ಸುದ್ದಿ,
ಜಗಳೂರು,ಏ.15:ಕೊಪ್ಪಳ ಜಿಲ್ಲೆಯ ಡಿಸಿಆರ್‌ಇ ಸೆಲ್ ಘಟಕದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಘುನಾಥ್ ಬುಧವಾರ ಸಮಯ 3:45 ಮಧ್ಯಾಹ್ನದ ವೇಳೆ ಚಿತ್ರದುರ್ಗ-ಜಗಳೂರು ಗಡಿಗ್ರಾಮವಾದ ಕಡಬನಕಟ್ಟೆ ಗ್ರಾಮದ ಬಳಿ ಮರಕ್ಕೆ ಡಿಕ್ಕಿ ಹೊಡೆದು  ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶ್ರೀಯುತರು 2007 ನೇ ಬ್ಯಾಚ್‌ನ ಅಧಿಕಾರಿಯಾಗಿದ್ದ ಇವರು
3  ದಿನಗಳ ಕಾಲ ರಜೆ ಮೇಲೆ ತಮ್ಮ ಕುಟುಂಬದೊಂದಿಗೆ ವಾಸ ಇದ್ದ ಚಿತ್ರದುರ್ಗಕ್ಕೆ ಬಂದು ಹೆಂಡತಿ ತವರು ಊರಾದ ಆಯಿಕಲ್ ಗ್ರಾಮಕ್ಕೆ ಬಂದು ತದ ನಂತರ ಈ ದಿನ ಆಯಿಕಲ್ ಗ್ರಾಮದಿಂದ ಕೊಪ್ಪಳಕ್ಕೆ ಮುಸ್ಟೂರ ಮಾರ್ಗವಾಗಿ ಬ್ರಿಜಾ ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ‌ ಕಡಬನಕಟ್ಟೆ ಹತ್ತಿರ ತಾವೇ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿ ಆಕಸ್ಮಿಕವಾಗಿ ಮರಕ್ಕೆ ಡಿಕ್ಕಿಯಾಗಿದ್ದು ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುತ್ತಾರೆ.

ಮೃತ ರಘುನಾಥ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ನಂದಿಹಳ್ಳಿ ಗ್ರಾಮದವರಾಗಿದ್ದು,ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಚಿತ್ರದುರ್ಗದ ಬ್ಯಾಂಕ್ ಕಾಲೋನಿಯಲ್ಲಿ ವಾಸವಾಗಿದ್ದರು

.ಇವರ ತಾಯಿ ದಾವಣಗೆರೆಯ ಕೆ.ಬಿ. ಬಡಾವಣೆಯಲ್ಲಿ ನೆಲೆಸಿದ್ದಾರೆ.ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿ.ವೈ.ಎಸ್‌ಪಿ ರುದ್ರೇಶ್ ಉಜ್ಜನ ಕೊಪ, ಜಗಳೂರು ಇನ್‌ಸ್ಪೆಕ್ಟರ್ ಬಿ.ಎಂ.ಸಿದ್ರಾಮಯ್ಯ, ಪಿ.ಎಸ್‌.ಐ ಗಾದಿಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಚಿತ್ರದುರ್ಗದ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು, ಸಂಬಂಧಿಕರು ಆಕ್ರಂದ ಮುಗಿಲು ಮುಟ್ಟಿತ್ತು.ಒಬ್ಬ ದಕ್ಷ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ವಲಯದಲ್ಲಿ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!