ಜಗಳೂರು ಬ್ರೇಕಿಂಗ್ ನ್ಯೂಸ್

ರಾಗಿ ಖರಿದಿ ಕೇಂದ್ರದಲ್ಲಿ ರೈತರಿಗೆ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕಲಬೆರಕೆ ಮದ್ಯವರ್ತಿಗಳಿಗೆ ಮಣಿ ಹಾಕಿದರೆ ಸಹಿಸುವುದಿಲ್ಲ ಶಾಸಕ ಬಿ ದೇವೇಂದ್ರಪ್ಪ ಕಿಡಿ

ಜಗಳೂರು ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಬಿ ದೇವೇಂದ್ರಪ್ಪ ಚಾಲನೆ ನೀಡಿ ಕಡಕ್ ಸೂಚನೆ ನೀಡಿದರು .

ರಾಗಿ ಉಂಡುವನು ನಿರೋಗಿ ಸರ್ಕಾರ ಖರಿದಿ ಕೇಂದ್ರದ ಮೂಲಕ ಕನಿಷ್ಠ ಮತ್ತು ಗರಿಷ್ಠ 4880 ರೂ ಬೆಂಬಲ ಬೆಲೆ ನೀಡಿ ರೈತರ ಬದುಕಿಗೆ ಸಹಾಯಸ್ತ ಚಾಚಿದೆ.

ಸರ್ಕಾರದ ಯೋಜನೆಗಳನ್ನ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು…

ನಮ್ಮ ರೈತರು ಮುಗ್ದರು ಕಳೆದ 2023 ರಲ್ಲಿ ನಡೆದ ಅವ್ಯವಹಾರ ಕಹಿ ಘಟನೆ ಕೆಲ ಕಲಬೆರಕೆ ಮದ್ಯವರ್ತಿಗಳ ಹಾವಳಿಯಿಂದ ತಿನ್ನ ಅನ್ನಕ್ಕೆ ವಿಷ ಪಾಶನ ಮಾಡಿದಂತೆ ನಿಜವಾದ ರೈತರಿಗೆ ಸರ್ಕಾರದ ಸಹಾಯಧನ ಸಿಗದಂತೆ ಕೆಲ‌ ಬೇರೊಬ್ಬ ಮದ್ಯವರ್ತಿಗಳಿಗೆ ಸಿಂಹಪಾಲು ಪಡೆದ ಘಟನೆ ಮರುಕಳಿಸಬಾರದು ಅಂದು 8 ಕೋಟಿ ಬಾಕಿ ಹಣವನ್ನ ಸಚಿವರಾದ ಕೆ ಎಚ್ ಮುನಿಯಪ್ಪರವರ ಬಳಿ ಮನವಿ ಮಾಡಿಕೊಂಡು ಹಣ ಮಂಜೂರು ಮಾಡಿಸಿ ರೈತರಿಗೆ ನೆರವು ನೀಡಲಾಗಿತ್ತು .

ಆದ್ದರಿಂದ ಅಧಿಕಾರಿಗಳ ನಿಗಾಹ ವಹಿಸಿ ಕೆಲಸ‌ ಮಾಡಿ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹4,880 ಬೆಂಬಲ ಬೆಲೆಗೆ ರಾಗಿ ಖರೀದಿ ಮಾಡಲಾಗುತ್ತಿದೆ. ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ರೈತರು ಸ್ವತಃ ಖರೀದಿ ಕೇಂದ್ರಕ್ಕೆ ಬಂದು ಬಯೊಮೆಟ್ರಿಕ್ ನೀಡಿ ರಾಗಿ ನೀಡಬೇಕು ಎಂದರು.

ಖರೀದಿ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕಿನಲ್ಲಿ ಖರೀದಿಯಾದ ರಾಗಿಯನ್ನು ಸ್ಥಳೀಯ ಪಡಿತರ ವಿತರಣಾ ವ್ಯವಸ್ಥೆ ಮೂಲಕವೇ ವಿತರಿಸಲಾಗುತ್ತದೆ. ಸಾರ್ವಜನಿಕ ಉಪಯೋಗಕ್ಕೆ ಬರುವ ರಾಗಿ ಶುದ್ಧವಾಗಿರುವಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದರು.

ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನಡೆಯುತ್ತಿದೆ. ತಾಲ್ಲೂಕಿನ ರೈತರು ಈಗಾಗಲೇ 3149 ನೋಂದಣಿಯಾಗಿದ್ದು 89.441 ಸಾವಿರ ಕ್ವಿಂಟಲ್ ಖರೀದಿ ಮಾಡಲಾಗುವುದು. ಖರಿದಿಗೆ ಅಗತ್ಯವಾಗಿದೆ ಎಂದರು

ತಹಶೀಲ್ದಾರ್ ಸೈಯದ್ ಕಲೀಂ ಉಲಾ ಮಾತನಾಡಿ
ರೈತರಲ್ಲಿ ಗೊಂದಲ ಬೇಡ
ಪ್ರತಿ ಕ್ವಿಂಟಾಲ್ ಗೆ 4880 ರೂಪಾಯಿ ಬೆಂಬಲ ಬೆಲೆ ಸರ್ಕಾರ ನೀಡುತ್ತಿದೆ .
ದ ಮಹತ್ವಕಾಂಕ್ಷೆ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿಯಲ್ಲಿ‌ ನಡೆಯುತ್ತಿದೆ ರೈತರು ಶಾಂತ ರೀತಿಯಲ್ಲಿ ವರ್ತಿಸಿ ಎಂದರು

ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಾಬರಾಜು ಇಲಾಖೆ ಜಿಲ್ಲಾ ವ್ಯವಸ್ಥಾಪಕರಾದ ನಾಗರಾಜ್ .ಎ ಪಿ.ಎಂ.ಸಿ ಕಾರ್ಯಧರ್ಶಿ ಶಿವಕುಮಾರ್ .ಆಹಾರ ನಾಗರೀಕ ಇಲಾಖೆ ವ್ಯವಸ್ಥಾಪಕ ಮನೋಜ್
ಗ್ಯಾರಂಟಿ ಯೋಜನೆಗಳ ಅದ್ಯಕ್ಷರಾದ ಷಂಷೀರ್ ಆಹಮದ್ .ಮುಖಂಡರಾದ ಮಹೇಶಣ್ಣ. ನ್ಯಾಯಬೆಲೆ ಅಂಗಡಿ ಮಾಲಿಕರ ಸಂಘದ ಅದ್ಯಕ್ಷರಾದ ಓಮಣ್ಣ. ರೈತ ಸಂಘದ ಮುಖಂಡ ನಿಂಗಪ್ಪ ಎ.ಪಿ.ಎಂ.ಸಿ ಕಾರ್ಯದರ್ಶಿ ಶಿವಕುಮಾರ್ .ರೈತ ಸಂಘದ ಮುಖಂಡ ಮಾರುತಿ
ಪ್ರಕಾಶರೆಡ್ಡಿ ಮುಖಂಡ ನಾಗೇಂದ್ರರೆಡ್ಡಿ .ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!