Editor by m.rajappa vyasagondanahalli by shukradeshe news online portal news Kannada news published frebrury 3_2,2026

ದಾವಣಗೆರೆ (ಲೋಕಿಕೆರೆ ) ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಲೋಕಿಕೆರೆ ಒಂದು ದೊಡ್ಡ ಗ್ರಾಮವಾಗಿದೆ. ಜನಸಂಖ್ಯೆ ಮತ್ತು ಮನೆಗಳ ಸಂಖ್ಯೆಯಿಂದ ಆದರೆ ತನ್ನ ಒಡಲೊಳಗೆ ಅಸಂಖ್ಯಾತ ಸಮಸ್ಯೆಗಳನ್ನು ಮೈಗೂಡಿಸಿಕೊಂಡಿದೆ. ನಮ್ಮ ಲೋಕಿಕೆರೆ ಗ್ರಾಮದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಗ್ರಾಮ ದೇವತೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ.

ಗ್ರಾಮದ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣಗಳಿಂದ ಅಲಂಕಾರ ಗೊಳಿಸುತ್ತಿದ್ದಾರೆ. ಏಕೆಂದರೆ ಮಾರಿಕಾಂಬಾ ದೇವಿ ಜಾತ್ರೆಗೆ ಬರುವ ನಮ್ಮ ಸಂಬಂಧಿಕರು ಮನೆಯ ಸ್ವಚ್ಛತೆ ಸುಂದರತೆ ನೋಡಿ ಸಂತೋಷದಿಂದ ಎಲ್ಲರೂ ಸೇರಿ ದೇವಿಯ ಜಾತ್ರೆ ಮಾಡಿ ದೇವಿಯ ಕೃಪೆಗೆ ಪಾತ್ರರಾಗ ಬೇಕೆಂದು ಜನರ ಮನೋಬಯಕೆ…


ಲೋಕಿಕೆರೆ ಗ್ರಾಮ ಪಂಚಾಯಿತಿ 15 ಗ್ರಾಮ ಸದಸ್ಯರನ್ನು ಹೊಂದಿರುವ ದೊಡ್ಡ ಗ್ರಾಮ ಪಂಚಾಯತಿಯಾಗಿದೆ.ಒಬ್ಬ ಉನ್ನತ ಮಟ್ಟದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಒಬ್ಬ ಕಾರ್ಯದರ್ಶಿ, ಸಹಾಯಕ ಲೆಕ್ಕಾಧಿಕಾರಿ, ಇನ್ನು ಅನೇಕ ನೌಕರರಿಂದ ಕೂಡಿದ ಒಂದು ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ.
ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ಸಂಬಂಧಿಸಿದ ಗ್ರಾಮದ ಮಾರಿಕಾಂಬ ದೇವಿಯ ಕಮಿಟಿಯವರು ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದ ದೇವಸ್ಥಾನಗಳಿಗೆ ಸುಣ್ಣಬಣ್ಣಗಳಿಂದ ಅಲಂಕಾರ ಗೊಳಿಸುತ್ತಿದ್ದಾರೆ. ಜಾತ್ರೆಗೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾರೆ ಇದು ಸರಿ ಅಷ್ಟೇ.
ಲೋಕಿಕೆರೆ ಗ್ರಾಮ ತನ್ನ ಒಡಲೊಳಗೆ ಸಾಕಷ್ಟು ಕೇರಿಗಳನ್ನು, ರಸ್ತೆಗಳನ್ನು ಚರಂಡಿಗಳನ್ನು, ಸಾವಿರಾರು ತಿಪ್ಪೆ ಗುಂಡಿಗಳನ್ನು,ಕಸದ ರಾಶಿಗಳನ್ನು ಗೊಬ್ಬು ನಾರುತ್ತಿರುವ ಚರಂಡಿಗಳನ್ನು,ಶೃಂಗಾರಗೊಂಡು ಒಂದು ಹನಿ ನೀರು ಬರದ ಅನೇಕ ನಲ್ಲಿಗಳನ್ನು ಹೊಂದಿ ವಿಕಾರಗೊಂಡಿದೆ.
ದೇವಿಯ ಜಾತ್ರೆಗೆ ಬಂದ ಜನರು ಲೋಕಿಕೆರೆ ಕೇರಿಗಳಲ್ಲಿ ನಡೆದುಕೊಂಡು ಹೋದರೆ ಅಲ್ಲಲ್ಲಿ ಗುಂಪೆ ಮಾಡಿರುವ ಮಣ್ಣಿನ ರಾಶಿಗಳನ್ನು ಎಡವಿ ಬಿದ್ದು ಕೈಕಾಲುಗಳನ್ನು ಮುರಿದುಕೊಳ್ಳುವ ಸಾಧ್ಯತೆಗಳಿವೆ. ಲೋಕಿಕೆರೆ ಗ್ರಾಮದ ಪ್ರತಿಯೊಂದು ಕೇರಿಯ ರಸ್ತೆಗಳಲ್ಲಿ ಅಕ್ಕ ಪಕ್ಕ ದೊಡ್ಡ ದೊಡ್ಡ ಮಣ್ಣಿನ ಗುಂಪೆಗಳು ರಸ್ತೆ ಉದ್ದಕ್ಕೂ ತಲೆ ಎತ್ತಿವೆ. ಪ್ರತಿಯೊಂದು ಕೇರಿಯ ಚರಂಡಿಗಳು ಕಸದಿಂದ ತುಂಬಿ ಗೊಬ್ಬು ನಾರುತಿವೆ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತಿ ಆಡಳಿತ ವರ್ಗ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಅದರಲ್ಲೂ ಗ್ರಾಮ ಪಂಚಾಯತಿಯ ಉನ್ನತ ಮಟ್ಟದ ಅಧಿಕಾರಿಗಳು ಈ ಗ್ರಾಮದಲ್ಲಿ ನಮ್ಮನ್ನು ಈ ರೀತಿ ಪ್ರಶ್ನಿಸುವ,ಆಲೋಚಿಸುವ, ಕೇಳುವಂಥವರೇ ಇಲ್ಲವೆಂದು ನಮಗೆ ಈ ವಿಷಯಗಳೇ ಸಂಬಂಧವಿಲ್ಲವೆಂದು ಪ್ರತಿದಿನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.


