ಅಂದು ಕಾಂಗ್ರೆಸ್ ಇಂದಿರಾ ಕೈಯಲ್ಲಿ, ಇಂದು ಚಲವಾದಿಗಳ ಹಿಡಿತದಲ್ಲಿ:ದೇಶ ಮತ್ತು‌ ರಾಜ್ಯದಲ್ಲಿ ಬಿಜೆಪಿ ಮುಖಂಡ ಆಲೂರು ನಿಂಗರಾಜ್ ಆರೋಪ
ಮಾದಿಗರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. |

ಮಾದಿಗರಿಗೆ ಆಗುತ್ತಿರುವ ಅನ್ಯಾಯಕ್ಕೆ ಬೇಸರ


ಜಗಳೂರು.
ಇಂದಿರಾಗಾಂಧಿ ಅಂದು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದರಿಂದ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು . ಆದರೆ ಇಂದು ಕಾಂಗ್ರೆಸ್ ಪಕ್ಷ ಚಲವಾದಿಗಳ ಪಕ್ಷವಾಗಿದ್ದು, ಮಾದಿಗರ ವಿರುದ್ದ ಷಡ್ಯಂತ್ರ ಮಾಡುತ್ತಿದ್ದಾರೆ. ಮಾದಿಗರ ಏಳ್ಗಿ ಸಹಿಸದ ಚಲವಾದಿ ಸಮುದಾಯದ ಪ್ರಭಾವಿ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಒಳಮಿಸಲಾತಿಗೆ ಪ್ರಸ್ತುತದಲ್ಲಿ ಜಾರಿ ಮಾಡಲು ಮಿನಾಮೇಷ ಎಣಿಸುತ್ತಿದ್ದಾರೆ ಇಂತ ಸಚಿವರ ಮಾತು‌ ಕೇಳಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ ಚಲವಾದಿ ಸಮುದಾಯದ ಸಚಿವರುಗಳ ಮಾತಿಗೆ ಕಟು ಬಿದ್ದ ಸಿ ಎಂ. ಸಿದ್ದರಾಮಯ್ಯ ಒಳಮಿಸಲಾತಿ ವಿಚಾರದಲ್ಲಿ ಮೌನವಾಗಿದ್ದಾರೆ.

ಹಾಗಾಗಿ ಮಾದಿಗ ಸಮುದಾಯ ಎಚ್ಚರಿಕೆಯಿಂದ ನಡೆಯಬೇಕು ಎಂದು ಮಾದಿಗ ಸಮುದಾಯದ ಮುಖಂಡ ಆಲೂರು ನಿಂಗರಾಜ್ ಕರೆ ನೀಡಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಮಾದಿಗ ಸಮುದಾಯ ನೂರಾರು ವರ್ಷಗಳಿಂದಲೂ ದಬ್ಬಾಳಿಕೆ, ದೌರ್ಜನ್ಯ, ಜಾತಿ ನಿಂಧನೆಗಳಿಂದ ನೊಂದು-ಬೆಂದು ಹೋಗಿದೆ.

ಗ್ರಾಮಗಳಲ್ಲಿ ಅನ್ಯ ಸಮುದಾಯಗಳಿಂದ ಜಾತಿಯತೆ, ಅವಮಾನ, ಅಪಮಾನ ಎದುರಿಸಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಮಾದಿಗರಿಗೆ ಇಂದಿಗೂ ಸಮಾನತೆ ಸಿಕ್ಕಿಲ್ಲ. ದಲಿತರಿಗೆ ತೊಂದರೆಯಾದರೆ ಹೋರಾಟ ಮಾಡುವುದು ಮಾದಿಗರು ಆದರೆ ಲಾಭ ಪಡೆಯುವುದು ಮತ್ತೊಬ್ಬರು. ರಾಜ್ಯದಲ್ಲಿ ಪ್ರತಿಭಟನೆ, ಹೋರಾಟ ಮಾಡುವ ಮೂಲಕ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.

