ಸರ್ಕಾರ ಗ್ಯಾರಂಟಿ ಯೋಜನೆಗಳ ಮದ್ಯೆ ಸಮರ್ಪಕವಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದ್ದೆವೆ. ತಾಲ್ಲೂಕಿನ ಗೌರಿಪುರದ ಬಳಿ 198 ಕೋ ರೂಗಳಲ್ಲಿ ಪವರ್ ಸಭ್ ಸ್ಟೇಷನ್ ಹಾಗೂ 40 ಕೋ.ರೂಗಳಲ್ಲಿ ಕೊಣಚಗಲ್ ದೇವಸ್ಥಾನದ ಬಳಿ ನಿರ್ಮಿಸುವ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ವರದಾನವಾಗಲಿದೆ ಶಾಸಕ ಬಿ.ದೇವೇಂದ್ರಪ್ಪ ಭರವಸೆ.

ಮಾಜಿ ಶಾಸಕ ಹೆಚ್ ರಾಜೇಶ್ ರವರು ನಮ್ಮ‌ ಚಿಕ್ಕಮ್ಮನಹಟ್ಟಿ ಗ್ರಾಮಕ್ಕೆ ಒಂದು ಕೋಟಿ‌ ಅನುದಾನ ನೀಡಿ ಗ್ರಾಮದ ಅಭಿವೃದ್ದಿಗೆ ಶ್ರಮಿಸಿದಂತೆ ನಾನು ಮಾಜಿ ಶಾಸಕರ ಸ್ವಗ್ರಾಮಕ್ಕೆ 2 ಕೋ ಅಧಿಕ ರೂ ಗಳಲ್ಲಿ ಅನುದಾನ ನೀಡಿ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡುವೆ ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ

ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಸುಮಾರು 50 ಲಕ್ಷ ರೂ ಗಳ ಸಿಸಿ ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿ ಸುಂದರವಾದ ವೃತ್ತ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು ಜಗಳೂರು ಪಟ್ಟಣ ಸೇರಿದಂತೆ ಗ್ರಾಮಿಣ ಪ್ರದೇಶದಲ್ಲಿ ಒಟ್ಟು 17 ಕೋ,50 ಲಕ್ಷ ರೂಗಳಲ್ಲಿ ಸಿಸಿ ರಸ್ತೆ ಪಟ್ಟಣದ ಜಮ್ಮಾಪುರ ರಸ್ತೆ ಜಗಳೂರು ಪಟ್ಟಣ ಪಂಚಾಯಿತಿ ರಸ್ತೆ ಅಭಿವೃದ್ದಿ ತಾಲ್ಲೂಕಿನ ಚಿಕ್ಕ ಉಜ್ಜಿನಿ ಗ್ರಾಮಕ್ಕೆ 5‌ ಕೋ.ರೂಗಳಲ್ಲಿ ಸಿಸಿ ರಸ್ತೆ ಅಭಿವೃದ್ದಿ . ಮುಖ್ಯಮಂತ್ರಿ ಮೂಲ ಸೌಕರ್ಯ ಯೋಜನೆಗಳಲ್ಲಿ ಕೆಚ್ಚೆನಹಳ್ಳಿಯಿಂದ ಐನಹಳ್ಳಿ ರಸ್ತೆ ಅಭಿವೃದ್ದಿ ಗಾಗಿ 3.50 ಕೋ ರೂಗಳ .ಪಟ್ಟಣದ ಗ್ರಂಥಾಲಯ ಅಭಿವೃದ್ದಿ ಸೇರಿದಂತೆ ಒಟ್ಟು 17 .50 ಕೋ ರೂಗಳಲ್ಲಿ ವಿವಿಧ ಕಾಮಗಾರಿಗಳಿ ಭೂಮಿ ಪೂಜೆ ನೇರವೇರಿಸಿದರು.

