Editor by m.rajappa vyasagondanahalli

Shukradeshe news online portal kannad a news April 14_4_2026

ಡಾ.ಬಿ ಆರ್ ಅಂಬೇಡ್ಕರ್ ಈ ದೇಶದಲ್ಲಿ‌ ಜನ್ಮ‌ತಾಳದೇ ಹೋಗಿದ್ದರೆ ದಲಿತರು ಗುಲಾಮಗಿರಿಯಲ್ಲಿ ಬದುಕಬೇಕಾಗಿತ್ತು .ದಲಿತರು ಸೋಮಾರಿಗಳಾಗಬೇಡಿ ಉತ್ತಮ ಶಿಕ್ಷಣವಂತರಾಗಿ ಉದ್ಯೋಗ ಆರಂಭಿಸಿ .ಶಾಸಕ ಬಿ.ದೇವೇಂದ್ರಪ್ಪ.

ಬುದ್ದ ಬಸವ ಅಂಬೇಡ್ಕರ್ ಪ್ರಬುದ್ದ ಭಾರತಕ್ಕೆ ಬುದ್ದಿವಂತ ನಕಲಿ ಅಂಬೇಡ್ಕರ್ ವಾದಿಗಳಿಂದ ದೇಶಕ್ಕೆ‌ ಆಪಾಯ ಡಾ .ಹೆಚ್ ಲಿಂಗಪ್ಪ ಕಳವಳ ವ್ಯಕ್ತಪಡಿಸಿದರು.

ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭವನ್ನ ಉದ್ಗಾಟಿಸಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು ಅಂಬೇಡ್ಕರ್ ಅವರಿಗಾಗಿ ಹುಟ್ಟಲಿಲ್ಲ ಅವರು ಅವರಿಗಾಗಿ ವಿದ್ಯಾಭ್ಯಾಸ ಮಾಡಲಿಲ್ಲ ಅವರ ಸ್ವಾರ್ಥಕ್ಕಾಗಿ ಹೋರಾಟ ನಡೆಸಲಿಲ್ಲ ಈ ದೇಶದ ಎಲ್ಲಾ ಜನಾಂಗದ ಏಳ್ಗಿಗಾಗಿ‌ ಈ ಭೂಮಿಯಲ್ಲಿ ಜನ್ಮತಾಳಿದ ದೈತ್ಯ ಪ್ರತಿಭೆ. ಸರ್ವರ ಬಾಳಿಗೆ ಬೆಳಕಾದ ಅಂಬೇಡ್ಕರ್ ಸಂವಿಧಾನದಿಂದ ನಮ್ಮಂತ ಸಾಮಾನ್ಯ ಕುಟುಂಬದಿಂದ ಬಂದಂತ ವ್ಯಕ್ತಿ ಶಾಸಕನಾಗಿ ಆಯ್ಕೆಯಾಗಿದ್ದೆನೆ ಎಂದರೆ‌ ಅದಕ್ಕೆ ಕಾರಣ ಈ ದೇಶದ ಸರ್ವಶ್ರೇಷ್ಟ ಸಂವಿಧಾನದಿಂದ ಮಾತ್ರ ಸಾದ್ಯ .ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರ್ಕಾರಿ ಸೌಲಭ್ಯಗಳನ್ನ ಪಡೆದುಕೊಂಡು ಸಮಾಜಕ್ಕೆ ಏನಾದರು ಕೊಡುಗೆ ನೀಡಿದರೆ ಇಂತ ಜಯಿಂತಿಗಳಿಗೆ ಅರ್ಥ ಸಿಗುತ್ತದೆ.

ದಲಿತ ಸಮುದಾಯದಲ್ಲಿ‌ ಹುಟ್ಟಿದ ತೋರಣಗಟ್ಟೆ ಡಾ. ಹೆಚ್ .ಲಿಂಗಪ್ಪನವರು ಸುಮಾರು 56‌ ಕೃತಿಗಳನ್ನ ರಚಿಸಿದ್ದಾರೆ ಅದರಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಗಳ ಪುಸ್ತಕ ಬರೆದು ಅವರ ಇಳಿ ವಯಸ್ಸಿನಲ್ಲೂ ಸಾಹಿತ್ಯ ಸೇವೆ ಅನನ್ಯವಾಗಿದೆ.ನಾನು ಕೂಡ ಅವರ ಶಿಷ್ಯನಾಗಿ ವಿಧ್ಯಾರ್ಥಿ ದಿಸೆಯಲ್ಲಿ ಅವರ ಪಾಠ ಕೇಳಿದ್ದೆನೆ ನನ್ನ ಗುರುಗಳು ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಇನ್ನು ರಾಜ್ಯದಲ್ಲಿ ಶೋಷಿತರ ಒಳಮಿಸಲಾತಿ ಜಾರಿಯಾಗಬೇಕು ಸರ್ವರಿಗೂ ಮಿಸಲಾತಿ ನೊಂದವರಿಗೆ ಅತ್ಯವಶ್ಯಕ ಎಂದರು.

