filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಜಗಳೂರು ಬ್ರೇಕಿಂಗ್ ನ್ಯೂಸ್

ನೊಂದವರ ನೆರವು ಎಂಬ ವೇದಿಕೆ ಮೂಲಕ ಅಂಗವಿಕಲ ಅಸಹಾಯಕರ ನೆರವಿಗೆ ಧಾವಿಸಿದ ಜಗಳೂರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ.

ತಾಲ್ಲೂಕಿನ ಕಟಿಗೆಹಳ್ಳಿ ಗ್ರಾಮದ ಅಂಗವಿಕಲ ವಿದ್ಯಾರ್ಥಿ ಪವನ್ ಕುಮಾರ್ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಗೋಪುಗೊಂಡನಹಳ್ಳಿ ಸೈಯದ್ ಆಮಜದ್ ಇವರಿಗೆ ನೊಂದವರ ನೆರವಿನ ಮೂಲಕ ತಲಾ 25000 ಸಾವಿರದಂತೆ ಒಟ್ಟು 50.000 ಹಣ ನೀಡಿ ಸಹಾಸ್ತ ಚಾಚಿದ ಶಾಸಕ ಬಿ.ದೇವೇಂದ್ರಪ್ಪ

ಜಗಳೂರು‌ ತಾಲ್ಲೂಕಿನ ಕಟಿಗೆಹಳ್ಳಿ‌ ಗ್ರಾಮದ
ಮಹೇಶ್ ಗೀತಾಮ್ಮ ಎಂಬ ದಂಪತಿಯ ಪುತ್ರ ಪವನ್ ಕುಮಾರ್ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೆ ಎರಡು ಕಣ್ಣು ಕಾಣಿಸದೇ ದೃಷ್ಠಿದೋಷದಿಂದ ಬಳಲುತ್ತಿರುವ ಅಂಗವಿಕಲ ಈ ವಿದ್ಯಾರ್ಥಿಯ ವಿದ್ಯಾಬ್ಯಾಸಕ್ಕೆ‌ ಹಾಗೂ ಅಸ್ಪತ್ರೆ ಚಿಕಿತ್ಸೆಗೆ ಹಾಗೂ ಗೋಪುಗೊಂಡನಹಳ್ಳಿ ಸೈಯದ್ ಆಮಜದ್ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಚಿಕಿತ್ಸೆಗೆ ಜಗಳೂರು ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ನೊಂದವರ ನೆರವು ಎಂಬ ವೇದಿಕೆ ಮೂಲಕ ಹಣಕಾಸಿನ ನೆರವು ನೀಡಿ ಸಹಾಯಸ್ತ ಚಾಚಿ‌ ಬಡವರ ಹಸಿದವರ ನೋವಿಗೆ ಮನಮಿಡಿಯುವ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದಾರೆ.

ಕಳೆದ ದಿನಗಳಲ್ಲಿ‌ ಖಾಸಗಿ ಕಾರ್ಯಕ್ರಮಗಳಿಗೆ ಶಾಸಕರು ಗ್ರಾಮಗಳಿಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ಬಡವರು ಅಂಗವಿಕಲರು ಕಂಡು ಬಂದ ಹಿನ್ನಲೆಯಲ್ಲಿ ಈ ಎರಡು ಜನ ಅಸಹಾಯಕರಿಗೆ ತಲಾ 25000 ಸಾವಿರದಂತೆ ಒಟ್ಟು 50.000 ಸಾವಿರ ಹಣಕಾಸಿನ ನೆರವು ನೀಡಿ ಅಸರೆಯಾಗಿದ್ದಾರೆ.

ಸಮಾಜದಲ್ಲಿ ನೊಂದವರ ಅಸಹಾಯಕ ಅಂಗವಿಕಲ ಬಡವರಿಗೆ ಹಣಕಾಸಿನ ನೆರವು ನೀಡುವ ಮೂಲಕ ಸಹಾಸ್ತ‌ ಚಾಚಿ ಅಸಹಾಯಕರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದೆವೆ ನೊಂದವರು ನಮ್ಮ ಬಳಿ‌ ಸಹಾಯ ಕೇಳಿ ಹಣ ಪಡೆದು ತಮ್ಮ. ಅಗತ್ಯತೆಗಳಿಗೆ‌ ವಿನಿಯೋಗಿಸುವಂತೆ ಶಾಸಕರು ಕರೆ ನೀಡಿದರು.

ನೊಂದವರ ನೆರವು ಸಮಾಜದ ಶೋಷಿತ, ಅಸಹಾಯಕ, ಅಂಗವಿಕಲರು, ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ನೆರವಿನ ಮೂಲಕ ಸಾಂತ್ವನ ನೀಡುವುದರ ಜೊತೆಗೆ ಮಾನವೀಯತೆಗೆ‌ ಮಿಡಿಯುವಂತ ನೆರವಿಗೆ ಸಾಕ್ಷಿಯಾದ ಜಗಳೂರು ಶಾಸಕರ ಕಾರ್ಯ ಶ್ಲಾಘನೀಯವಾಗಿದೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಷಂಷೀರ್ ಆಹಮದ್. ಪೋಷಕರು ಸೇರಿದಂತೆ ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!