ಸರ್ಕಾರ ಗ್ಯಾರಂಟಿ ಯೋಜನೆಗಳ ಮದ್ಯೆ ಸಮರ್ಪಕವಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸಿ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದ್ದೆವೆ.

ನಮ್ಮ ಘನ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು 17 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಿಸುವ ಮೂಲಕ ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನ ಹರಿದು ಬರಲಿದೆ . ಅವರು ಕಳೆದ ಮುಖ್ಯಮಂತ್ರಿಯಾದ ಅವಧಿಯಲ್ಲಿ‌ ಜಗಳೂರು ಕ್ಷೇತ್ರಕ್ಕೆ 57 ಕೆರೆ ನೀರು ತುಂಬಿಸುವ ಯೋಜನೆ ಚಾಲನೆಗೊಂಡು ಪುನ ಪ್ರಸ್ತುತ ಅವಧಿಯಲ್ಲಿಯೆ ಕೆರೆ ತುಂಬಿಸುವ ಯೋಜನೆಡಿಯಲ್ಲಿ 57 ಕೆರೆ ತುಂಬಿಸಿ ಸಮೃದ್ದ ನೀರಿನಿಂದ ಕೆರೆಗಳು ಕೋಡಿ ಬಿದ್ದು ಉತ್ತಮ ಮಳೆ ಬೆಳೆಯಾಗಿದ್ದು ತಮ್ಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಒಟ್ಟಾರೆ

ಕ್ಷೇತ್ರದ ಜನರ ಸಹಕಾರದಿಂದ ಉತ್ತಮ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಹಕಾರ ನೀಡಿದರೆ ಜಗಳೂರು ಪಟ್ಟಣದ ಮುಖ್ಯ ರಸ್ತೆ ಅಭಿವೃದ್ದಿ ಹಾಗೂ 198 ಕೊ ರೂಗಳಲ್ಲಿ ಗೌರಿಪರ ಗ್ರಾಮದ ಬಳಿ ಪವರ್ ಸಬ್ ಸ್ಟೇಷನ್ .ತಾಲ್ಲೂಕಿನ ಕೊಣಚಗಲ್ ಬಳಿ 40 ಕೋ ರೂಗಳಲ್ಲಿ ಕಾರ್ಮಿಕರ ವಸತಿ ಶಾಲೆ ಸ್ಥಾಪನೆ ಮಾಡಿ ಬಡ ವರ್ಗದ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವ ಚಿಂತನೆಯಿದೆ ಎಂದರು.

ಶಾಸಕರನ್ನ ಅದ್ದೂರಿ ಭಾಜ ಭಜಂತ್ರಿ ತಾಳ ಮೇಳಗಳೊಂದಿಗೆ ವಿವಿಧ ಗ್ರಾಮಗಳಾದ ಬಿದರಕೆರೆ .ಚಿಕ್ಕ ಉಜ್ಜಿನಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಸ್ವಾಗತ ಕೋರಿದರು ಪಟಾಕಿ ಸಿಡಿಸಿ ಸಂಭ್ರಮಿಸಿದರು .


ಈ ಸಂದರ್ಭದಲ್ಲಿ ಲೋಕಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್.ಜಿಪಂ ಎಇ ಇ ಶಿವಮೂರ್ತಿ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಮುಖಂಡರಾದ ಬಿದರಕೆರೆ ಬಾಬಣ್ಣ.ವಕೀಲರಾದ ನಾಗರಾಜ್ ಕಾಂಗ್ರೇಸ್ ಎಸ್ ಸಿ ಘಟಕದ ಅದ್ಯಕ್ಷ ಬಿ ಮಹೇಶ್.ಚಿಕ್ಕ ಉಜ್ಜಿನಿ ಶಿಕ್ಷಕರಾದ ಸಿದ್ಲಿಂಗಪ್ಪ ಸೇರಿದಂತೆ ಮುಂತಾದವರು ಹಾಜುರಿದ್ದರು.

Leave a Reply

Your email address will not be published. Required fields are marked *

error: Content is protected !!