ಸುದ್ದಿ‌‌ ಜಗಳೂರು

Editor by m.rajappa vyasagondanahalli shukradeshe news online portal news Kannada online may 19_2026

ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ 1.ಕೋ 60 ಲಕ್ಷ ರೂಗಳಲ್ಲಿ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ಹರ್ಷ ಮತ್ತು ಅವರ ಪತ್ನಿ‌ ದಂಪತಿಗಳ ಸಮೇತ ಭೂಮಿ ಪೂಜೆಗೆ ಆಗಮಿಸಿದ ಆದರ್ಶ ದಂಪತಿಗಳ ಉದಾರತೆ ನಿಜಕ್ಕೂ ಕೂಡ ಶ್ಲಾಘನೀವಾಗಿದೆ.ಸಂಸದೆ ಡಾ.ಪ್ರಭಾಮಲ್ಲಿಕಾರ್ಜನ

ಕಲ್ಲೇದೇವರಪುರ ಗ್ರಾಮದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣ ಭೂಮಿ ಪೂಜೆ ಮತ್ತು ದಾಖಲಾತಿ ಪ್ರಾರಂಭತ್ಸೋವ ಕಾರ್ಯಕ್ರಮವನ್ನ ಉ‌ದ್ಗಾಟಿಸಿ ನಂತರ ಅವರು ಮಾತನಾಡಿದರು

ಕಲ್ಲೇದೇವರಪುರ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಇಂತ ಉದಾರತೆ ಮನೋಭಾವನೆವುಳ್ಳ ಸಾಪ್ಟ್ ವೇರ್ ಇಂಜೀನಿಯರ್ ಹರ್ಷ. ಸರ್ ಅವರ ದಂಪತಿಗಳು ಸಹಾಯ ಧನ ನೀಡಿ ಸರ್ಕಾರಿ ಶಾಲೆಗೆ ಹೊಸ ರೂಪಾ ನೀಡಲಿರುವ ಭೂಮಿ ಪೂಜೆ ಸಂತೋಷ ತಂದಿದೆ
ಮುಂಬರುವ ದಿನಮಾನಗಳಲ್ಲಿ 1. ₹60,ಲಕ್ಷ ರೂ ಸಹಾಯ ಧನದಲ್ಲಿ ನಿರ್ಮಿಸುವ ಕೊಠಡಿಗಳಲ್ಲಿ ವಿದ್ಯಾಭ್ಯಾಸ ಮಾಡುವ ಭಾಗ್ಯ ಈ ಗ್ರಾಮದ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಉಜ್ವಲವಾಗಲಿ ಪೋಷಕರು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಎಂದು ಸಲಹೇ ನೀಡಿದರು ನಾವು ಕೂಡ ನಮ್ಮ ಎಸ್ ಎಸ್ ಟ್ರಸ್ಟ್ ಮೂಲಕ ಅನೇಕ ಸಹಾಯಸ್ತ ಚಾಚಿದ್ದೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸುಮಾರು 10 ಕೋಟಿ ರೂಗಳಷ್ಟು ದಾನದ ರೂಪದಲ್ಲಿ ದೇಣೆಗೆ ನೀಡಿದ ದಾನಿಗಳು ಸಹಕಾರ ಅತ್ಯಂತ ಶ್ಲಾಘನೀಯ ಈ ಹಣವನ್ನ ಸಂಬಂಧಿಸಿದ ಇಲಾಖೆಯವರು ಸರಿಯಾದ ರೀತಿ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಅತಿ ಕಡಿಮೆ ಜನ ಸೈನಿಕರಾಗಿದ್ದಾರೆ .ಮುಂಬರುವ ದಿನಗಳಲ್ಲಿ ಹೆಚ್ಚು ಪೋಷಕರು ಸೈನಿಕರನ್ನಾಗಿ ಮಾಡಲು ಕಂಕಣಬದ್ದರಾಗಬೇಕು.ಕಾರ್ಮಿಕ ಇಲಾಖೆಯಿಂದ ಸಂಚಾರಿ ಚಿಕಿತ್ಸೆ ಘಟಕ ಪ್ರಾರಂಭದ ವ್ಯವಸ್ಥೆ ಕಾರ್ಮಿಕರ ಆರೋಗ್ಯಕ್ಕಾಗಿ ಸೇವೆ ಅನನ್ಯವಾಗಿದೆ

