ಐತಿಹಾಸಿಕ ಕಣ್ವಕುಪ್ಪೆ ಗವಿಮಠದ ರಥೋತ್ಸವ ನಾಡಿನ ಸದ್ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು
ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿ ಮಠದಲ್ಲಿ ಮಕರ ಸಂಕ್ರಾಂತಿ ದಿನದಂದು ಐತಿಹಾಸಿಕ ಶ್ರೀ ಕಣ್ವಕುಪ್ಪೆ ಗವಿ ಶಾಂತಲಿಂಗ ಸ್ವಾಮಿ ರಥೋತ್ಸವಕ್ಕೆ
ಶ್ರೀ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಚಾಲನೆ ನೀಡಿದರು
ನಂತರ ಧರ್ಮಸಭೆ ನಡೆಸಿದರು. ಮುಂದಿನ ಮಳೆ ಬೆಳೆ ಉತ್ತಮವಾಗಿ ಸಾಗಲಿ ಎಂದು ಪೂಜಾ ಕೈಂಕಾರ್ಯಗಳ ಮೂಲಕ ಸಮಸ್ತ ನಾಡಿನ ಸಮಸ್ತ ಸಹಸ್ರಾರು ಭಕ್ತರು ಭಾಯಾಗಿದ್ದರು.
ಹಾಲಿ ಶಾಸಕ ಬಿ.ದೇವೇಂದ್ರಪ್ಪ ಶ್ರೀಗಳ ಅಶಿರ್ವಾದ ಪಡೆದರು. ವಿವಿಧ ರಾಜಕೀಯ ಪ್ರಮುಖರು ಭಾಗವಹಿಸಿದ್ದರು.
ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆತವಾಗಿ ಕಲ್ಪಿಸಲಾಯಿತ್ತು.
ಗುರು ಶಾಂತಲಿಂಗ ಸ್ವಾಮಿ ರಥೋತ್ಸವ ನಾಡಿನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಜಗಳೂರು: ತಾಲ್ಲೂಕಿನ ಕಣ್ವಕುಪ್ಪೆ ಗವಿ ಮಠದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ದಾವಣಗೆರೆ, ಚಿತ್ರದುರ್ಗ, ವಿಜನಗರ ಜಿಲ್ಲೆಗಳವ ಭಕ್ತಾದಿಗಳು ಸೇರಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮಠದ ಆವರಣದಲ್ಲಿ ಭಕ್ತರ ಜಯಘೋಷಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ಬಾಳೆಹಣ್ಣು, ಹೂ ಮತ್ತು ಪತ್ರೆಯನ್ನು ರಥದ ಕಳಶಕ್ಕೆ ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಹಾಲಿ ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ,,ಮಾಜಿ ಶಾಸಕ ಹೆಚ್ ಪಿ ರಾಜೇಶ್.ಕೆ ಪಿ ಪಾಲಯ್ಯ . ಸೇರಿದಂತೆ ಗಣ್ಯರು ರಾಜಕೀಯ ಪ್ರಮುಖರು ರೈತಾಪಿ ವರ್ಗದ ಜನರು ಅನೇಕ ಭಕ್ತರು ಭಾಗಿಯಾಗಿದ್ದರು.


