| ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ
Davanagere
ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ

ದಾವಣಗೆರೆ: ನಗರದ (Davanagere) ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಲೌಕಿಕ ಜೀವನ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಯುವತಿಯರು

ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ ಕಡೆ ವಾಲಿದ್ದರು. ಸಂಸಾರ ಸುಖಃ ಜೀವನಕ್ಕಿಂತ ಸನ್ಯಾಸತ್ವದ ಜೀವನವೇ ಶ್ರೇಷ್ಠ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: Mandya | ಸರ್ಕಾರಿ ನೌಕರಿ ಬಿಟ್ಟು ಸನ್ಯಾಸತ್ವ ದೀಕ್ಷೆ ಪಡೆಯಲು ಸಜ್ಜಾದ ಕೆಎಎಸ್‌ ಅಧಿಕಾರಿ

Leave a Reply

Your email address will not be published. Required fields are marked *

You missed

error: Content is protected !!