ಕೇವಲ ಜಿಪಿಎಸ್ GPS ಮಾಡುವುದರಲ್ಲಿ ಬಹಳ ಬಹಳ ಉತ್ಸಾಹಕರಾಗಿರುತ್ತಾರೆ. ಇದು ನಮ್ಮೂರಿನ ವಿಪರ್ಯಾಸವು ಕರ್ಮವು ಹೌದು.
ಶ್ರೀ ಮಾರಿಕಾಂಬ ದೇವಿಯ ಜಾತ್ರೆಗೆ ನಮ್ಮೂರಿಗೆ ಲಕ್ಷಾಂತರ ಜನರು ಬರುವ ಕಾರಣ ಸಂಬಂಧಪಟ್ಟ ಗ್ರಾಮ ಪಂಚಾಯತಿ ಆಡಳಿತ ವರ್ಗ, ಅಧಿಕಾರಿ ವರ್ಗದವರು ರಸ್ತೆ ಉದ್ದಗಲಕ್ಕೂ ಇರುವ ದೊಡ್ಡ ದೊಡ್ಡ ಮಣ್ಣಿನ ರಾಶಿಗಳನ್ನು, ಗೊಬ್ಬುನಾರುತ್ತಿರುವ ಚರಂಡಿಗಳನ್ನು ಕಸದ ಗುಂಪೆಗಳನ್ನು ವಿಲೇವಾರಿ ಮಾಡಿ ಗ್ರಾಮವನ್ನು ಸ್ವಚ್ಛಗೊಳಿಸಲು ಸಿದ್ಧತೆ ಮಾಡಿಕೊಳ್ಳಬೇಕು.
ಈಗಾಗಲೇ ರಸ್ತೆ ಅಕ್ಕ ಪಕ್ಕದಲ್ಲಿರುವ ದೊಡ್ಡ ಮಣ್ಣಿನ ಗುಂಪೆಗಳಿಂದ ವಾಹನ ಸವಾರರಿಗೆ,ವಾಹನಗಳಿಗೆ ಸಾಕಷ್ಟ ತೊಂದರೆಗಳಾಗುತ್ತಿವೆ. ಅನೇಕ ಜನರು ವಾಹನಗಳಿಂದ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ.
ದೇವಿ ಜಾತ್ರೆಗೆ ಲಕ್ಷಾಂತರ ಜನರು, ಸಾವಿರಾರು ವಾಹನಗಳು ಬರುವ ಕಾರಣ ರಸ್ತೆ ಅಕ್ಕಪಕ್ಕದಲ್ಲಿರುವ ದೊಡ್ಡ ದೊಡ್ಡ ಮಣ್ಣಿನ ಗುಂಪುಗಳನ್ನು, ಕಸದ ರಾಶಿಗಳನ್ನು, ಗಬ್ಬುನಾರುತ್ತಿರುವ ಚರಂಡಿಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು.

ಹಾಗೂ ಜಾತ್ರೆಯ ನಂತರವೂ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಗ್ರಾಮಸ್ವಚ್ಛತೆಗೆ ಕ್ರಮ ಕೈಗೊಳ್ಳದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಉನ್ನತ ಮಟ್ಟದ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಬೇಕಾಗುತ್ತದೆ ಆದ್ದರಿಂದ ಗ್ರಾಮ ಸ್ವಚ್ಛತೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತ್ ಆಡಳಿತ ಕ್ಕೆ ಸಮಸ್ತ ಗ್ರಾಮಸ್ಥರಿಂದ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!