ಗೌರಿಪುರ ಬಳಿ ರೂ.198‌ ವೆಚ್ಚದಲ್ಲಿ 220‌ಕೆವಿ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಟೆಂಡರ್‌ ಪ್ರಕ್ರಿಯೆ:ಬಿ.ದೇವೇಂದ್ರಪ್ಪ

ಸುದ್ದಿ,
ಜಗಳೂರು,ಮಾ.21:ಗೌರಿಪುರ ಬಳಿ ರೂ. 198‌ಕೋಟಿ ವೆಚ್ಚದಲ್ಲಿ 220 ಕೆವಿ‌ ವಿದ್ಯುತ್ ಪ್ರಸರಣ ಉಪಕೇಂದ್ರ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಶನಿವಾರ ಪಟ್ಟಣದ ಶಾಸಕರ ಜನಸಂಪರ್ಕ ಮುಂಬಾಗ ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಟಿ.ಜಿ.ಪ್ರವೀಣ್ ಗೌಡ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ಟಿ‌.ಗುರುಸಿದ್ದನಗೌಡರು ತಾಲ್ಲೂಕಿನಲ್ಲಿ ಹಲವಾರು ಚೆಕ್ ಡ್ಯಾಂ ನಿರ್ಮಿಸಿದರು,ಗುಡ್ಡವನ್ನು ಸಮತಟ್ಟಾಗಿಸಿ ಕ್ರೀಡಾಂಗಣ ನಿರ್ಮಿಸಿದರು.ಅವರ ಆಡಳಿತ ಅಭಿವೃದ್ದಿ ಕೆಲಸಗಳು ನನಗೆ ಸ್ಪೂರ್ತಿ ತಂದಿದೆ.ನನಗೆ ವಿದ್ಯಾಸಂಸ್ಥೆಯಲ್ಲಿ ಜವಾನ ಹುದ್ದೆ ನೀಡಿ,ನನ್ನ ಕುಟುಂಬಕ್ಕೆ ಬದುಕು,ಭವಿಷ್ಯ ಕಲ್ಪಿಸಿದ ತಿಪ್ಪೇಗುಂಡಿ ಕಲ್ಲಜ್ಜರ ಕುಟುಂಬ ದಾರಿದೀಪವಾಗಿದೆ.ಅವರ ಕುಟುಂಬದ ಮಾಜಿ ಶಾಸಕ ಗುರುಸಿದ್ದನಗೌಡರು ರಾಜಕಾರಣ ವ್ಯವಸ್ಥೆಯಿಂದ ಅಂತರದಲ್ಲಿತ್ತು.ಇದೀಗ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಶಕ್ತಿ ತುಂಬಿದೆ.ಅವರ ಮಾರ್ಗದರ್ಶನ,ಸಹಕಾರದಿಂದ ಮುಂದಿನ ಚುನಾವಣೆಗಳ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕ್ರೀಡಾಂಗಣವನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗುವುದು.ಕೊಣಚಗಲ್ ಬಳಿ 10 ಎಕರೆ ಸರ್ಕಾರಿ ಜಮೀನಿನಲ್ಲಿ ಕಾರ್ಮಿಕರ ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರದಿಂದ ಮಂಜೂರಾದ ಕಾರ್ಮಿಕ ವಸತಿಶಾಲೆಯನ್ನು ನಿರ್ಮಾಣಮಾಡಲು ಕ್ರಮಕೈಗೊಳ್ಳಲಾಗುವುದು.ರೈತರ ಜಮೀನುಗಳಿಗೆ ವಿದ್ಯುತ್ ಸಮಸ್ಯೆ ನೀಗಿಸಲು ಗೌರಿಪುರ ಬಳಿ 220ಕೆವಿ ವಿದ್ಯುತ್ ಪ್ರಸರಣ ಉಪಕೇಂದ್ರ ಟೆಂಡರ್ ಪ್ರಕ್ರಿಯೆಯಲ್ಲಿದ್ದು ತಿಂಗಳೊಳಗಾಗಿ ಚಾಲನೆ ಸಿಗಲಿದೆ ಮುಂದಿನ ವರ್ಷಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಗೌಡ ಮಾತನಾಡಿ,ನಮ್ಮ‌ ಕುಟುಂಬದ ಮೇಲೆ ವಿಶ್ವಾಸ ಹೊಂದಿದ ಶಾಸಕರ ಕಾಳಜಿ,ಜಿಲ್ಲಾ ವರಿಷ್ಠರ ಸಹಕಾರದಿಂದ ಜಿಲ್ಲಾ ಉಪಾಧ್ಯಕ್ಷ ಸ್ಥಾನ ಲಭಿಸಿದೆ.ಪಕ್ಷ ಸಂಘಟನೆಗೆ ಸದಾ ಶ್ರಮಿಸುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್,ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಷಂಷೀರ್ ಅಹಮ್ಮದ್ ಮುಖಂಡರಾದ ಡಾ.ಟಿ.ಜಿ ರವಿಕುಮಾರ್,ಅರವಿಂದಗೌಡ,ಪ್ರಕಾಶ್,ಗ್ರಾ.ಪಂ ಮಾಜಿ ಅಧ್ಯಕ್ಷರಾದ ಶಿವಣ್ಣ,ಉಜ್ಜಪ್ಳ‌ಮಂಜುನಾಥ್,ಕಿರಣ್,ಗಡಿಗುಡಾಳ್ ಶಿವಾನಂದಪಾಟೀಲ್,ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!