filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ಜಗಳೂರು ಸುದ್ದಿ

ನಮ್ಮ ಕಾಂಗ್ರೇಸ್ ಪಕ್ಷದ 5 ಗ್ಯಾರಂಟಿ ಯೊಜನೆಗಳ ಜೊತೆಗೆ ಭರಪೂರ ಅಭಿವೃದ್ದಿ ಕಾಮಗಾರಿಗಳೆ ವಿರೋಧ ಪಕ್ಷದವರಿಗೆ ಉತ್ತರವಾಗಿವೆ ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಾತ್ಯಂತ್ರ ಬಂದು 77 ವರ್ಷವಾದರು ಸಹ ರಸ್ತೆ‌ ಕಾಣದ ಹುಚ್ಚವ್ವನಹಳ್ಳಿ ಗ್ರಾಮಕ್ಕೆ ರಸ್ತೆ ಅಭಿವೃದ್ದಿಪಡಿಸಿದ್ದೆವೆ.
ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ 16.ಕೋಟಿ 30 ಲಕ್ಷ ರೂಗಳಲ್ಲಿ‌ ನಿರ್ಮಿಸುವ 17 ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಗಾಟನೆ ಕಾರ್ಯಕ್ರಮದಲ್ಲಿ ಟೀಕಿಸುವ ಬಿಜೆಪಿ ಪಕ್ಷದವರಿಗೆ ಶಾಸಕ ಬಿ.ದೇವೇಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ತಾಲ್ಲೂಕಿನ ಕಾಮಗೇತನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂಗಳಲ್ಲಿ ಸಿ.ಸಿ ರಸ್ತೆ ತಾಯಿಟೋಣಿ ಗ್ರಾಮದಲ್ಲಿ 20 ಲಕ್ಷ ರೂಗಳಲ್ಲಿ ಸಿ.ಸಿ ರಸ್ತೆ ಹಾಲೆಹಳ್ಳಿ ಸಾಲೆಹಳ್ಳಿ ಗ್ರಾಮಕ್ಕೆ 40 ಲಕ್ಷ ರೂ ಸಿಸಿ ರಸ್ತೆ . ಮಲ್ಲಾಪುರ.ಜಗಳೂರು ಗೊಲ್ಲರಹಟ್ಟಿ ಗ್ರಾಮಕ್ಕೆ 76 ಲಕ್ಷ ರೂ‌ ಸೇರಿದಂತೆ ಒಟ್ಟು 16.30 ಕೋಟಿ ರೂ ಗಳಲ್ಲಿ 17 ಕ್ಕೂ ಹೆಚ್ಚು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು ನಮ್ಮ ಸರ್ಕಾರ ಅನೇಕ ಯೋಜನೆಗಳು ಜನರಿಗೆ ವರದಾನವಾಗಿವೆ. ಕ್ಷೇತ್ರದ‌ ಹುಚ್ಚವ್ವನಹಳ್ಳಿ‌ ಗ್ರಾಮಕ್ಕೆ ಸ್ವಾತಂತ್ರ ಬಂದು 77 ವರ್ಷಗಳು ಕಳೆದರು ಸಹ ಗ್ರಾಮಕ್ಕೆ ಡಾಂಬರು ರಸ್ತೆ ಇರಲಿಲ್ಲ ಗ್ರಾಮದವರ ಮನವಿಗೆ ಸ್ವಂದಿಸಿ ರಸ್ತೆ ಅಭಿವೃದ್ದಿಪಡಿಸಿದ್ದೆನೆ .ಸಿದ್ದಿಹಳ್ಳಿ ಬಳಿ ಜಿನಿಗೆ ಹಳ್ಳಕ್ಕೆ‌ ನಿರ್ಮಿಸಿರುವ ಬಿಡ್ಜ್ ಕಂ ಬ್ಯಾರೆಜ್ ನಿರ್ಮಾಣದಂತ ಅನೇಕ ಕಾಮಗಾರಿಗಳು ಅಂತರ್ಜಲಕ್ಕೆ ಸಹಕಾರಿಯಾಗಿ ಜಗಳೂರಿನ ಮಹತ್ವದ ಯೋಜನೆ ಅಪ್ಪರ್ ಭದ್ರಾ ಯೋಜನೆ ಕಾಮಗಾರಿ ತ್ವರಿತವಾಗಿ ನಡೆಯಲಿದೆ ‌ಈ ಯೋಜನೆಯನ್ನ ಕೇಂದ್ರ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಬಿಜೆಪಿ ಹಣ ಬಿಡುಗಡೆ ಮಾಡಲಿಲ್ಲ ಕೇವಲ ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಮಹಾತ್ಮಗಾಂಧಿ‌ ಖಾತ್ರಿ ಯೋಜನೆ ಹೆಸರಿನ‌ ಕೇಂದ್ರ ವಿಜಿ.ರಾಮಜಿ .ಬದಲಾಯಿಸಿರುವುದು ಯಾವ ಪುರಷಾರ್ಥಕ್ಕೆ ಎಂದು ಆರೋಪಿಸಿದರು

