ಜಗಳೂರು : ಕಡಲೆ ಖರೀದಿ ಕೇಂದ್ರ ರೈತರಿಗೆ ವರದಾನವಾಗಲಿದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡಲೆ ಕರಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದವರು.

ತಾಲೂಕಿನ ತೊರೆಸಾಲುಭಾಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 5000 ಹೆಕ್ಟ್ ರ್ ಬಿತ್ತನೆ ಮಾಡಿದ್ದಾರೆ

ರೈತರು ಬೆಳೆದ ಬೆಳೆಗೆ ಸಮರ್ಪಕವಾದ ಬೆಲೆ ಬೆಲೆ ದೊರೆಯಬೇಕು ಎಂಬ ಉದ್ದೇಶದಿಂದ ಸರಕಾರವು ಖರಿದಿ ಕೇಂದ್ರಗಳನ್ನು ತೆರೆಯುತ್ತಿದ್ದು ಇವು ರೈತರಿಗೆ ಸದುಪಯೋಗವಾಗಬೇಕು
ಕಡಲೆ ಖರೀದಿ ಕೇಂದ್ರಗಳಲ್ಲಿ ರೈತರು ಯಾವುದೇ ಮಧ್ಯವರ್ತಿಗಳಿಂದ ಬಾರದೆ ನೇರವಾಗಿ ಬಂದು ಮಾರಾಟ ಮಾಡಬೇಕು

ಒಂದು ಎಕರೆ ಜಮೀನು ಹೊಂದಿರುವ ರೈತರಿಗೆ 4 ಕ್ವಿಂಟಲ್ ಮತ್ತು 10 ಎಕರೆಗಿಂತ ಅಧಿಕ ಜಮೀನು ಹೊಂದಿರುವಂತ ರೈತರಿಗೆ 40 ಕ್ವಿಂಟಲ್ ವರೆಗೆ ಖರೀದಿ ಕೇಂದ್ರದಲ್ಲಿ ರೈತರು ನಿಯಮನುದಾರ ನೀಡಲು ಅವಕಾಶವಿದೆ.

ಒಂದು ಕ್ವಿಂಟಲ್ ಕಡಲೆಗೆ ೫೮೭೫ ರೂ ದರವನ್ನು ಸರ್ಕಾರ ನಿಗದಿ ಮಾಡಿದ್ದು ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ
ಖರೀದಿ ಕೇಂದ್ರಗಳಲ್ಲಿ ತೂಕ ಸಮರ್ಪಕವಾಗಿರಬೇಕು ಮತ್ತು ಅಧಿಕಾರಿಗಳು ಗುಣಮಟ್ಟವನ್ನು ಪರಿಶೀಲಿಸಬೇಕು ಉತ್ತಮ ಗುಣಮಟ್ಟದ ಬೆಳೆಗಳಿಗೆ ಉತ್ತಮ ಬೆಲೆ ನೀಡಲಾಗುತ್ತದೆ. ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆಯೂ ಇದ್ದು ಇದರಿಂದ ಪಾರದರ್ಶಕತೆ ಮತ್ತು ನಂಬಿಕೆ ಹೆಚ್ಚುತ್ತದೆ ಎಂದರು.

ತಾಲೂಕಿನಲ್ಲಿ ರಾಗಿ ಅಧಿಕವಾಗಿ ಬೆಳೆಯುತ್ತಿದ್ದು ಈಗಾಗಲೇ ರಾಗಿ ಕೇಂದ್ರ ತೆರೆಯಲಾಗಿದ್ದು ಈ ಕೇಂದ್ರವು ಸಮರ್ಪಕವಾಗಿ ನಡೆಯುತ್ತಿದೆ ಈ ಹಿಂದೆ ರಾಗಿ ಕೇಂದ್ರ ಖರೀದಿ ಕೇಂದ್ರದಲ್ಲಿ ನ್ಯೂನತೆಗಳು ಉಂಟಾಗಿದ್ದವು ಅವುಗಳನ್ನು ರಾಜ್ಯಮಟ್ಟದಲ್ಲಿ ಓಡಾಡಿ ಬಗೆಹರಿಸಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಎಸ್ಸಿ ಘಟಕದ ಅಧ್ಯಕ್ಷ ಮಹೇಶ್ವರಪ್ಪ, ಜಗಳೂರು ಟೌನ್ ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಗಳೂರಯ್ಯ ಕಾರ್ಯ ದರ್ಶಿ ರಾಮು, ಅಕೌಂಟೆಂಟ್ ಮೂರ್ತಿ , ನಿರ್ದೇಶಕರುಗಳಾದ ಬಿ .ಟಿ. ರವಿಕುಮಾರ್ ,ಉಮೇಶ್ ಬಾಬು, ಮುಜುಬೂರು ರೆಹಮಾನ್, ಬಸವರಾಜ್ ನಾಗಭೂಷಣ್, ಸೇರಿದಂತೆ ಮುಖಂಡರಾದ ಶೇಖರಪ್ಪ , ರಾಜು , ಗೊಲ್ಲರಟ್ಟಿ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!