ಪೂರ್ವ ಸಿದ್ದತೆ ಸಭೆಯಲ್ಲಿ
ಪರೀಕ್ಷೆ ವೇಳೆಯಲ್ಲಿ ಲೋಪವಾಗದಂತೆ ಅಗತ್ಯ ಕ್ರಮವಹಿಸಬೇಕು :ಬಿಇಓ ಹಾಲಮೂರ್ತಿ ಶಿಕ್ಷಕರಿಗೆ ಸೂಚನೆ.
ಸುದ್ದಿ,
ಜಗಳೂರು,ಮಾ.16:ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇಲೋಪವಾಗದಂತೆ,ಪಾರದರ್ಶಕ,ಸುವ್ಯವಸ್ಥಿತ ಪರೀಕ್ಷೆ ನಡೆಯಲು ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಬಿಇಓ ಹಾಲಮೂರ್ತಿ ಸೂಚಿಸಿದರು.
ಸೋಮವಾರ ಪಟ್ಟಣದ ಬಿಆರ್ ಸಿ ಕಛೇರಿಯಲ್ಲಿ ತಾಲ್ಲೂಕಿನ ವಿವಿಧ ಪ್ರೌಢಶಾಲಾ ಮುಖ್ಯಶಿಕ್ಷಕರು,ನೋಡೆಲ್ ಅಧಿಕಾರಿಗಳು,ಖಾಸಗಿ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.
ಒಟ್ಟು 53 ಪ್ರೌಢ ಶಾಲೆಗಳಿಂದ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರಿನ ಪೂರೈಕೆ,ಪ್ರಥಮ ಚಿಕಿತ್ಸೆ ಕಿಟ್ಸ್,ಕೊಠಡಿಗಳಲ್ಲಿ ಗಾಳಿ,ಬೆಳಕಿನ ವ್ಯವಸ್ಥೆಗೆ ವಿದ್ಯುತ್ ಪೂರೈಕೆ,ಪರಿಕರಗಳ ಆಸನ ವ್ಯವಸ್ಥೆ ಮೂಲಸೌಕರ್ಯ ಒದಗಿಸಬೇಕು.ವರ್ಷದ ಪರಿಶ್ರಮ,ತರಬೇತಿಗೆ ತಕ್ಕಂತೆ ಫಲಿತಾಂಶ ಬರಲು ಕಾಳಜಿವಹಿಸಬೇಕು.ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡದಿಂದ ಮುಕ್ತಗೊಳಸಿಬೇಕು ಎಂದು ತಿಳಿಸಿದರು.
ಪರೀಕ್ಷಾ ಸಮಯದಲ್ಲಿ ಬೆಳಿಗ್ಗೆ 10:10 ಗಂಟೆಗೆ ಪ್ರಶ್ನೆಪತ್ರಿಕೆ ವಿತರಿಸಿ ಮಕ್ಕಳಿಗೆ ಅಭ್ಯಾಸಮಾಡಿ ನಿಧಾನವಾಗಿ ಪರೀಕ್ಷೆ ಬರೆಯಲು ಸಲಹೆ ನೀಡಬೇಕು.ಉತ್ತರ ಪತ್ರಿಕೆ ನೀಡಿ ಸಮರ್ಪಕ ಮಾಹಿತಿ ಭರ್ತಿಮಾಡಲು ಸೂಚಿಸಬೇಕು.ಉತ್ತರ ಪತ್ರಿಕೆಗಳ ಪ್ರತಿ ಬಂಡಲ್ ಗಳನ್ನು 6 ಕೆಜಿ ಒಳಗಾಗಿ ಪ್ಯಾಕ್ ಮಾಡಬೇಕು.ಪ್ರಶ್ನೆಪತ್ರಿಕೆ ಬಳಕೆ,ಉಳಿಕೆ ಕುರಿತು ಆನ್ ಲೈನ್ ನಲ್ಲಿ ನಮೂದಿಸಬೇಕು.ಮೊಬೈಲ್ ಸ್ವಾಧೀನಪಡಿಸಿಕೊಂಡು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಬೇಕು.ಮೊಬೈಲ್ ಗಳ ಬಳಕೆಯಿಂದ ಮಕ್ಕಳಿಗೆ ತೊಂದರೆಯಾಗಬಾರದು.ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿದ ಮೇಲ್ವಿಚರಕರು,ಶಾಲೆಯ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಾಗಬೇಕು ನಿರ್ಲಕ್ಷ್ಯದಿಂದ ಗೊಂದಲ ಸೃಷ್ಟಿಸಿದರೆ ಸೂಕ್ತ ಜರುಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿರ್ ಸಿ ಡಿಡಿ ಹಾಲಪ್ಪ,ಪಿಎಸ್ ಅರವಿಂದನ್,ಬಸವರಾಜ್,ಮಂಜಪ್ಪ,ಇಸಿಓ ಬಸವರಾಜಪ್ಪ,ದಿದ್ದಿಗಿ ಮಂಜಪ್ಪ,ಹನುಮಂತಪ್ಪ,ಸೇರಿದಂತೆ ಪ್ರೌಢಶಾಲೆ ಶಿಕ್ಷಕರು ಹಾಜರಿದ್ದರು.
