.
ಕೇಂದ್ರ ಸರ್ಕಾರ 2029 ಚುನಾವಣೆಯಲ್ಲಿ ಜಾರಿಗೆ ತರಲು ಲೋಕಸಭೆ ಹಾಗು ರಾಜ್ಯಗಳ ವಿಧಾನ ಸಭೆಗಳಲ್ಲಿ ಶೇ 33 ಮಹಿಳಾ ಮೀಸಲಾತಿ ಕಾಯ್ದೆ ತಿದ್ದುಪಡಿ ಹಾಗು ಕ್ಷೇತ್ರ ಮರುವಿಂಗಡಣೆ ಮಸೂದೆ ಅಂಗಿಕರಿಸಲು ಏಪ್ರಿಲ್ ತಿಂಗಳ 16 ನೇ ತಾರೀಕು ಮುಂದುವರೆದ ಬಜೆಟ್ ಅಧಿವೇಶ ಕರೆದಿದ್ದು ಅದರಂತೆ ದೇಶದ ಲೋಕಸಭಾ ಕ್ಷೇತ್ರಗಳ ಈಗಿನ 543 ಸ್ಥಾನಗಳನ್ನು ಶೇ 50 ದಷ್ಟು ಸೇರಿಸಿ ಸುಮಾರು ಒಟ್ಟು 816 ಸ್ಥಾನಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಇದೆ, ಅದರಂತೆ ರಾಜ್ಯಗಳ ವಿಧಾನ ಸಭೆ ಕ್ಷೇತ್ರಗಳ ಸ್ಥಾನಗಳನ್ನು ಸಹ ಶೇ 50 ಹೆಚ್ಚಿಸುತ್ತಿದೆ,
ಅದರ ಬದಲು ಕ್ಷೇತ್ರ ಸ್ಥಾನಗಳ 2/3 (ಮೂರನೇ ಎರಡು ಭಾಗ ) ದಷ್ಟು ಅಂದರೆ 905 ಸ್ಥಾನಗಳಿಗೆ ಹೆಚ್ಚಿಸಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕಲ್ಪಿಸಿ ಅತಿ ಹೆಚ್ಚು ಯುವಕರು, ಬುದ್ದಿವಂತರು ,ಹೊಸಬರು ,ರಾಜಕೀಯ ಹಿನ್ನೆಲೆ ಇಲ್ಲದವರು ಶಾಸನ ಸಭೆಗೆ ಬರಲು ಅವಕಾಶ ಕಲ್ಪಿಸಬೇಕಾಗಿದ್ದು, ಅದರ ಜೊತೆ ಜನಸಂಖ್ಯೆ ನಿಯಂತ್ರಣ ಅಭಿವೃದ್ಧಿ ಸಾಧನೆ ಮಾಡುವ ಉತ್ತರ ರಾಜ್ಯಗಳಿಗಿಂತ ಕರ್ನಾಟಕ , ತಮಿಳುನಾಡು, ಕೇರಳಮ್, ತೆಲಂಗಾಣ, ಆಂಧ್ರ ಪ್ರದೇಶ ದಕ್ಷಿಣ ರಾಜ್ಯಗಳು ಪ್ರಾತಿನಿಧಿಕ, ಅಭಿವೃದ್ಧಿ ನ್ಯಾಯದಿಂದಲೂ ಉತ್ತರ ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೆಚ್ಚಿಸುವ ಸ್ಥಾನಗಳಿಗಿಂತ ವಂಚಿತವಾಗದಂತೆ ದಕ್ಷಿಣದ ರಾಜ್ಯಗಳಿಗೆ ಹೆಚ್ಚು ಸ್ಥಾನಗಳನ್ನು ನೀಡಿ ಈ ರಾಜ್ಯಗಳ ಉಪಸ್ಥಿತಿ ರಾಷ್ಟ ರಾಜಕಾರಣದಲ್ಲಿ ಕಡಿಮೆ ಆಗದಂತೆ ನೋಡಿಕೊಂಡು, ಆಡಳಿತ ಸುಧಾರಣೆಗಾಗಿ ಪ್ರತಿ ಲೋಕಸಭೆ ಹಾಗು ವಿಧಾನಸಭೆ ಕ್ಷೇತ್ರಗಳನ್ನು ಜಿಲ್ಲೆ ಹಾಗು ತಾಲ್ಲೂಕುಗಳನ್ನಾಗಿಸಲು ಕಾನೂನು ಮಾಡುವುದು, ರಾಜ್ಯಗಳ ಸರ್ವಪಕ್ಷಗಳ ಅಭಿಪ್ರಾಯ ಆಲಿಸಿ ಈಶಾನ್ಯ ರಾಜ್ಯಗಳಂತೆ ಭೌಗೋಳಿಕ ಮಾನದಂಡ ಅಧರಿಸಿ ಅತಿ ಹೆಚ್ಚು ಚದುರ ಕಿಮೀ ಉದ್ದ ಅಗಲ ವಿಲ್ಲದಂತೆ ಕಡಿಮೆ ಜನಸಂಖ್ಯೆಯು ಸೇರಿದಂತೆ ಜಿಲ್ಲೆ, ತಾಲ್ಲೂಕು, ಹಾಗು ಹೋಬಳಿ ಮತ್ತು ಸ್ಥಳೀಯ ಸಂಸ್ಥೆಗಳ ಸರಹದ್ದುಗಳ ಮಿತಿ ಇಲ್ಲದಂತೆ ಕ್ಷೇತ್ರಗಳ ಪುನರವಿಂಗಡಣೆ ಮಾಡುವುದು ಸೂಕ್ತವಾಗಿದ್ದು ಬರುವ ಅಧಿವೇಶನದಲ್ಲಿ ಇದನ್ನು ಚರ್ಚಿಸಲು ದೇಶದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಗಳಿಗೆ ಮತ್ತು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗು ಗೃಹಮಂತ್ರಿ ಗಳಾದ ಅಮಿತ್ ಶಾ, ಸಂಸತ್ ವಿಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗು ಬಿಜೆಪಿ ಪಕ್ಷದ ರಾಷ್ಟೀಯ ಅಧ್ಯಕ್ಷರಾದ ನಿತಿನ್ ನಬಿನ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳಿಗೆ ಪತ್ರದ ಇಮೇಲ್ ಕಳಿಸಿ ಗಮನಕ್ಕೆ ತರಲಾಗಿದೆ.
ವಂದನೆಗಳೊಂದಿಗೆ
ಕಲ್ಲೇಶ್ ರಾಜ್ ಪಟೇಲ್
ಕೆಪಿಸಿಸಿ ಸದಸ್ಯರು
