ಜಗಳೂರು ಶುಕ್ರದೆಸೆ ನ್ಯೂಸ್.

ದೇಶ ಆಳುವ ನೆಪದಲ್ಲಿ ಸಂವಿಧಾನವನ್ನ ನಾಶಪಡಿಸುವ ಷಡ್ಯಂತ್ರ ಸಂವಿಧಾನ ಅಪಾಯದಲ್ಲಿದೆ. ಸಂವಿಧಾನದ ಉಳುವಿಗೆ ಕಾಂಗ್ರೇಸ್ ಅನಿವಾರ್ಯ ಶಾಸಕ ಬಿ ದೇವೇಂದ್ರಪ್ಪ

ರಾಜಪ್ರಭುತ್ವಕ್ಕೆ ನಾಂದಿ ಹಾಡಿ ಸ್ವಾತ್ಯಂತ್ರವಾಗಿ ಬದುಕಲು ದೇಶದ ಸಂವಿಧಾನವೇ ನಮ್ಮ ಧರ್ಮಗ್ರಂಥ ಶಾಸಕ ಬಿ.ದೇವೇಂದ್ರಪ್ಪ.

ಜಗಳೂರು ಪಟ್ಟಣದ ಬಯಲು‌ ರಂಗಮಂದಿರ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ 77 ನೇ ಗಣರಾಜ್ಯೋತ್ಸ ದಿನಾಚರಣೆ ಅಂಗವಾಗಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು

ಸ್ವಾತಂತ್ರ ಪೂರ್ದಲ್ಲಿ ಬ್ರಿಟಿಷರ ದಾಸ್ಯದಿಂದ ಭಾರತದ ನಾಗರೀಕರ ಬದುಕು ಅತಂತ್ರಸ್ಥಿತಿಯಲ್ಲಿತ್ತು.ಸ್ವಾತ್ಯಂತ್ರ ನಮಗೆ‌ 1950 ಜನವರಿ 26 ರಂದು ಅನೇಕ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ಸಂಗಮವೆ ಗಣರಾಜ್ಯೋತ್ಸವ “ವೈವಿಧ್ಯತೆಯಲ್ಲಿ ಏಕತೆಯಾಗಿದೆ.

ಕೇಂದ್ರ ಸರ್ಕಾರ ದೇಶ ಆಳುವ ನೆಪದಲ್ಲಿ ಬಹುಜನರ ಭಾರತ ಸಂವಿಧಾನವನ್ನ ನಾಶಪಡಿಸಿ ಜಾತಿ ಜಾತಿಗಳ ಮದ್ಯ ವಿಷ ಬೀಜ ಬಿತ್ತಲು ಹೊರಟಿದೆ .ಆದ್ದರಿಂದ ದೇಶ‌ದ ಜನ ಎಚ್ಚರಗೊಳ್ಳಬೇಕು ಮುಂದಿನ ದಿನಗಳಲ್ಲಿ ದೇಶದ ಉಳಿವಿಗೆ ಕಾಂಗ್ರೇಸ್ ಅನಿವಾರ್ಯವಾಗಿದೆ.