  17 ನೇ ಬಜೆಟ್ ಮಂಡನೆ ಮಾಡಲಿರುವ ನಮ್ಮ ಮುಖ್ಯಮಂತ್ರಿ‌ ಸಿದ್ದರಾಮಯ್ಯ ರಾಜ್ಯದಲ್ಲಿಯೇ ಒಂದು ಇತಿಹಾಸ ಬರೆಯಲಿದ್ದಾರೆ.ನಮ್ಮ ಕ್ಷೇತ್ರದ ಬಹುದಿನ ಕನಸಿನ ಯೋಜನೆ  ಅಪ್ಪರ್ ಭದ್ರಾ ನೀರಾವರಿ ಯೋಜನೆ ಕಾಮಗಾರಿ  ತ್ವರಿತವಾಗಿ ನಡೆಯಲಿದೆ.  ಈಗಾಗಲೇ 57 ಕೆರೆ ತುಂಬಿಸುವ ಯೋಜನೆ ಯಶಸ್ವಿಯಾದಂಹ ಅನೇಕ ಜನಪರ ಅಭಿವೃದ್ದಿ‌ ಕಾಮಗಾರಿಗಳೆ ಬಿಜೆಪಿ ವಿರೋಧ ಪಕ್ಷದವರಿಗೆ ಉತ್ತರವಾಗಿವೆ ಎಂದರು.ಶಾಸಕ ಬಿ.ದೇವೇಂದ್ರಪ್ಪ 

ದಾವಣಗೆರೆ ಜಿಲ್ಲಾ ಪಂಚಾಯತ್ ಉಪಾ ಕಾರ್ಯಧರ್ಶಿ ಮಮತಾ ಹೊಸಗೌಡರ್ ಮಾತನಾಡಿ ಸರ್ಕಾರದ ಯೋಜನೆಗಳನ್ನ‌ ಜನರು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೇ ನೀಡಿದರು.

ಈ ಸಂದರ್ಭದಲ್ಲಿ ಅಪ್ಪರ್ ಭದ್ರಾ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆಪ್ರಿನಾ.ಹಾಗೂ ಗ್ರಾಮಿಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸೋಮ್ಲನಾಯ್ಕ್ .ತಾಪಂ ಇಓ ಕೆಂಚಪ್ಪ .ಎಇಇ ಸಾಧಿಕ್ ಉಲಾ.ಕೆ ಆರ್ ಡಿ.ಎಲ್ ಸಹಾಯಕ ಕಾರ್ಯಪಾಲಕ ಇಂಜೀನಿರ್ ಭಾರತಿ .ಪಂಚಾಯತ್ ರಾಜ್ ಇಲಾಖೆ ಎಇಇ ಶಿವಮೂರ್ತಿ ಸೇರಿದಂತೆ ಇನ್ನು ಮುಂತಾದ ಅಧಿಕಾರಿಗಳು ವಿವಿಧ ಜನಪ್ರತಿನಿಧಿಗಳು ಹಾಜುರಿದ್ದರು.
ಗ್ರಾಮಸ್ಥರು ಶಾಸಕರನ್ನ ಹಾರ ತುರಾಯಿ ಹಾಕಿ ಅದ್ದೂರಿ ತಾಳಮೇಳಗಳೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು‌. ವಾದ್ಯ ನಾದಕ್ಕೆ‌ಮನಸೋತ ಶಾಸಕರು ಹಲಗೆ ಬಡಿದು ಗ್ರಾಮಸ್ಥರನ್ನ ರಂಜಿಸಿದರು.

Leave a Reply

Your email address will not be published. Required fields are marked *

You missed

error: Content is protected !!