ಮಾದಿಗ ಸಮುದಾಯದ ಹೋರಾಟಗಾರರ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಮುದಾಯಕ್ಕೆ ಸಂವಿಧಾನದಡಿ ಒಳ ಮೀಸಲಾತಿ ಪಡೆಯಲು ೩೫ ವರ್ಷಗಳಿಂದಲೂ ಹೋರಾಟ ನಡೆಯುತ್ತಿದೆ. ಆದರೆ ಹೊಲೆಯ ಸಮುದಾಯದ ಕುತಂತ್ರದಿಂದ ಕೈಗೆ ಸಿಕ್ಕಿದ್ದು ಬಾಯಿ ಬಾರದಂತಾಗಿದೆ ನಮ್ಮ ಸ್ಥಿತಿ. ಆದ್ದರಿಂದ ಸ್ವಾಭಿಮಾನಿಗಳಿಗೆ ಹೋರಾಟ ಮಾಡಲು ಸಿದ್ದರಾಗಿ ಎಂದರು.


ಜಗಳೂರು ತಾಲೂಕಿನಲ್ಲಿ ಮಾದಿಗ ಸಮುದಾಯ ಸುಮಾರು ೩೭ ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಸಮುದಾಯವಾಗಿದೆ. ಆದರೆ ಒಗ್ಗಟ್ಟಿನ ಕೊರತೆಯಿಂದ ಜಿ.ಪಂ ಮತ್ತು ತಾ.ಪಂ ಸೇರಿದಂತೆ ಯಾವುದೇ ಸ್ಥಳಿಯ ಸಂಸ್ಥೆಗಳಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗುತ್ತಿಲ್ಲ. ನಮಗೆ ಪಕ್ಷಕ್ಕಿಂತ ಸಮುದಾಯ ಮುಖ್ಯವಾಗಿದೆ. ನಮ್ಮ ಹಕ್ಕಿಗಾಗಿ ಹೋರಾಟ ಅನಿವಾರ್ಯವಾಗಿದೆ. ಎಲ್ಲರು ಯೋಧರಂತೆ ಒಗ್ಗೂಡಿ ಒಳ ಮೀಸಲಾತಿ ಪಡೆಯಲು ಮುಂದೆ ಬರಬೇಕು ಎಂದರು.



ಮಾ.೧೨ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ:
ಒಳ ಮೀಸಲಾತಿ ಜಾರಿಗೊಳಿಸಿ ಹುದ್ದೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರ ವಿರುದ್ದ ಮಾ.೧೨ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದು ಮಾದಿಗರಿಗೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ. ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ಆದ್ದರಿಂದ ಜಗಳೂರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು.

ಈ ಭಾಗದ ಮಾದಿಗ ಸಮುದಾಯದ ಮುಖಂಡರು ಮುಂದಾಳತ್ವ ವಹಿಸಿ ಕರೆದುಕೊಂಡು ಬರಬೇಕು ಎಂದು ಮುಖಂಡ ಆಲೂರು ನಿಂಗರಾಜ್ ತಿಳಿಸಿದರು.


ಈ ಸಂದರ್ಭದಲ್ಲಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕುಬೇರಪ್ಪ ಗೌರಿಪುರ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಅಧ್ಯಕ್ಷ ಪೂಜಾರಿ ಸಿದ್ದಪ್ಪ, ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕಾಧ್ಯಕ್ಷ ಕ್ಯಾಸೇನಹಳ್ಳಿ ಹನುಮಂತಪ್ಪ, ಮುಖಂಡರಾದ ಗುತ್ತಿದುರ್ಗ ರುದ್ರೇಶ್, ಸಿ.ಎಂ ಹೊಳೆ ಮಾರುತೇಶ್, ಮಾಚಿಕೆರೆ ಸತೀಶ್, ಕಸವ್ವನಹಳ್ಳಿ ಮಂಜುನಾಥ್, ಶಶಿಕುಮಾರ್, ಗುತ್ತಿದುರ್ಗ ದಾವಣಗೆರೆಯ ರವಿಕುಮಾರ್, ಮಂಜುನಾಥ್, ರಘು, ಪತ್ರಕರ್ತ ರಾಜು ವ್ಯಾಸಗೊಂಡನಹಳ್ಳಿ ಸೇರಿದಂತೆ ಮತ್ತಿತರರಿದ್ದರು.

Leave a Reply

Your email address will not be published. Required fields are marked *

You missed

error: Content is protected !!