Editor by m rajappa vyasagondnahalli

by shukradeshe news online portal Kannada news February 2_2_2026

ಸಮಾಜ ಕಲ್ಯಾಣ ಇಲಾಖೆ ಪ.ಜಾತಿ ಹಾಸ್ಟೆಲ್ ಅಡುಗೆ ಸಹಾಯಕ ಪ್ರದೀಪ್ ಓಮಿನಿ ಕಾರಿನಲ್ಲಿ ಕ್ಯಾಸ್ಟ್ ಇಕಂ ಅಪ್ಲೆ ಮಾಡುವ ಕೆಲಸದಲ್ಲಿ‌ ನಿರತನಾಗಿ ತನ್ನ ಸರ್ಕಾರಿ ಉದ್ಯೋಗಿ ಎಂಬುವುದೆ ಅರಿವಿಲ್ಲದೆ ಕರ್ತವ್ಯಲೋಪ ದುರ್ಬಳಕೆ

ಜಗಳೂರು ತಾಲ್ಲೂಕಿನ ತೋರಣಗಟ್ಟೆ ಮೆಟ್ರಿಕ್ ಪೂ ರ್ವ ಬಾಲಕರ ವಿದ್ಯಾರ್ಥಿ ಹಾಸ್ಟೆಲ್ ನ ಅಡುಗೆ ಸಹಾಯಕ‌ನೊಬ್ಬ ಬ್ರೊಕರ್ ದಂಧೆಗಿಳಿದಿದ್ದಾನೆ ಮದ್ಯವರ್ತಿಯಾಗಿ ಗ್ರಾಮಲೆಕ್ಕಾಧಿಕಾರಿಗಳ ಬಳಿ ಸಾರ್ವಜನಿಕರಿಗೆ ಕ್ಯಾಸ್ಟ್ ಇಂಕಂ ಕೊಡಿಸುವ ಕೆಲಸಕ್ಕೆ ಮುಂದಾಗಿರುವ ಇವನಿಗೆ ಹೇಳುವವರಿಲ್ಲ ಕೇಳುವವರಿಲ್ಲ ಸರ್ಕಾರಿ ನೀಯನುಸಾರ ಅಡುಗೆ ಸಹಾಯಕ ಹಾಸ್ಟೆಲ್ ನಲ್ಲಿ ಅಡುಗೆ ಮಾಡಿಕೊಂಡು ಇರಬೇಕು .

ಅಲ್ಲಿಯೇ ವಾಸವಿರುಬೇಕೆಂಬ ನೀಯಮವಿದೆ ಆದರೆ ಸರ್ಕಾರ ನೀಯಮಗಳನ್ನೆ ಗಾಳಿಗೆ ತೂರಿ ರಾಜರೋಷವಾಗಿ ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಓಮಿನಿಯಲ್ಲಿ ಕೂತು ಕಂಪೂಟ್ಯರ್ ತಂತ್ರಾಂಶದಲ್ಲಿ ಸಾರ್ವಜನಿಕರ‌ ಜಾತಿ ಪ್ರಮಾಣ ಆದಾಯ ಪತ್ರಕ್ಕೆ ಅಪ್ಲೈ ಮಾಡಿ ದುಪ್ಪಟ ಹಣ ಮಾಡುವ ದಂಧೆಗಿಳಿದಿರುವುದು ಬೆಳಕಿಗೆ ಬಂದಿದೆ.

ಇಷ್ಟೆಲ್ಲ ಇದ್ದರು ಸಹ ಹಾಸ್ಟೆಲ್ ವಾರ್ಡನ್ ಮತ್ತು ಸಮಾಜ ಕಲ್ಯಾಣ ಪರಿಶಿಷ್ಠ ಜಾತಿ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ನಮ್ಮ ಹಾಸ್ಟೆಲ್ ಸಹಾಯಕರು ಎಲ್ಲಿ ಏನು ಕೆಲಸ ಮಾಡುತ್ತಿದ್ದಾರೆ ಎಂಬುದೇ ಅವರಿಗೆ ತಿಳಿದಿಲ್ಲ

ಇನ್ನು ಸಂಬಂಧಿಸಿದ ವಾರ್ಡನ್ ಸಹ ಹಾಸ್ಟೆಲ್ ಗಳಿಗೆ ಸರಿಯಾದ ರೀತಿ ಬೇಟಿ ನೀಡದೆ ಮೆನು ಚಾರ್ಟ್ ನೀಯನುಸಾರ ಆಹಾರ ಊಟ ನೀಡದೇ ಮಕ್ಕಳ ಹಕ್ಕಿನ ತುತ್ತಿಗೆ ಕನ್ನ ಹಾಕುವ ಕೆಲಸ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ಮಕ್ಕಳ ವಸತಿ ಹಾಸ್ಟೆಲ್ ಹೆಸರಿನಲ್ಲಿ ಲಕ್ಷ ಲಕ್ಷ ತನ್ನ ಜೇಬಿಗೆ ಇಳಿಸಿಕೊಳ್ಳುವ ವಾರ್ಡನ್ ಕೃಷ್ಣಪ್ಪ

ಒಟ್ಟಾರೆ ಸಂಬಂಧಿಸಿ ಹಾಸ್ಟೆಲ್ ವಾರ್ಡನ್ ಅಲ್ಲಿನ ಸಿಬ್ಬಂದಿಗೆ ಅಲ್ಪ ಕಾಸು ಕೊಟ್ಟು ಅಲ್ಪ ಆಹಾರ ಸಾಮಾಗ್ರಿಗಳನ್ನು ತರಲು ನೇಮಿಸಿ ಅಮವಾಸೆಗೆ ಒಂದು ಬಾರಿ ಹುಣ್ಣಿಮೆಗೆ ಒಂದು ಬಾರಿ ಹಾಸ್ಟೆಲ್ ಗೆ ಬಂದು ಲಕ್ಷಗಟ್ಟಲೆ ಬಿಲ್ ಮಾಡಿಕೊಂಡು ಪರಾರಿಯಾಗುತ್ತಾರೆ

. ಒಟ್ಟಾರೆ ವಿದ್ಯಾರ್ಥಿಗಳಿಗೆ ಸರಿಯಾದ ರೀತಿ ಊಟ ವಸತಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕಾದ ವಾರ್ಡನ್ ಕೃಷ್ಣಪ್ಪ ಎಂಬುವವರು ಸರ್ಕಾರದ ಅನುದಾನವನ್ನ ದುರ್ಬಳಕೆ ಮಾಡಿಕೊಂಡು ನಾನೇ ಸುಪ್ರೀಂ ಎಂದು ಮೆರಯುವ ವಾರ್ಡನ್ ಮತ್ತು ಸಿಬ್ಬಂಧಿಗೆ ಸಂಬಂಧಿಸಿದ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ ಎಂದು ಸಾರ್ವಜನಿಕರು‌‌ ಆರೋಪಿಸಿದ್ದಾರೆ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ಜಿಪಂ ಸಿ ಇ ಓ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ನಿತ್ಯ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿರುವ ವಿದ್ಯಾರ್ಥಿಗಳ ಹಕ್ಕಿನ ಮೂಲ ಸೌಲಭ್ಯಗಳನ್ನ ಒದಗಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!