ಜಗಳೂರು ಪಟ್ಟಣದ ಚಳ್ಳಕೆರೆ ರಸ್ತೆಯ ಮದಕರಿ‌ ವೃತ್ತದಲ್ಲಿ‌ ನಾಯಕ ಸಮಾಜದ ಯುವ ಮುಖಂಡರು ಹಾಗೂ ಪ್ರಗತಿಪರ ಸಂಘಟನೆ ಪದಾಧಿಕಾರಿಗಳಿಂದ ವೀರ ಪರಾಕ್ರಮಿ ಮದಕರಿ ನಾಯಕರ ಪುಣ್ಯಸ್ಮರಣೆಯನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಜಗಳೂರಿನ ಚಳ್ಳಕೆರೆ ರಸ್ತೆಯ ಮದಕರಿ ನಾಯಕ ವೃತ್ತದಲ್ಲಿ ರಾಜವೀರ ಮದಕರಿ ನಾಯಕರ ಪುಣ್ಯ ಸ್ಮರಣೆ ಅರ್ಥಪೂರ್ಣ..

ಈ ವೇಳೆ ವಕೀಲರಾದ ಆರ್ ಒಬಳೇಶ್ ಮಾತನಾಡಿ
ಮದಕರಿ‌ ನಾಯಕ ಅಂದು ಅವರು ರಾಜಾ ಆಡಳಿತ ಅವಧಿಯಲ್ಲಿ ಅನೇಕ ಜನಪರವಾದ .ಧರ್ಮ ಆಡಳಿತ ನಡೆಸುವ ಮೂಲಕ ಚಿತ್ರದುರ್ಗದ ನಿರ್ಮಾತೃರಾಗಿ ತನ್ನ ಶೌರ್ಯ ಪರಾಕ್ರಮಿ ಮೆರೆದಿದ್ದಾರೆ. ಶತ್ರು ಸೇನೆಯನ್ನು ಸದೆ ಬಡಿಯುವ ಮೂಲಕ ವೀರನೆಂದು ಬಿರುದು ಪಡೆದಿದ್ದ ಮದಕರಿ ನಾಯಕರ ಸ್ಮರಣೆ ಪ್ರಸ್ತುತದಲ್ಲಿ ಅಗತ್ಯವಾಗಿದೆ ಎಂದು ತಿಳಿಸಿದರು

ತಾಲ್ಲೂಕು ವಕೀಲರ ಸಂಘದ ಅದ್ಯಕ್ಷರಾದ ಮರೆನಹಳ್ಳಿ ಬಸವರಾಜ್ ಮಾತನಾಡಿ ಚಿತ್ರದುರ್ಗದ ಶ್ರೇಷ್ಟ ಅರಸ ರಾಜ ವೀರ ಮದಕರಿ ನಾಯಕ ಕಾಲದಲ್ಲಿ ನಮ್ಮ ಬಯಲು ನಾಡಿನಂತ ಪ್ರದೇಶಗಳಲ್ಲಿ‌ ಹಲವು ಕೆರೆ, ಕಟ್ಟೆಗಳನ್ನು ನಿರ್ಮಿಸುವ ಮೂಲಕ ಅಂತರ್ಜಲಕ್ಕೆ ಹೆಚ್ಚು ಒತ್ರು ನೀಡಿದ ಪ್ರತಿಫಲವಾಗಿ ಇಂದಿಗೂ ಪುಷ್ಕರಣೆಗಳು ಜೀವಂತ ಸೆಲೆಯಾಗಿವೆ ಎಂದರು .

ಪ್ರಾಂಶುಪಾಲರಾದ ಎ.ಡಿ ನಾಗಲಿಂಗಪ್ಪ ಮಾತನಾಡಿ ಭಾರತ ದೇಶದಲ್ಲಿದ್ದ ಹಲವು ಸಂಸ್ಥಾನಗಳಲ್ಲೊಂದಾದ ಚಿತ್ರದುರ್ಗದ ಸಂಸ್ಥಾನದ ಪ್ರಖ್ಯಾತ ಧೊರೆ
ರಾಜಾ ವೀರ ಮದಕರಿ ನಾಯಕ

ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕನಾದ, ಮದಕರಿ ನಾಯಕ, ಚಿತ್ರದುರ್ಗದ ಸಿಂಹಾಸನವನ್ನು ಅಲಂಕರಿಸಿದಾಗ ಕೇವಲ ಹನ್ನೆರಡು ವರ್ಷ ವಯಸ್ಸಿನ ಅರಸನಾಗಿ . ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದರು . ಇವರು ಹಲವಾರು ದೇವಾಲಯಗಳನ್ನು ಕಟ್ಟಿಸಿದರು. ಭರಮಸಾಗರ ಮತ್ತು ಭಿಮಸಾಗರ ಎಂಬ ಈಗಿನ ಭರಮಸಾಗರ ಕೆರೆ ಜಲಾಶಯಗಳು ಇವರ ಪ್ರಮುಖ‌ ಕೊಡುಗೆಗಳಾಗಿವೆ .ಅದಲ್ಲದೆ ಚಿತ್ರದುರ್ಗ ಪ್ರಾಂತ್ಯದಲ್ಲಿ ಬಲಶಾಲಿ ಸೈನ್ಯ ಹೊಂದಿ ಪ್ರಬಲವಾಗಿದ್ದ ಹೈದರ್ ಅಲಿ ಹಾಗು ಪೇಶ್ವೆಗಳು ಪರಸ್ಪರ ಕದನಕ್ಕೆ ಸಜ್ಜಾಗಿದ್ದರು ಎಂದು ಸ್ಮರಿಸಿದರು..

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರಾದ ತಮಲೇಹಳ್ಳಿ.ಡಿ ಆರ್ ಹನುಮಂತಪ್ಪ. ಮುಖಂಡರಾದ ರಾಜಣ್ಣ. ಮದಕರಿ ಯುವ ಸೈನ್ಯ ಅದ್ಯಕ್ಷ ಚಿಕ್ಕಮ್ಮನಹಟ್ಟಿ ಮಂಜುನಾಥ. ಶಿಕ್ಷಕರಾದ ಲೋಕೇಶ್. ವಕೀಲರಾದ ನಾಗೇಶಿ‌.ಮುಖಂಡರಾದ ಹಟ್ಟಿ ತಿಪ್ಪಣ್ಣ. ಮುಖಂಡರಾದ ರೇವಣ್ಣ ಯುವ ಮುಖಂಡ ಹಾಲೇಶಿ.ಪ್ರಗತಿಪರ ಸಂಘಟಕರಾದ ಎಂ..ರಾಜಪ್ಪ ವ್ಯಾಸಗೊಂಡನಹಳ್ಳಿ ಸೇರಿದಂತೆ ಮುಂತಾದವರು ಹಾಜುರಿದ್ದರು.

ಮದಕರಿ ನಾಯಕ ಒಬ್ಬ ಅಪ್ರತಿಮ ವೀರ ಮದಕರಿ ನಾಯಕನಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಜಯಘೋಷಣೆ ಕೂಗಿದರು…..

Leave a Reply

Your email address will not be published. Required fields are marked *

error: Content is protected !!