Editor by m.rajappa vyasagondanahalli.
Shukradeshe news Kannada news online portal jlr news
ಅಹಿಂಸಾ ತತ್ವವನ್ನ ಆಳವಡಿಸಿಕೊಂಡ ಜೈನ ಧರ್ಮ ಮತ್ತು ಬೌದ್ದ ಧರ್ಮ ಜಾಗತಿಕ ಧರ್ಮವಾಗಿ ಬೆಳೆಯಲು ಸಾಕ್ಷಿಯಾಗಿದೆ. ಆದುನಿಕತೆಯಲ್ಲಿ ಮನುಷ್ಯನ ಮನಸ್ಸು ವಿಕೃತಗೊಂಡು ಮಾನವೀಯತೆ ಅವನತಿಯಾಗುವ ಅತಂಕವಿದೆ ಶೀಲವಿಲ್ಲದ ಶಿಕ್ಷಣ ಕಾಯಕವಿಲ್ಲದ ಸಂಪತ್ತು ವ್ಯರ್ಥ ಶ್ರೀ ರಂಭಾಪುರಿ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ್ ಶಿವಾಚಾರ್ಯ ಸ್ವಾಮಿಜಿ ಅಭಿಪ್ರಾಯಪಟ್ಟರು .
ಸುದ್ದಿ ಜಗಳೂರು
ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀ ರೇಣುಕಾಚಾರ್ಯ ಜಯಿಂತಿ ಯುಗಮಾನೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಅಶಿರ್ವಾಚನ ನೀಡಿದರು
ಭಾರತ ದೇಶ ಹಲವು ಧರ್ಮಿಯರ ನಾಡಾಗಿದ್ದು ಇಲ್ಲಿ ಅನೇಕ ಪರಂಪರೆಗಳು ನಡೆದು ಬಂದಿವೆ. ಎಲ್ಲಾ ಧರ್ಮಗಳು ಸಹ ಮಾನವನ ಕಲ್ಯಾಣಕ್ಕಾಗಿ ಮಾನವ ಧರ್ಮ ಉಳಿಸಿ ಬೆಳೆಸುವಲ್ಲಿ ಅತ್ಯಂತ ಸಹಕಾರಿಯಾಗಿವೆ.
ಆದುನಿಕತೆಯಲ್ಲಿ ಮನುಷ್ಯನ ಮನಸ್ಸು ವಿಕೃತಗೊಂಡು ಮಾನವೀಯತೆ ಅವನತಿಯಾಗುವ ಅತಂಕವಿದೆ ಶೀಲವಿಲ್ಲದೆ ಶಿಕ್ಷಣ ಕಾಯಕವಿಲ್ಲದ ಸಂಪತ್ತು ವ್ಯರ್ಥ.
ವೀರಶೈವ ಧರ್ಮ ವಿಶಾಲ ಮನೋಭಾವ ಹೊಂದಿದ್ದು, ಸಮಗ್ರತೆ, ಮಾನವಕುಲದ ಹಿತಕ್ಕೆ ಶ್ರಮಿಸಿದ ಶ್ರೇಯಸ್ಸು ಪಂಚಪೀಠದ ಪೂರ್ವಾಚಾರ್ಯರು ಆದರ್ಶಗಳನ್ನ ಬಿಟ್ಟು ಹೋಗಿದ್ದಾರೆ ’ಅವರ ಆದರ್ಶಗಳ ಮೂಲಕ ಸಮಾಜದ ಮುಂದಿನ ಪೀಳಿಗೆಗೆ ಇಂತ ಧರ್ಮ ಸಭೆಗಳು ಅಗತ್ಯವಾಗಿವೆ ಎಂದರು .
ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಸಮಾರಂಭದಲ್ಲಿ ಕಾರ್ಯಕ್ರಮವನ್ನ ಉದ್ಗಾಟಿಸಿ ಮಾತನಾಡಿದರು. ಪ್ರಸ್ತುತದಲ್ಲಿ ಜಾತಿ ಜಾತಿಗಳ ಮದ್ಯೆ ಸಂಘರ್ಷದ ಕಲಹಗಳ ಮದ್ಯೆ ಇಂತ ಧರ್ಮ ಸಭೆಯ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಧರ್ಮ ಸಭೆಗಳು ಅತ್ಯವಶ್ಯಕವಾಗಿವೆ.
