ಕೇವಲ ಅನಗತ್ಯ ಖಾಸಗಿ ಟೀಕೆ ಟಿಪ್ಪಣೆ ಮಾಡುವವರ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವೆ ನಾನು ಯಾರಿಗು ಹೆದರುವ ಪ್ರಮೆಯೇ ಇಲ್ಲ ಅಭಿವೃದ್ದಿಯೇ ನನ್ನ ಕನಸು
ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ,
ಜಗಳೂರು,ಮಾ.21:ಕ್ಷೇತ್ರದಲ್ಲಿ‌ ನನ್ನ ಅಭಿವೃದ್ದಿ ಕೆಲಸಗಳನ್ನು ನೋಡಿ ಸಹಿಸದೆ ದಾಖಲೆಯಿಲ್ಲದೆ , ವಿನಾಕಾರಣ ಖಾಸಗಿಯಾಗಿ ಟೀಕೆ ಮಾಡಿದರೆ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಮಾಜಿ ಶಾಸಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಜಗಳೂರು ಪಟ್ಟಣದ ಜನ ಸಂಪರ್ಕ ಕಛೇರಿ ಆವರಣದಲ್ಲಿ‌ ಜರುಗಿದ ಎಸ್ ಸಿ ಎಸ್ ಟಿ ಜನಾಂಗದ ಅಲೆಮಾರಿ /ಅರೆ ಅಲೆಮಾರಿ ನಿವೇಶನ ರಹಿತರಿಗೆ ನಿವೇಶನ ಹಕ್ಕುಪತ್ರ ವಿತರಿಸಿ,ಜೆಎಸ್ ಡಬ್ಲ್ಯೂ ಕಂಪನಿಯಿಂದ ವಿತರಿಸಿದ ರೂ.25 ಲಕ್ಷ ವೆಚ್ಚದ ಮುಕ್ತಿವಾಹನ ಲೋಕಾರ್ಪಣೆ ಉದ್ಗಾಟನೆ ಸಮಾರಂಭದಲ್ಲಿ ಉದ್ದೇಶಿಸಿ ಮಾತನಾಡಿದರು.

ಮಾಜಿ ಶಾಸಕರುಗಳು ಏನು ಕಡಿದು ಕಟ್ಟಿಹಾಕಿದಿರಿ?:
ನಾನು ಕೇವಲ ಮೂರು ವರ್ಷದ ಅವಧಿಯಲ್ಲಿ ಗುರುತರವಾದ ಕೆಲಸ ಮಾಡಿರುವೆ ಜಗಳೂರು ಪಟ್ಟಣದ ರಸ್ತೆ ಅಭಿವೃದ್ದಿ ಯಾಕೆ ನಿಮ್ಮ ಆಡಳಿತಾವಧೊಯಲ್ಲಿ ಮಾಡಲಿಲ್ಲ? ಸಿದ್ದಿಹಳ್ಳಿ ಹಳ್ಳದ ಬ್ರಿಡ್ಜ ಕಂ ಬ್ಯಾರೇಜ್,ಉದ್ಗಟ್ಟ ಬಳಿ ಬ್ರಿಡ್ಜ್ ನಿರ್ಮಾಣ,ಸ್ವಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ಸುಂದರ ಕೆರೆ ನಿರ್ಮಿಸಿ ಬೋಟಿಂಗ್ ವ್ಯವಸ್ಥೆ,ಜಗಳೂರು ಕೆರೆಯ ಅಭಿವೃದ್ದಿ,ಬಡನಿರ್ಗತಿಕರಿಗೆ ನೊಂದವರಿಗೆ ನೆರವು ಕಾರ್ಯಕ್ರಮಗಳ ಮೂಲಕ ಜನರ ಕಲ್ಯಾಣ ಉದ್ದೇಶವೆ ನನ್ನ ಕನಸು. ಜಗಳೂರು ಮುಖ್ಯ ರಸ್ತೆ ಅಭಿವೃದ್ದಿಯಲ್ಲಿ‌ ಆಟ ಆಡುವ ನೀವುಗಳು .ಮಗು ಜಿವುಟಿ ತೊಟ್ಟಿಲು ತೂಗುವವರು ನೀವೇ ಆದರೆ ನಾನು ಜಾರಿ,ಕೋರ್ಟ್ ನ ತಾಂತ್ರಿಕ ಸಮಸ್ಯೆ ಸರಿಪಡಿಸಿ,ಸ್ವಯಂಪ್ರೇರಿತವಾಗಿ ಕಟ್ಟಡ ತೆರವಿಗೆ ವರ್ತಕರ ವಿಶ್ವಾಸ ಗಳಿಸಿ ಪಟ್ಟಣದ ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಮುಂದಾಗಿರುವೆ .ನಾನು ಯಾರಿಗು ಎದುರುವ ಪ್ರಮೆಯೇ ಇಲ್ಲ ಅಭಿವೃದ್ದಿಯೇ ನನ್ನ ಕನಸು ಜಗಳೂರು ಪಟ್ಟಣದ ಮದ್ಯೆ ಬಾಗದಲ್ಲಿ

