ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ವಿಜಿ ರಾಮಜಿ ಹೆಸರು ಬದಲಾವಣೆ ಇದೊಂದು ರಾಜಕೀಯ ಬಣ್ಣ ಲೇಪನ ಶಾಸಕ ಬಿ .ದೇವೇಂದ್ರಪ್ಪ ವಾಗ್ದಾಳಿ ನಡೆಸಿದರು.
ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದಲ್ಲಿ 20 ಲಕ್ಷ ರೂಗಳಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಶಂಕುಸ್ಥಾಪನೆ ಹಾಗೂ ಸುಮಾರು 13 ಲಕ್ಷ ರೂಗಳ ಅಂಗನವಾಡಿ ಕಟ್ಟಡ ಲೋಕಾರ್ಪಣೆ ವೇದಿಕೆ ಸಮಾರಂಭ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಕಾಂಗ್ರೇಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಕೇಂದ್ರ ಅಂದು ರಾಷ್ಟೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಡಿಯಲ್ಲಿ ಗ್ರಾಮೀಣ ಬಾಗದ ಬಡವರಿಗೆ ಕೂಲಿ ಕೆಲಸ ಅತ್ಯಂತ ಅಸರೆಯಾಗಿ ಬಡವರ ಆರ್ಥಿಕ ಬಲ ತುಂಬುವ ವಿಶಿಷ್ಟ ಯೋಜನೆ ವರದಾನವಾದ ಯೋಜನೆಗೆ ಇದೀಗ ರಾಜಕೀಯ ಬಣ್ಣ ಲೇಪನ ಮಾಡಿ ವಿಜಿ ರಾಮಜಿ ಎಂಬ ಹೆಸರು ಬದಲಾವಣೆ ಮಾಡಿರುವುದು ಖಂಡನೀಯವಾಗಿದೆ.
ಅಸಗೋಡು ಗ್ರಾಮದ ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲು ಜಿಲ್ಲಾ ಪಂಚಾಯತ್ ಅನುದಾನ ಸೇರಿದಂತೆ ವಿವಿಧ ಅನುದಾನ ಬಳಕೆ ಮಾಡಿಕೊಂಡು ಮಾದರಿ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ದಿ ಸೇರಿದಂತೆ ಸಮರ್ಪಕವಾಗಿ 57 ಕೆರೆ ತುಂಬಿಸುವ ಯೋಜನೆ ಸಾರ್ಥಕವಾಗಿದ್ದು ಜನರ ಕಣ್ಣೀರು ಹೊರೆಸುವ ಸರ್ಕಾರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದರಿ ಆಡಳಿತಕ್ಕೆ ಸಾಕ್ಷಿಯಾಗಿ
ಪ್ರತಿಯೊಬ್ಬರು ಸ್ಮರಿಸಿಕೊಳ್ಳುವುದು ಅತ್ಯವಶ್ಯ ಬಡವರ ಬದುಕುನ್ನ ಅಸನಾಗಿಸುವ ಜನ ಸೇವೆಯೇ ಜನಾರ್ಧನ ಸೇವೆ ಎಂದರು
ಬ್ರಾಹ್ಮಣ ಅಭಿವೃದ್ದಿ ನಿಗಮ ಅದ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಯಿಂದ ಬಡ ಕಲ್ಯಾಣಕ್ಕೆ ವರವಾಗಿದೆ ಎಂದರು
ಜಿಪಂ ಸಿಇಓ ಮಾತನಾಡಿ ಬೆಳಗಿನ ನಡೆ ಗ್ರಾಮದ ಕಡೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳಿಗೆ ಸ್ವಂದಿಸಿ ಕೆಲಸ ಮಾಡುತ್ತಿದ್ದು ಪ್ರತಿ ನಿತ್ಯ ಒಂದು ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚುರುಕು ಮುಟ್ಟಿಸಿದ್ದೆವೆ.
ಈ ಸಂದರ್ಭದಲ್ಲಿ ತಾಪಂ ಇಓ ಕೆಂಚಪ್ಪ.ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಷಂಷೀರ್ ಆಹಮದ್. ಮಾಜಿ ಜಿಪಂ ಸದಸ್ಯ ಕೆಪಿ ಪಾಲಯ್ಯ. ಗ್ರಾಮ ಪಂಚಾಯಿತಿ ಅದ್ಯಕ್ಷೆ ರಾಧಮ್ಮ ಕುಬೇರಪ್ಪ.ಪಿಡಿಓ ಮರುಳಸಿದ್ದಪ್ಪ..ಗ್ರಾಪಂ ಉಪಾದ್ಯಕ್ಷರಾದ ಲಲಿತಮ್ಮ ಗುಡದಯ್ಯ.ನಿವೃತ್ತ ಅಧಿಕಾರಿ ಬಿ.ಮಹೇಶ್ ಪಂಚಾಯತ್ ರಾಜ್ ಇಲಾಖೆ ಎಇಇ ಶಿವಮೂರ್ತಿ .ಮಾಜಿ ಅದ್ಯಕ್ಷರಾದ ನಾಗಮ್ಮ.ಶಂಭುಲಿಗೇಶ್ವರ ದೆವಾಸ್ತಾನ ಅದ್ಯಕ್ಷ ಲೋಕಣ್ಣ. ಗ್ರಾಪಂ ಸದಸ್ಯರು. ಸೇರಿದಂತೆ ಗ್ರಾಮಸ್ಥರು ಹಾಜುರಿದ್ದರು.

