ಮಾಜಿ ಶಾಸಕ ಎಸ್ ವಿ ಆರ್ ಹುಟ್ಟುಹಬ್ಬದ ಅಂಗವಾಗಿ ನೋಟ್ ಬುಕ್ , ಪೆನ್ ವಿತರಣೆ.

ಸುದ್ದಿ,
ಜಗಳೂರು, ಜ.16:ತಾಲ್ಲೂಕಿನ‌‌‌ ತುಪ್ಪದಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪರವರ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್ ವಿತರಿಸಿ ನಂತರ ಮಾತನಾಡಿದರು.

ಬಿಜೆಪಿ ಯುವಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿದರು,ಸಿರಿಗೆರೆ ಶ್ರೀಗಳ ಸಂಕಲ್ಪದ 57ಕೆರೆ ತುಂಬಿಸುವ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳು ತಾಲ್ಲೂಕಿನಲ್ಲಿ ಸಕಾರಗೊಳ್ಳಲು ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಕೊಡುಗೆ ಆಪಾರ
ಜಗಳೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಅನೇಕ ಬಹುಪಾಲು ಅಭಿವೃದ್ದಿ ಕಾರ್ಯಗಳಲ್ಲಿ ಅವರ ಶ್ರಮವಿದೆ.ವಸತಿರಹಿತರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಮನೆಗಳನ್ನು ನೀಡಿದ್ದಾರೆ.ಆರ್ಥಿಕ ನೆರವಿನೊಂದಿಗೆ ಬಡವರ ಕಷ್ಟಕ್ಕೆ ಮಿಡಿಯುವ ಅಂತಃಕರಣವಿದೆ .

ಜನಪರ ನಾಯಕರಿಗೆ ಹುಟ್ಟು ಹಬ್ಬದಂದು ಕನ್ನಡ ಶಾಲಾ ಮಕ್ಕಳಿಗೆ ಸ್ನೇಹಿತ ಪೂಜಾರ್ ಸಿದ್ದಪ್ಪ ನೇತೃತ್ವದಲ್ಲಿ ನೊಟ್ ವಿತರಣೆ ಶ್ಲಾಘನೀಯವಾಗಿದ್ದು ಮಾಜಿ ಶಾಸಕರಿಗೆ ಆರೊಗ್ಯ,ಆಯುಷ್ಯ,ಐಶ್ವರ್ಯ ಲಭಿಸಲಿ.ತಾಲ್ಲೂಕಿನಲ್ಲಿ ಅತ್ಯಂತ ಅಭಿಮಾನದಿಂದ ನನ್ನನ್ನು ನಾಯಕನನ್ನಾಗಿಸಿದ ಜನರ ಆಶೀರ್ವಾದಕ್ಕೆ ಚಿರ ಋಣಿಯಾಗಿರುವೆ.ಜಾತ್ಯಾತೀತವಾಗಿ ಸಾಮರಸ್ಯತೆಯಿಂದ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸೋಣ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಬಾಬು ಬಿಸ್ತುವಳ್ಳಿ

ಬಿಜೆಪಿ ಮಂಡಲ ಉಪಾಧ್ಯಕ್ಷ ಪೂಜಾರ ಸಿದ್ದಪ್ಪ ಮಾತನಾಡಿ,ಮಾಜಿ ಶಾಸಕ ರಾಮಚಂದ್ರಪ್ಪ ಅವರು ನನ್ನಂತಹ ಸಾವಿರಾರು ಸಾಮಾನ್ಯ ಕುಟುಂಬದ ಯುವಕರಿಗೆ ನಾಯಕತ್ವ ಬೆಳೆಸಿ ಸ್ಪೂರ್ತಿಯಾಗಿದ್ದಾರೆ.

ಅವರ ಅವಧಿಯಲ್ಲಿ ತುಪ್ಪದಹಳ್ಳಿ ಅಸಗೂಡು ಮಾರ್ಗಕ್ಕೆ 2.5 ಕೋಟಿ ರೂಪಾಯಿ ವೆಚ್ಚದ ಡಾಂಬರೀಕರಣ ರಸ್ತೆ,ಗ್ರಾಮದ ಪ್ರತಿ ಕಾಲೋನಿಗಳಲ್ಲಿ ಸಿಸಿ ರಸ್ತೆ,ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಪಡಿಸಿದ್ದಾರೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂತ್ರಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಪತ್ರಕರ್ತ ಸಾಹಿತಿ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಗತ್ಯ ಪಠ್ಯ ಪರಿಕರಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಪೂಜಾರ ಸಿದ್ದಪ್ಪ ಅವರಿಗೆ ಮಾಜಿ ಶಾಸಕ ಎಸ್.ವಿ‌.ರಾಮಚಂದ್ರಪ್ಪ ಅವರ ಶ್ರೀ‌ರಕ್ಷೆಯಿದೆ.ಅಂಬೇಡ್ಕರ್ ಆಶಯದಂತೆ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯ,ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ವೇಳೆ ಶಾಲಾವರಣದಲ್ಲಿ ಸಸಿ ನೆಡಲಾಯಿತು. ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪ್ರೇಮ,ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ದಿ ಸಂಘದ ಎಚ್.ಆರ್.ಬಸವರಾಜ್,ಗ್ರಾ.ಪಂ ಸದಸ್ಯ ಅಸಗೋಡು ರವಿಕುಮಾರ್,ಮುಖಂಡರಾದ ಎಚ್.ಆರ್. ಬಸವರಾಜ್ .ರಮೇಶ್,ಮೆದಗಿನಕೆರೆ ಹನುಮಂತಪ್ಪ ಸುಭಾಷ್,ಮರುಳಸಿದ್ದಪ್ಪ,ಮಂಜಣ್ಣ,ಮಡ್ರಹಳ್ಳಿ ಪ್ರದೀಪ್,ಸಾಕಮ್ಮ,ಹಾಲಮ್ಮ, ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You missed

error: Content is protected !!