ಜಗಳೂರು ನ್ಯೂಸ್
ಮೊನ್ನೆ ನಡೆದ ಜಂಟಿ ಅಧಿವೇಶನದಲ್ಲಿ ರಾಜ್ಯದ ರಾಜ್ಯಪಾಲರು ರಾಷ್ಟ್ರಗೀತೆಗೆ ಸೌಜನ್ಯಕ್ಕಾದರು ಗೌರವ ನೀಡಿಲ್ಲ .
ಮಹಾತ್ಮಗಾಂಧಿ ಹೆಸರಿನ ಮನೇರಗಾ ಯೋಜನೆಯನ್ನ ವಿಜಿ.ರಾಮಜಿ ಎಂದು ಕೇಂದ್ರ ಬದಲಾಯಿಸಿರಬಹುದು ಆದರೆ ದೇಶದ 140 ಕೊಟಿ ಜನರ ಮನಸ್ಸಿನಿಂದ ಮಹಾತ್ಮಗಾಂಧಿಜಿ ಹೆಸರನ್ನ ಬದಲಾಯಿಸಲು ಸಾದ್ಯವಿಲ್ಲ ಜಗಳೂರು ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ 15 ಕೋಟಿ ರೂಗಳ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾಂಗ್ರೇಸ್ ಶಾಸಕ ಬಿ.ದೇವೇಂದ್ರಪ್ಪ ಕೇಂದ್ರದ ವಿರುದ್ದ ಆರೋಪಿಸಿ ವಾಗ್ದಳಿ ನಡೆಸಿದ್ದಾರೆ..
ಕಾಂಗ್ರೇಸ್ ಎಂದರೆ ಈ ದೇಶಕ್ಕೆ ಒಂದು ಶಕ್ತಿಯಾಗಿದೆ. ನಮ್ಮ ಕಾಂಗ್ರೇಸ್ ಪಕ್ಷ. ಚುನಾವಣೆಯಲ್ಲಿ ವಾಗ್ದಾನ ಮಾಡಿದಂತೆ 5 ಗ್ಯಾರಂಟಿ ಯೋಜನೆಗಳನ್ನ ಸಮರ್ಪಕವಾಗಿ ನೀಡಿ ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳನ್ನ ಮಾಡುವ ಮೂಲಕ ರಾಜ್ಯದ ನಮ್ಮ ನಾಯಕರಾದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಮನ್ನಣೆಗೆ ಸಾಕ್ಷಿಯಾಗಿದ್ದಾರೆ.
ನಾನು ಕೂಡ ಕೇವಲ ಮಾತಾಡುವ ಶಾಸಕನಲ್ಲ ಕೆಲಸ ಮಾಡುವ ಶಾಸಕ
ಜಗಳೂರು ಕ್ಷೇತ್ರದ ಕ್ಯಾಸೆನಹಳ್ಳಿ ಗ್ರಾಮದಲ್ಲಿ ವಿವಿಧ 15 ಕೋ ರೂಗಳಲ್ಲಿ ವಿವಿಧ ಹಳ್ಳಿಗಳಲ್ಲಿ ನಿರ್ಮಿಸುವ ಕಾಮಗಾರಿಗಳಿಗೆ ಚಾಲನೆ ನೀಡಿ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ.