ಗೀತಾ ಸಾರದಲ್ಲಿ ಶ್ರೀಕೃಷ್ಣ ಹೇಳಿದಂತೆ ದುಷ್ಟರನ್ನ ಶಿಕ್ಷಿಸಿ ಶಿಷ್ಟರನ್ನ ರಕ್ಷಿಸಿ ಎನ್ನುವಂತೆ ಆದಿ ಗುರು ರಂಭಾಪುರಿ ಶ್ರೀಗಳು ಪಂಚಪೀಠ ಸ್ಥಾಪನೆ ಮಾಡುವ ಮೂಲಕ ಧರ್ಮ ಸಭೆಗಳನ್ನ ಆಯೋಜನೆ ಮಾಡಿ ಮಾನವ ಧರ್ಮಕ್ಕೆ ಜಯವಾಗಲಿ ವಿಶ್ವಕ್ಕೆ ಧರ್ಮದಿಂದಲೇ ಶಾಂತಿ ಎಂಬ ಧರ್ಮಸಾರವನ್ನ ಸಾರುವ ಮೂಲಕ ಸಮಾಜದಲ್ಲಿ ಜಾಗೃತಿ ಸೇವಾ ಕಾರ್ಯ ಶ್ಲಾಘನೀವಾಗಿದೆ ಎಂದರು.
ಕಣ್ವಕುಪ್ಪೆ ಶ್ರೀ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ನಮ್ಮ ಕಣ್ವಕುಪ್ಪೆ ಶ್ರೀಮಠಕ್ಕೆ ಶ್ರೀ ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ್ ಶಿವಾಚಾರ್ಯ ಸ್ವಾಮಿಜಿ ಗಳ ಶ್ರೀರಕ್ಷೆಯಿಂದ ನಮ್ಮ ಮಠದ ಏಳ್ಗಿಗೆ ಸಹಕಾರ ನೀಡಿ ತಾಯಿ ಹೃದಯದಂತೆ ಪೋಷಣೆಯಿಂದ ಪ್ರೀತಿ ವಾತ್ಸಲ್ಯದ ಮೂಲಕ ನಮ್ಮ ಹಿರಿಯ ಮುಮುಡಿ ಸ್ವಾಮಿಜಿಗಳು ಕಾಲವಾದ ನಂತರ ನಮಗೆ ಶ್ರೀಗಳು 2005 ರಲ್ಲಿ ಉತ್ತರಧಿಕಾರಿಯನ್ನಾಗಿ ನಮಗೆ ಪಟ್ಟಾಭಿಷೇಕ ಮಾಡಿ ಸೇವೆ ಮಾಡಲು ಸದಾ ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ ಎಂದು ಸ್ಮರಿಸಿಕೊಂಡರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಿಂತಿ ಯುಗಮಾನತ್ಸೋವ ಅಂಗವಾಗಿ ಜಗಳೂರು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ.ಮಹಿಳೆಯರಿಂದ ಕುಂಭಮೇಳ ಅನೇಕ ಕಲಾತಂಡಗಳಿಂದ ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದಿತು ಕ್ಷೇತ್ರದ ಶಾಸಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ರೇವಣಸಿದ್ದ ಶಿವಾಚಾರ್ಯ ಸ್ವಾಮಿಜಿ ರಾಮಘಟ್ಟ .ಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ಹಂಪಸಾಗರ .ಕಾರ್ಯಕ್ರಮದಲ್ಲಿ ಡಿ.ಎಂ.ರುದ್ರಯ್ಯ.ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಭಾರತಿ ಅಕ್ಕ. ಮಾಜಿ.ಜಿಪಂ ಸದಸ್ಯ ಕೆ.ಪಿ.ಪಾಲಯ್ಯ. ಖಾಸಗಿ ಆಪ್ತಸಹಾಯಕರ ಸಂಘದ ಕಾರ್ಯಧರ್ಶಿ ಪ್ರವೀಣಕುಮಾರ್ . ನಿವೃತ್ತ ಉಪಾನ್ಯಾಸಕರಾದ ಜೆ.ಎಂ.ಮಲ್ಲಿಕಾರ್ಜನಯ್ಯ.ಸೇರಿದಂತೆ ರೇಣುಕಾ ಚಾರ್ಯ ಜಯಿಂತಿ ಸ್ವಾಗತ ಸಮಿತಿ .ಅದ್ಯಕ್ಷರಾದ ಎನ್ ಎಂ. ಲೋಕೇಶ್ .ಗೌರವದ್ಯಕ್ಷರಾದ ಡಿ ಎಂ.ರುದ್ರಯ್ಯ. ಸುರೇಶ್..ಹಾಲಸ್ವಾಮಿ ಕಂಬಾಳಿಮಠ.ಪಂಚಾಕ್ಷರಯ್ಯ. ನಂಜುಂಡಸ್ವಾಮಿ.ಜಗದೀಶ್.ವಿರುಪಾಕ್ಷಿ.ಸೇರಿದಂತೆ ಮುಂತಾದವರು ಹಾಜುರಿದ್ದರು.
