಭಕ್ತರು ಸಾಲು ಸಾಲಾಗಿ ಹೋಗುವುದೇ ಪವಾಡ ಸದೃಶ್ಯವಾಗಿದೆ.ಉಭಯ ಸ್ವಾಮಿಜಿಗಳು ನಮ್ಮ ಗ್ರಾಮಕ್ಕೆ ಅಶಿರ್ವಾದಿಂದ ಸಮೃದ್ದ ಮಳೆ ಬೆಳೆಯಾಗಿ ಸನ್ಮಾರ್ಗಕ್ಕೆ ದಾರಿ ತೋರಿಸಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೇಸ್ ಎಸ್ಟಿ ಘಟಕದ ಪ್ರಧಾನಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್. ಉಪಾನ್ಯಾಸಕರಾದ ರಾಣಿ.ಗ್ರಾಮ ಪಂಚಾಯಿತಿ ಅದ್ಯಕ್ಷರ ಪತಿ ಮಾರಪ್ಪ . ಸಾಹಿತಿ ಎನ್ ಟಿ.ಎರ್ರಿಸ್ವಾಮಿ. ಗ್ರಾಮ ಪಂಚಾಯಿತಿ ಸದಸ್ಯರಾದ ಓ ಮಂಜಣ್ಣ. ಶ್ರೀಮತಿ ಸುಧಾಮಣಿ ಕಾಟಪ್ಪ.ಕೆಂಗಮ್ಮ ಕೃಷ್ಣಪ್ಪ. ಗ್ರಾಮಸ್ಥರಾದ ಹನುಮಂತಪ್ಪ. ಕಾಟಪ್ಪ .ಪಿಡಿಓ ವಾಸು ಸೇರಿದಂತೆ ಮುಂತಾದವರು ಹಾಜುರಿದ್ದರು.

ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಹಿಳೆಯರಿಂದ ಕುಂಭಮೇಳ ಜರುಗಿತು