ನಾನು ಕೂಡ ಕೇವಲ ಮಾತಾಡುವ ಶಾಸಕನಲ್ಲ ಕೆಲಸ ಮಾಡುವ ಶಾಸಕನಾಗಿ ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸುತಾ ಈಗಾಗಲೇ ಜಗಳೂರು ಪಟ್ಟಣದ ರಸ್ತೆ ಅಭಿವೃದ್ದಿ ಬಿಡ್ಜ್ ಕಂ ಬ್ಯಾರೇಜ್ ಗಳು ಮೊನ್ನೆ ತೊರೆಸಾಲು ಬಾಗದ ವಿವಿಧ ಗ್ರಾಮಗಳಿಗೆ 16.30 ಕೋ ರೂಗಳಲ್ಲಿ ರಸ್ತೆ ಅಭಿವೃದ್ದಿ ಪ್ರಸ್ತುತದಲ್ಲಿ 15 ಕೋ ರೂಗಳಲ್ಲಿ ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ. ತಮಲೇಹಳ್ಳಿ. ಗೌಡಗೊಂಡನಹಳ್ಳಿ .ಚಿಕ್ಕಮ್ಮನಹಟ್ಟಿ ಕ್ಯಾಸೆನಹಳ್ಳಿ.ಗೌರಿಪುರ ಗ್ರಾಮಗಳಲ್ಲಿ ರಸ್ತೆ ಅಭಿವೃದ್ದಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಅಭಿವೃದ್ದಿ ಕಾರ್ಯಗಳನ್ನ ಕಂಡಂತ ವಿರೋಧ ಪಕ್ಷದವರು ಕೇವಲ ಟೀಕೆ ಮಾಡುತ್ತಾರೆ . ಜಗಳೂರು ಇತಿಹಾಸದಲ್ಲಿಯೇ ಅಭಿವೃದ್ದಿ ಶಕೆ ಆರಂಭವಾಗಿದೆ ಎಂದು ಜನಸಾಮಾನ್ಯರು ಮಾತನಾಡಿರುವುದನ್ನ ನಾನು ಕೇಳಿದ್ದೆನೆ ಅದ್ದರಿಂದ ಇನ್ನು ನನ್ನ ಶಾಸಕರ ಅವಧಿ ಎರಡು ವರ್ಷಗಳ ಕಾಲವಿದ್ದು ಮತ್ತೋಷ್ಟು ಸರ್ಕಾರದ ಯೋಜನೆಗಳ ಮೂಲಕ ಕ್ಷೇತ್ರ ಅಭಿವೃದ್ದಿಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.
ಕಾಂಗ್ರೇಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್ ಮಾತನಾಡಿ ಜಗಳೂರು ಕ್ಷೇತ್ರಕ್ಕೆ ನಮ್ಮ ಶಾಸಕರು ಆಯ್ಕೆಯಾದ ಅಂದಿನಿಂದ ಇಲ್ಲಿಯವರೆಗೂ ಸಹ ಸುಮಾರು
ಒಂದು ಸಾವಿರ ಕೋಟಿ ರೂಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದರು.
. ಅಪ್ಪರ್ ಭದ್ರಾ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆಪ್ರಿನಾ..ಕೆ ಆರ್ ಡಿ.ಎಲ್ ಸಹಾಯಕ ಕಾರ್ಯಪಾಲಕ ಇಂಜೀನಿರ್ ಭಾರತಿ .ಪಂಚಾಯತ್ ರಾಜ್ ಇಲಾಖೆ ಎಇಇ ಶಿವಮೂರ್ತಿ ಮಾಜಿ ತಾಪಂ ಅದ್ಯಕ್ಷ ಸಣ್ಣ ಸೂರಜ್ಜ.ಮುಖಂಡ ಮಹೇಶಣ್ಣ.. ಡಿ ಆರ್ ಹನುಮಂತಪ್ಪ. ತಮಲೇಹಳ್ಳಿ ಗುರುಮೂರ್ತಿ ಮುಖಂಡ ಹಟ್ಟಿ ತಿಪ್ಪೇಸ್ವಾಮಿ.ಮಾಜಿ ಮಂಜಣ್ಣ. .ಮರೇನಹಳ್ಳಿ ಶೇಖರಪ್ಪ. ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಕ್ಯಾಸೆನಹಳ್ಳಿ ಹನುಮಂತಣ್ಷ.ರಾಮಚಂದ್ರಪ್ಪ. ಗುತ್ತಿಗೆದಾರರಾದ ಪಟೇಲ್.ಶಾಸಕರ ಆಪ್ತ ಸಹಾಯಕ ಮಧು ಸೇರಿದಂತೆ ಹಾಜುರಿದ್ದರು.