ರಾಜ್ಯದಲ್ಲಿ ನಮ್ಮ ಕಾಂಗ್ರೇಸ್ ಸರ್ಕಾರ ಸಂವಿಧಾನದ ಆಶಯಗಳಿಗೆ‌ ತಕ್ಕಂತೆ ಅಡಳಿತಕ್ಕೆ ಸಾಕ್ಷಿಯಾಗಿದೆ. ಜಗಳೂರು ಕ್ಷೇತ್ರದಲ್ಲಿ ಕಂಡರಿಯದ ರಸ್ತೆ ಅಗಲಿಕರಣ ಸೇರಿದಂತೆ ಸಾಕುಷ್ಟು ಅಬಿವೃದ್ದಿ ಕಾರ್ಯಕ್ಕೆ ಸಾಕ್ಷಿಯಾಗಿದ್ದೆವೆ.
ಜಗಳೂರಿನ ಕ್ರೀಡಾಂಗಣಕ್ಕೆ 5 ಕೊಟಿ ರೂಗಳಲ್ಲಿ ಅಭಿವೃದ್ದಿ. ಮರೆನಹಳ್ಳಿ ರಸ್ತೆಯಲ್ಲಿ 40 ಕೋಟಿ ರೂಗಳಲ್ಲಿ 100 ಹಾಸಿಗೆ ಸರ್ಕಾರಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ. ಸರ್ಕಾರಿ‌ ಬಸ್ ಡಿಪೊ ಸ್ಥಾಪನೆ .ಜಗಳೂರಿನ ಕೆರೆಯನ್ನ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಿ 10 ಕೋಟಿ ರೂಗಳಲ್ಲಿ ಸುಂದರ ಉದ್ಯಾನವನ್ನಾಗಿ ಮಾಡಿ ಮಾದರಿ ಕೆರೆ ನಿರ್ಮಾಣ ಮಾಡಲು ಭರವಸೆ ನೀಡಿದರು

ತಹಶೀಲ್ದಾರ್ ಸೈಯದ್ ಕಲೀಂ ಉಲಾ ದ್ವಜಾರೋಹಣ ನೇರವೆರಿಸಿ ಕಾರ್ಯಕ್ರಮದಲ್ಲಿ ಶುಭಾ ಸಂದೇಶ ನೀಡಿದರು ಬ್ರೀಟಿಷರ ದಾಸ್ಯದಿಂದ ಸ್ವತಂತ್ರವಾಗಿ ಆಡಳಿತತ್ಮಕ ಶಕ್ತಿಯಾಗಿ‌ ನಮ್ಮ ಹಕ್ಕುನ್ನು ನಾವು ಪಡೆದ ದಿನವಾಗಿದೆ ಭಾರತದ ಸಂವಿಧಾನ ಸರ್ವಶ್ರೇಷ್ಠ ಸಂವಿಧಾನವಾಗಿದ್ದು ಪ್ರತಿಯೊಬ್ಬರ ಸಂವಿದಾನದ ಕರ್ತವ್ಯ ನಿಷ್ಠೆಗಳನ್ಬ ಪಾಲಿಸುವಂತೆ ಕರೆ ನೀಡಿದರು‌
ಕಾರ್ಯಕ್ರಮದಲ್ಲಿ
ಪೊಲೀಸ್ ಇಲಾಖೆ, ವಿದ್ಯಾರ್ಥಿಗಳು, ತಂಡಗಳಿಂದ ಆಕರ್ಷಕ ಪೆರೇಡ್..ಪಥ ಸಂಚಾಲನ ನಡೆಸಿಕೊಟ್ಟರು.

ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಗಳಿಸಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ನೀಡಿ ಸನ್ಮಾನಿಸಿ ಗೌರವಿಸಿದರು .
ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ..

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಸಕರ ಪುತ್ರ ಎಂ.ಡಿ.ಕೀರ್ತಿಕುಮಾರ್ ರವರಿಂದ ಪ್ರೋತ್ಸಹಧನ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅದ್ಯಕ್ಷರಾದ ಹಾಲಸ್ವಾಮಿ.ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಷಂಷಿರ್ ಆಹಮದ್.ಪೊಲೀಸ್ ಇನ್ಸ್ ಪಕ್ಟರ್ ಸಿದ್ದರಾಮಯ್ಯ .ಬಿಇಓ ಹಾಲಮೂರ್ತಿ.ಇಓ ಕೆಂಚಪ್ಪ.ತಾಲ್ಲೂಕು ವಕೀಲರ ಸಂಘದ ಅದ್ಯಕ್ಷ ಬಸವರಾಜ್.ಸರ್ಕಾರಿ ನೌಕರರ ಸಂಘದ ಅದ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!