ಕಾರ್ಯಕ್ರಮದಲ್ಲಿ ಉಪಾನ್ಯಾಸ ಕುರಿತು ಪ್ರೊ ಹೆಚ್ .ಲಿಂಗಪ್ಪ ಮಾತನಾಡಿದರು ಬುದ್ದ ಭಾರತ ಬಸವ ಭಾರತ‌ ಅಂಬೇಡ್ಕರ್ ಭಾರತದಂತ ವೈವಿದ್ಯತೆಯಲ್ಲಿ‌ ಏಕತೆ ಭಾರತ ದೇಶಕ್ಕೆ ಬಾಬಾ ಸಾಹೆಬ್ ಅಂಬೇಡ್ಕರ್ ಮತ್ತು‌ ಡಾ.ಬಾಬು ಜಗಜೀವನ್ ರಾಮ್ ರವರ ಕೊಡುಗೆ ಆಪಾರವಾಗಿದೆ .ಬಾಲ್ಯದಲ್ಲಿ‌ಯೆ ಈ ಮುತ್ಸದಿ‌ ನಾಯಕರುಗಳು ಹೋರಾಟ ಅವಿಸ್ಮರಣಿಯವಾದ್ದದ್ದು ಅಂಬೇಡ್ಕರ್ ರವರು ಅನೇಕ ಸಂಕಷ್ಟಗಳ ಮದ್ಯೆ ವಿದ್ಯಾಭ್ಯಾಸ ಮಾಡಿ 34 ಕ್ಕೂ ಹೆಚ್ಚು ಪದವಿ ಗಳಿಸಿದ ಜಗತ್ತಿನ ಶ್ರೇಷ್ಟ ಸಾಮಾಜಿಕ ಚಿಂತಕ‌ ಬಾಬಾ ಸಾಹೇಬರು ಅಂದಿನ ಬಲಾಡ್ಯ ಜಾತಿವಾದಿಗಳ ಮದ್ಯ ಹೋರಾಟ ನಡೆಸಿ ಕುಷ್ಠಪೀಡಿತ ಮೌಡ್ಯಗಳ ಮನುಸ್ಮೃತಿಗೆ ಕೊಳ್ಳಿ ಇಟ್ಟು ಮನುಸ್ಮೃತಿ ಸುಟ್ಟು ಹಾಕುವುದರ ಮೂಲಕ ಬೃಹತ್ ಸಂವಿಧಾನ ರಚಿಸಿ ಭಾರತ ದೇಶದ‌ ನಾಗರೀಕರ ಹಕ್ಕು‌ ಮತ್ತು‌ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಮೇಲೆ ಆಧಾರಿತವಾದ ಜಾತಿರಹಿತ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು.
ಆದರೆ ಅಸ್ಪೃಶ್ಯ ಸಮುದಾಯಕ್ಕೆ ಒಳ ಮಿಸಲಾತಿ ಅತ್ಯವಶ್ಯಕವಾಗಿದೆ.‌ ಸರ್ಕಾರದ ಮಾನ್ಯ ಮುಖ್ಯಮಂತ್ರಿ‌‌ ಸಿದ್ದರಾಮಯ್ಯರವರು ಶೀಘ್ರವೆ ಹಸಿದವರ ನೋವಿನ ಬುತ್ತಿ‌ಯ‌ ಒಳಮಿಸಲಾತಿ‌ ಜಾರಿ ಮಾಡುವಂತೆ ಅಗ್ರಹಿಸಿದರು.

