filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ಅಂಗಡಿ,ಹೋಟೆಲ್ ಗಳಿಗೆ ತಹಶೀಲ್ದಾರ್ ನೇತೃತ್ವದ ತಂಡ ಕಾರ್ಯಾಚರಣೆ:ಅನಧಿಕೃತ 20‌ ಗೃಹಬಳಕೆ ಸಿಲಿಂಡರ್ ವಶ

ಜಗಳೂರು ಸುದ್ದಿ,
ಜಗಳೂರು,ಮಾ.16:ಪಟ್ಟಣದ ವಿವಿಧ ಟೀ ಅಂಗಡಿ,ಹೋಟೆಲ್ ಗಳಲ್ಲಿ ಬಳಕೆಮಾಡುತ್ತಿದ್ದ ಅನಧಿಕೃತ ಗೃಹಬಳಕೆ ಸಿಲಿಂಡರ್ ಗಳನ್ನು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 20 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಯಿತು.

ನಂತರ ಸುದ್ದಿಗಾರರೊಂದಿಗೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ,,ಪಟ್ಟಣದ ಚಳ್ಳಕೆರೆ,ಬಿದರಕೆರೆ ರಸ್ತೆ,ಬಸ್ ನಿಲ್ದಾಣ,ಸೇರಿದಂತೆ ವಿವಿಧೆಡೆ ಬಳಕೆಮಾಡುತ್ತಿದ್ದ ಗೃಹಬಳಕೆ ಸಿಲಿಂಡರ್ ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.ಕಳೆದ 15 ದಿನಗಳ ಹಿಂದೆ ಗೃಹಬಳಕೆ ಸಿಲಿಂಡರ್ ಗಳನ್ನು ಟೀ ಅಂಗಡಿ,ಹೋಟೆಲ್ ಗಳಲ್ಲಿ ಬಳಕೆಮಾಡದಂತೆ ನೋಟಿಸ್ ನೀಡಲಾಗಿತ್ತು.ಆದರೆ ಗ್ರಾಹಕರು ಕಮರ್ಷಿಯಲ್ ಸಿಲಿಂಡರ್ ಬಳಕೆಮಾಡುವ ಬದಲು ಗೃಹಬಳಕೆ ಸಿಲಿಂಡರ್ ಗಳನ್ನೇ ಬಳಕೆಮಾಡುತ್ತಿರುವುದು ಕಂಡುಬರುತ್ತಿದೆ ಪ್ರತಿ 15 ದಿನಗಳಿಗೊಮ್ಮೆ ಕಾರ್ಯಾಚರಣೆ ನಡೆಸಲಾಗುವುದು ಹೋಟೆಲ್ ವ್ಯಾಪಾರಿಗಳು ಗೃಹಬಳಕೆ ಸಿಲಿಂಡರ್ ಬಳಕೆಮಾಡಿದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ‌ನೀಡಿದರು.

ಸಿಲಿಂಡರ್ ಅಭಾವ ಸೃಷ್ಟಿಯಾಗಿಲ್ಲ:ತಾಲ್ಲೂಕಿನಲ್ಲಿ ಗ್ಯಾಸ್ ಏಜೆನ್ಸಿಗಳಲ್ಲಿ ಗೃಹಬಳಕೆ ಹಾಗೂ ಕಮರ್ಷಿಯಲ್ ಸಿಲಿಂಡರ್ ಗಳ ದಾಸ್ತಾನುಗಳಿದ್ದು ಗ್ರಾಹಕರು ಆತಂಕಪಡುವ ಅವಶ್ಯಕತೆಯಿಲ್ಲ.ಸಿಲಿಂಡರ್ ಬುಕ್ಕಿಂಗ್ ನೊಂದಿಗೆ ಗೃಹ ಬಳಕೆಗೆ ಸಿಲಿಂಡರ್ ಪೂರೈಕೆ ಮಾಡಿಕೊಳ್ಳಬೇಕು.ಏಜೆನ್ಸಿಗಳು ಕೃತಕ ಅಭಾವ ಸೃಷ್ಟಿಸಿ ಸಿಲಿಂಡರ್ ಗಳನ್ನು ನಿಗದಿತ ದರಕ್ಕಿಂತ ಅಧಿಕ ದರದಲ್ಲಿ ಮಾರಾಟನಡೆಸಿದರೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಕಮರ್ಷಿಯಲ್ ಸಿಲಿಂಡರ್ ಗಳ ದಾಸ್ತಾನುವಿದ್ದು ಹೋಟೆಲ್ ವ್ಯಾಪಾರಿಗಳು ಕಡ್ಡಾಯವಾಗಿ ಕಮರ್ಷಿಯಲ್ ಸಿಲಿಂಡರ್ ನ್ನೇ ಬಳಕೆಮಾಡಬೇಕು ತಾಲ್ಲೂಕಿನಲ್ಲಿ ಸಿಲಿಂಡರ್ ಅಭಾವ ಸೃಷ್ಟಿಯಾಗಿಲ್ಲ ಎಂದು ಮಾಹಿತಿನೀಡಿದರು.

ಈ ಸಂದರ್ಭದಲ್ಲಿ ಆಹಾರ ಶಾಖೆಯ ಶಿವಪ್ರಕಾಶ್,ಆರ್ ಐ ಕೀರ್ತಾಂಜನೇಯ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!