,ಡಿಜಿಟಲ್ ಗ್ರಂಥಾಲಯ ಸೇರಿದಂತೆ ಕ್ಷೇತ್ರದಲ್ಲಿ ನಡೆಯುವ ದಾರ್ಮಿಕ ಕಾರ್ಯಗಳ ಜೊತೆಗೆ ಹಸಿದವರ ನೊಂದವರ ಬಡವರ ದೀನ ದಲಿತರ‌ ಕಷ್ಟ ಸಂಕೊಲೆಗಳಲ್ಲಿ ಭಾಗಿಯಾಗಿ ನೊಂದವರ ನೆರವಿನ ಮೂಲಕ ಸಹಾರ್ಥ ಮಾಡಿರುವೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆಸಿದ್ದಾರೆ.

ಈ ಕ್ಷೇತ್ರದಲ್ಲಿ .ಒಬ್ಬರು ಮೂರು ಬಾರಿ,ಮತ್ತೊಬ್ಬರು ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿ ಇಂತಹ ಮಹತ್ತರ ಕೆಲಸ ಮಾಡಿದ್ದೀರಾ ನಿಮ್ಮ ಆಡಳಿತಾವಧಿಯಲ್ಲಿ ಏನು ಕಡಿದು ಕಟ್ಟಿ ಹಾಕಿದಿರಿ ತೋರಿಸಿ ಎಂದು ಸವಾಲು ಹಾಕಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ
ಜನರೇ ಸ್ವಯಂಪ್ರೇರಿತರಾಗಿ ಬಂದರೆ ಚುನಾವಣೆಗೆ ನಿಲ್ಲುವೆ:ನಾನು ಚುನಾವಣೆಗಾಗಿ ಮತಬ್ಯಾಂಕ್ ಗಾಗಿ,ಪ್ರಚಾರಕ್ಕಾಗಿ ಕಸಗುಡಿಸಲ್ಲ ,ವಚನಗಳನ್ನು ಹೇಳಲ್ಲ.ಹೈಕೋರ್ಟ್ ಸುಪ್ರೀಂ ಕೋರ್ಟ್ ನಲ್ಲಿ ಭಗವದ್ಗೀತೆ ಪುಸ್ತಕ ಇಟ್ಟಿದ್ದಾರೆ.ಧರ್ಮದ ತಳಹದಿಯ ಮೇಲೆ ದೇಶ ನಿಂತಿದೆ ಎಂಬುವ ಕನಿಷ್ಠ ಜ್ಞಾನ ಮಾಜಿ ಶಾಸಕ ಎಚ್.ಪಿ
ರಾಜೇಶ್ ಅವರಿಗೆ ಇಲ್ಲ.ಅಭಿವೃದ್ದಿಗಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವೆ ಆದರೆ ದಂಡಿಸಿಲ್ಲ,ಎದುರಿಸಿಲ್ಲ,ಅವರ ವೈಯಕ್ತಿಕ ಕೆಲಸಕ್ಕೆ ಪೋಲೀಸ್ ಅಧಿಕಾರಿ ವರ್ಗಾವಣೆಗೊಂಡರೆ ನಾನು ಕಾರಣವಲ್ಲ.ನನಗೆ ಚುನಾವಣೆ ನಿರೀಕ್ಷೆಯಿಲ್ಲ.ಜನರೇ ಸ್ವಯಂಪ್ರೇರಿತವಾಗಿ ನನ್ನ ಬಳಿ ಆಗಮಿಸಿದರೆ ಮುಂದಿನ ಚುನಾವಣೆ ನಡೆಸುವೆ ಎಂದು ಸ್ಪಷ್ಟನೆ ನೀಡಿದರು.

ಕರ್ನಾಟಕ ರಾಜ್ಯ ಕೊರಚ ಮಹಾಸಭಾ ರಾಜ್ಯಾಧ್ಯಕ್ಷ ಆದರ್ಶ ಯಲ್ಲಪ್ಪ ಮಾತನಾಡಿ,ಪಟ್ಟಣದ ಬಸ್ ನಿಲ್ದಾಣದಲ್ಲಿ ಕೊರಚ ಸಮುದಾಯ ಕುಟುಂಬಗಳು ಶೌಚಾಲಯದಲ್ಲಿ ಸಾವುನೋವುಗಳನ್ನು ಎದುರಿಸಿ ವಾಸವಿದ್ದು,ಪ್ರಾಣಿಗಳಿಗಿಂತ ಕೀಳಾಗಿ ಜೀವನಸಾಗಿಸುತ್ತಿದ್ದ ಕುಟುಂಬಗಳಿಗೆ ಧ್ವನಿಯಾಗಿ ಶಾಸಕ ಬಿ.ದೇವೇಂದ್ರಪ್ಪ ಅವರು ಅಂತಃಕರಣದಿಂದ ಸ್ಪಂದಿಸಿದರು.ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ನಂತರ ಸಾಕಷ್ಟು ದಾಖಲಾತಿ ಅಡೆತಡೆಗಳನ್ನು ಸರಿಪಡಿಸಿ ನಿವೇಶನ ಒದಗಿಸಲಾಗಿದೆ.ಸಂಘಟಿತ ಹೋರಾಟದಿಂದ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ ಎಂದರು.

ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಪಟ್ಟಣದ ಹೊರಹೊಲಯದ
1.20 ಗುಂಟೆ ಜಾಗದ ಬಿ.ದೇವೇಂದ್ರಪ್ಪ ಬಡಾವಣೆ ನಾಮಕರಣಗೊಳಿಸಿ 44 ನಿವೇಶನಗಳ‌ ಹಂಚಿಕೆಯಾಗಿದ್ದು ಮೊದಲಹಂತದಲ್ಲಿ 36 ಜನ ಫಲಾನುಭವಿಗಳಿಗೆ ನಿವೇಶನ ಒದಗಿಸಲಾಗಿದೆ.ಸಮರ್ಪಕ ದಾಖಲಾತಿ ಪೂರೈಕೆಮಾಡಿದ ನಂತರ ಉಳಿದ 8‌ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಾಹಿತಿನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಸಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಷಂಷೀರ್ ಅಹಮ್ಮದ್,ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಜೆಎಸ್ ಡಬ್ಲೂ ವ್ಯವಸ್ಥಾಪಕ ನಿತಿನ್,ಹಾಲೇಶ್,ಹೈಕೋರ್ಟ್ ವಕೀಲ ಅನಂತನಾಯ್ಕ,ಎಸ್ ಸಿ ಎಸ್ ಟಿ ಅಲೆಮಾರಿ ಸಂಘದ ರಾಜ್ಯಾಧ್ಯಕ್ಷ ವೀರೇಶ್ ವಿಭೂತಿ,ಕೃಷ್ಣಪ್ಪ,ಪ.ಪಂ‌ ನಾಮನಿರ್ದೇಶಿತ ಸದಸ್ಯರಾದ ತಾನಾಜಿ ಗೋಸಾಯಿ,ಶಾಂತಕುಮಾರ,ಕುರಿ ಜಯ್ಯಣ್ಣ,ಮುಖಂಡರಾದ ಬಿ. ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಮಧುಶಂಕರ್,ಸೇರಿದಂತೆ ಇದ್ದರು.

:
ನಾನು ಶಾಸಕನಾಗಿರುವುದನ್ನು ನೋಡಿ ಸಹಿಷ್ಣುತೆಯಿಲ್ಲ‌ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವೆ ಇಬ್ಬರೂ ಹಂಚಿಕೊಳ್ಳಿ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಶಾಸಕನಾಗಿರುವುದು ಮಾಜಿ ಶಾಸಕರಿಗೆ ಇಷ್ಟವಿಲ್ಲದಿದ್ದರೆ ರಾಜಿನಾಮೆ ನೀಡುವೆ ಅಧಿಕಾರ ದಾಹವಿರುವ ನೀವು ಹಂಚಿಕೊಳ್ಳಿ.
ಈ ಹಿಂದೆ ಶಿಷ್ಟಾಚಾರದ ಹೆಸರಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ್ರಿ,ಇವಾಗ ಸ್ವಾಭಿಮಾನ ಬಿಟ್ಟು ಬಿಜೆಪಿ ಪಕ್ಷದಲ್ಲಿ ಒಂದಾಗಿ ಅವರ ಮನೆಗೆ ತೆರಳುತ್ತೀರಿ ಇದು ಸರಿನಾ? ನೀವು ನನಗೆ ಕಿರಿಯರು,ಅಳಿಯನಾಗಿರುವಿರಿ ಮುಂದೊಂದು ದಿನ ನಾವಿಬ್ಬರೂ ಒಂದಾಗುವ ಕಾಲ ಬರಬಹುದು.ಟೀಕೆ ಟಿಪ್ಪಣಿಗಳು ಇಲ್ಲಿಗೆ ಅಂತ್ಯವಾಗಲಿ ಅಭಿವೃದ್ದಿ ಕೆಲಸಗಳಿಗೆ ಪಕ್ಷಾತೀತವಾಗಿ ಸಲಹೆ ಸಹಕಾರ ನೀಡಬೇಕು‌ ಎಂದು ಕುಟುಕಿದರು
—– ಬಿ.ದೇವೇಂದ್ರಪ್ಪ ಶಾಸಕ ಜಗಳೂರು,

Leave a Reply

Your email address will not be published. Required fields are marked *

error: Content is protected !!