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಯ್ಯ ಎನ್ನುವಂತೆ ಉಳ್ಳವರು ದಾನ ದರ್ಮ ಮಾಡಿದರೆ ಸತ್ಕಾರ್ಯ ಸಾರ್ಥಕ ಬದುಕು 1.ಕೋ 60 ಲಕ್ಷ ರೂಗಳಲ್ಲಿ ಸರ್ಕಾರಿ‌ ಶಾಲಾ ಕಟ್ಟಡಕ್ಕೆ 12 ಕೊಠಡಿ ನಿರ್ಮಿಸಲು ಹಣ ನೀಡಿದ ದಾನವಂತ ಹರ್ಷ ಪರೋಪಕಾರಂ ಉಪಾಕಾರ ಶಾಸಕ ಬಿ.ದೇವೇಂದ್ರಪ್ಪ ಹರ್ಷರವರ ಕುಟುಂಬಕ್ಕೆ ಅಭಿನಂದಿಸಿ ಗುಣಗಾನ ಮಾಡಿದರು.


ಈ ನಾಡಿನ ಮೂಲದವರೆ ಆದ ಹಿರೆ ಕುಂಬಳಗುಂಟೆ ಎ.ಎಂ.ನಾಗಯ್ಯ ಎಂಬುವವರ ಸುಪುತ್ರರಾದ ಶ್ರೀ ಹರ್ಷರವರು ಇಂತ‌ ಉದಾರತೆ ಯ ಸೇವಾ ಕಾರ್ಯದ ಮೂಲಕ ಶ್ರೀ ಕ್ಷೇತ್ರ ಕಲ್ಲೇದೇವರಪುರ ಗ್ರಾಮದ ಶಾಲಾ ಕಟ್ಟಡಕ್ಕೆ ಹಣದ ಸಹಾಯ ಮಾಡುವುದು ಜ್ಘಾನದಾಸೋಹಿಗಳಾಗಿದ್ದಾರೆ ಅವರ ಅಯ್ಯುರ ಅರೋಗ್ಯ ಕೊಟ್ಟು ದೇವರು ಕಾಪಾಡಿ ಮತ್ತೋಷ್ಟು ಸೇವೆ ಮಾಡಲಿ . ನಾವು ಕೂಡ ಕ್ಷೇತ್ರದಲ್ಲಿ‌ ಅಭಿವೃದ್ದಿ ಕಾರ್ಯಗಳ ಜೊತೆಗೆ
ನೊಂದವರ ನೆರವು ಎಂಬ ಕಾರ್ಯಕ್ರಮದ ಮೂಲಕ ಬಡವರ ಹಸಿದವರ ನೊಂದವರ ಸೇವೆಗಾಗಿ ಜೋಳಿಗೆ ಹಾಕಿ ನಿಧಿ ಸಂಗ್ರಹಿಸಿ ಬಡವರಿಗೆ ಸಹಾಯಸ್ತ ಚಾಚಿದ್ದೆವೆ ಕೆಲವೇ ದಿನಗಳಲ್ಲಿ ಜಗಳೂರಿಗೆ ನಯಸ್ ರಸ್ತೆ ಸಂಸ್ಥಾಪಕ. ಅಶೋಕ್ ಖೇಣಿ ಕರೆ ತಂದು ನಮ್ಮ ನೊಂದವರ ನೆರವಿನ ಟ್ರಸ್ಟ್ ಗೆ ಚಾಲನೆ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಾನಿಗಳಾದ ಹರ್ಷರವರು ಮಾತನಾಡಿ ನಮಗೆ ಜನ್ಮ ನೀಡಿದ ಹಿರೆ ಕುಂಬಳಗುಂಟೆ ಗ್ರಾಮದಲ್ಲಿ ತಮ್ಮ ಜಮೀನುನ್ನು ಸಹ ಶಾಲೆ ಸ್ಥಾಪನೆ ಮಾಡಲು ಬಿಟ್ಟುಕೊಟ್ಟಿದ್ದೆವೆ . ನಮ್ಮ ಉದಾರತೆಗೆ ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸಿ‌ ಉತ್ತಮ ವಿದ್ಯಾರ್ಥಿಗಳಾಗಿ ಉನ್ನತ ಸ್ಥಾನ ಪಡೆದು ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು

ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ ಮಾತನಾಡಿ
ಹರ್ಷರವರು ಮೊಟ್ಟ ಮೊದಲಿಗೆ ಸರ್ಕಾರಿ ಶಾಲೆಗೆ ದೇಣಿಗೆ ನಿಡುವ ಉದ್ದೇಶದಿಂದ ನಮ್ಮ ಕಛೇರಿಗೆ ಬಂದಂತ ಸಂದರ್ಭದಲ್ಲಿ ನಾನು ಅತ್ಯಂತ ಶಿಥಿಲಗೊಂಡ ಶಾಲೆಗಳ ಪಟ್ಟಿ ನೀಡಿದೆ ಆಗ ಅದರಲ್ಲಿ ಕಲ್ಲೇದೇವರಪುರ ಶಾಲೆ ಆಯ್ಕೆ ಮಾಡಿಕೊಂಡು ಈ ಕಾರ್ಯಕ್ರಮದ ಮೂಲಕ ದಾನಿಗಳ ಸೇವಾ ಕಾರ್ಯಕ್ಕೆ ನನ್ನ ಅಭಿನಂದನೆಗಳು ಎಂದರು

ಶಿಕ್ಷಣ ಇಲಾಖೆ ಜಿಲ್ಲಾ ಉಪಾ ನಿರ್ದೇಶಕ ಕೊಟ್ರೇಶ್ ಮಾತನಾಡಿ ದಾವಣಗೆರೆ ಭರತ ಎಂಬ ವಿದ್ಯಾರ್ಥಿ ಎಸ್ ಎಸ್ ಎಲ್ ಸಿ ಪಲಿತಾಂಶದಲ್ಲಿ ರಾಜ್ಯಕ್ಕೆ ಅತ್ಯನ್ನುತ ಸ್ಥಾನ ಗಳಿಸಿ ಜಿಲ್ಲೆ ಕೀರ್ತಿ ತಂದಿದ್ದಾನೆ
46 ವಿದ್ಯಾರ್ಥಿಗಳು ಕ್ರಿಡೆಯಲ್ಲಿ ವಿಜೆತರಾಗಿದ್ದಾರೆ
ಜಿಲ್ಲೆಯಲ್ಲಿ
ಶಾಸಕರ ನಿಧಿಯಿಂದ ಒಟ್ಟು 76 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಆರಂಭ ಮಾಡಿದ್ದೆವೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಮಾರ್ಪಡು ಮಾಡಲಿದ್ದೆವೆ. ಎಂದರು

ಜಿಪಂ ಸಿಇಓ ಗಿತ್ತೆ ಮಾದವ ವಿಠಲ್ ರಾವ್ .ದಾನಿಗಳಾದ ಮಮತಾ ಹರ್ಷ .ತಹಶೀಲ್ದಾರ್ ಸೈಯದ್ ಕಲೀಂ ಉಲಾ.ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ. ಕಾಂಗ್ರೆಸ್ ರಾಜ್ಯ ಎಸ್ ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್. ಬಿಇಓ ಹಾಲಮೂರ್ತಿ.ಗ್ಯಾರಂಟಿ ಸಮಿತಿ ಅದ್ಯಕ್ಷ ಷಂಷೀರ್ ಆಹಮದ್. ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್ .ಕಾಂಗ್ರೆಸ್ ಮುಖಂಡ ಸಣ್ಣಸೂರಜ್ಜ. ತಿಪ್ಪೇಸ್ವಾಮಿ.ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ‌ ಬಿ ಮಹೇಶ್ ಸೇರಿದಂತೆ ಮುಂತಾದವರು ಹಾಜುರಿದ್ದರು..

Leave a Reply

Your email address will not be published. Required fields are marked *

error: Content is protected !!