ಸಮಾಜದಲ್ಲಿ ಅತ್ಯಂತ‌ ಹಿಂದೂಳಿದ ವರ್ಗಗಳಿಗೆ‌ ಮಾತ್ರ ಮಿಸಲಾತಿ ಕಲ್ಪಿಸಬೇಕೆಂದು ಪ್ರಥಮದಲ್ಲಿ ಪ್ರತಿಪಾಧನೆ ಮಾಡಿದ ಅಂಬೇಡ್ಕರ್ ತದ ನಂತರ ಸರ್ವರಿಗೂ ಸಮಾನವಾದ ಮಿಸಲಾತಿ ನೀಡಿ‌ ಸರ್ವಜನಾಂಗಕ್ಕೂ ಸಂವಿಧಾನ ರಚಿಸಿ
ಅಸ್ಪೃಶ್ಯತೆ ನಿರ್ಮೂಲನೆ, ದಲಿತರು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣ, ಮಹಿಳಾ ಹಕ್ಕುಗಳು, ಶಿಕ್ಷಣದ ಪ್ರಸಾರ ಮತ್ತು ಸಂವಿಧಾನಾತ್ಮಕ ಪರಿಹಾರಗಳ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸುವುದು ಅವರ ದೂರದೃಷ್ಟಿ ಚಿಂತನೆಯಲ್ಲಿ ಪ್ರಬುದ್ದ ಭಾರತಕ್ಕೆ ಸಾಕ್ಷಿಯಾಗಿದೆ.ಆದರೆ ಇಂತ‌ ಮಹಾನಾಯಕರನ್ನ ಕೆಲ ನಕಲಿ ಅಂಬೇಡ್ಜರ್ ವಾದಿಗಳಿಂದ ದೇಶಕ್ಕೆ ಆಪಾಯಕಾರಿ ಎಂದರು.ಜಗತ್ತಿನ ವಿಶ್ವಸಂಸ್ಥೆಯಲ್ಲಿ ಅಂಬೇಡ್ಕರ್ ಜನ್ಮದಿನದಂದು ವಿಶ್ವದ ಜ್ಘಾನಿ ಎಂದು ಘೋಷಿಸಿ ಗೌರವ ನೀಡುವ ಕಾಲಘಟ್ಟದಲ್ಲೂ ಸಹ ದೇಶದ ಕೆಲ ಜಾತಿವಾದಿ ಮನಸ್ಥಿತಿ ಜನರು ಅವರನ್ನ ಕೇವಲ ಕೇರಿಗಳಿಗೆ ಹೊಲಿಸುವುದು ಅತ್ಯಂತ ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ಬಾಬು ಜಗಜೀವನ್ ರಾಮ್ ರವರ ಕುರಿತು ಡಿ ಎಸ್ ಎಸ್ ಹಿರಿಯ ಮುಖಂಡ ಜಿ .ಹೆಚ್ ಶಂಭುಲಿಂಗಪ್ಪ ಮಾತನಾಡಿದರು ದೇಶದಲ್ಲಿ ಆಹಾರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ‌ ಕೃಷಿ ಬೆಳೆಗಳಿಗೆ ಉತ್ತೆಜನ ನೀಡಿ ಆಹಾರ ಸುಧಾರಣೆಗೆ ಶ್ರಮಿಸಿದ ಧಿಮಂತ ನಾಯಕ ಬಾಬು ಜಗಜೀವನ್ ರಾಮ್ ಈ ದೇಶದ ಉಪಾ ಪ್ರಧಾನಿಯಾಗಿ ಮಹತ್ತರ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ .ಹಸಿವಿನ ದಾಹ ನೀಗಿಸಿದ ಬಾಬುಜಿಯವರನ್ನ ಈ ದೇಶದ ಕೆಲ ಮತಿಯವಾದಿಗಳು ಅವರು ಪ್ರಧಾನಿಯಾಗುವ ಆರ್ಹತೆಗಳಿದ್ದರು ಸಹ ಅಸ್ಪೃಶ್ಯ ಸಮುದಾಯವರು ಎನ್ನುವ ಕಾರಣಕ್ಕಾಗಿಯೇ ಅವರನ್ನ ಈ ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡುವಲ್ಲಿ ಮಿನಾಮೇಷ ಎಣಿಸಿರುವುದು ಬೇಸರದ ಸಂಗತಿ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕ್ಷೇತ್ರದ ಶಾಸಕರಿಂದ ಸಂವಿಧಾನ ಶಿಲ್ಪಿ‌ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ತಹಶೀಲ್ದಾರ್ ಸೈಯದ್ ಕಲೀಂ .ಅಂಬೇಡ್ಕರ್ ಜಯಿಂತಿ ಅಂಗವಾಗಿ ಶುಭಾ ಕೋರಿದರು .ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ.ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಷಂಷೀರ್ ಆಹಮದ್.ಸರ್ಕಾರಿ ನೌಕರರ ಸಂಘದ ಅದ್ಯಕ್ಷ‌ ತಿಪ್ಪೇಸ್ವಾಮಿ.ವಕೀಲರ ಸಂಘದ ಅದ್ಯಕ್ಷ ಮರೆನಹಳ್ಳಿ ಬಸವರಾಜ್.ಕಾಂಗ್ರೆಸ್ ಬ್ಲಾಕ್ ಎಸ್.ಸಿ ಘಟಕದ ಅದ್ಯಕ್ಷ ಬಿ.ಮಹೇಶ್.ತಾಪಂ.ಇಓ ಕೆಂಚಪ್ಪ. ಬಿಇಓ ಹಾಲಮೂರ್ಕತಿ ಕಸಾಪ.ಅದ್ಯಕ್ಷೆ ಸುಜಾತ. ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ .ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

error: Content is protected !!