filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಶುಕ್ರದೆಸೆ ನ್ಯೂಸ್
ಹೊಸ ಅನುಭವ ನೀಡಿದ ತಾಲ್ಲೂಕು ಕೇಂದ್ರ ಜಗಳೂರು ಮೊಟ್ಟ ಮೊದಲಿನದಾಗಿ ನಾನು ಗ್ರೇಡ್ ಟು ತಹಶೀಲ್ದಾರ್ ರಾಗಿ ಸೇವೆ ಸಲ್ಲಿಸಲು ಹೊಸ ಅನುಭವ ನೀಡಿದ ಜಗಳೂರು ಎಂದಿಗೂ ಮರೆಯಲಾರೆ ಸೈಯದ್ ಕಲಿಂ ಉಲಾ ಬಿಳ್ಕೋಡಿಗೆ ಸಮಾರಂಭದಲ್ಲಿ ಇಂಗಿತ

ಜಗಳೂರು‌‌ ಪಟ್ಟಣದಲ್ಲಿ ನಡೆದ ನೂತನ ಪ್ರಭಾರ ತಹಶೀಲ್ದಾರ್ ಗುರುಬಸವರಾಜ್ ಆಗಮನ ಮತ್ತು ಸುದೀರ್ಘವಾಗಿ ಜಗಳೂರು ಕ್ಷೇತ್ರದಲ್ಲಿ‌ ತಾಲ್ಲೂಕು ದಂಢಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಸರ್ಕಾರಿ ಆದೇಶದಂತೆ ಬೇರೆಡೆಗೆ ವರ್ಗಾವಣೆಗೊಂಡಿರುವ ತಹಶೀಲ್ದಾರ್ ಸೈಯದ್ ಕಲಿಂ ಉಲಾ ರವರಿಗೆ ಏರ್ಪಡಿಸಲಾಗಿದ್ದ ಬಿಳ್ಕೋಡಿಗೆ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ನಮ್ಮ ತಂದೆ ಮತ್ತು ತಾಯಿಯವರ ಕಲಿಸಿಕೊಟ್ಟ ಸನ್ಮಾರ್ಗದಲ್ಲಿ ನಾನು ಶಿಸ್ತು ಸಂಯಮ ಕಲಿತು ನಮ್ಮ ತಂದೆಯವರ ಅಶಿರ್ವಾದಿಂದ ಅಧಿಕಾರಿಯಾಗಿ ಮೂಲದಲ್ಲಿ ದಾವಣಗೆರೆ ಜಿಲ್ಲಾ ಕಛೇರಿಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸುತಾ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಅನುಭವ ಇತ್ತೆ ಹೊರೆತು .ತಹಶೀಲ್ದಾರ್ ರಾಗಿ ಅನುಭವವಿರಲಿಲ್ಲ ಆದರೆ 2023 ರಲ್ಲಿ ಜಗಳೂರು ತಹಶೀಲ್ದಾರ್ ರಾಗಿ ಪ್ರಮೋಷನ್ ಆದ ನಂತರ ಮೊಟ್ಟ ಮೊದಲಿನದಾಗಿ‌ ಜಗಳೂರು ತಾಲ್ಲೂಕು ತಹಶೀಲ್ದಾರ್ ರಾಗಿ ಅಧಿಕಾರ ಸ್ವಿಕರಿಸಿದ ನಂತರ ಇಲ್ಲಿನ ಜನರ ಅನೇಕ ಸಮಸ್ಯೆಗಳ ಕಡತಗಳು ಮತ್ತು ಇಲ್ಲಿನ ಮೂಲಭೂತ ಸಮಸ್ಯೆಗಳ ಹೋರಾಟಗಳು ನನಗೆ ಹೊಸ ಅನುಭವ ನೀಡಿ ನಾನು ಹೆಚ್ಚು ಹೆಚ್ಚು ಕೆಲಸ ಕಲಿಯಲು ಸಹಕಾರ ನೀಡಿದ ತಾಲ್ಲೂಕು ಕೇಂದ್ರ ಅದು ಜಗಳೂರು ಎಂದರೆ ತಪ್ಪಾಗಲಾರದು

.ಜಗಳೂರು ಬರಪೀಡಿತ ತಾಲ್ಲೂಕು ಕೇಂದ್ರ ಅಭಿವೃದ್ದಿಗೆ ಶ್ರಮಿಸಿದ ತೃಪ್ತಿ ನನಗಿದೆ . ಕಳೆದ ದಿನಗಳಲ್ಲಿ ನಡೆದ ಹಿರೆಮಲ್ಲನಹೊಳೆ ಗ್ರಾಮದ ಕೆರೆಯಲ್ಲಿ ಒಂದು ಮಗು ಕೆರೆಗೆ ಬಿದ್ದು ಮರಣ ಹೊಂದಿದ ಕಹಿ ಘಟನೆ ನನಗೆ ಒಂದು ಸವಾಲು ಆಗಿತ್ತು ಅಲ್ಲಿನ ನಿವೇಶನ ರಹಿತ ಕುಟುಂಬದವರಿಗೆ ನಿವೇಶನ ಒದಗಿಸಲು ಹಕ್ಕುಪತ್ರಕ್ಕಾಗಿ ಹೋರಾಟದ ದಿನಗಳಲ್ಲಿ ನನ್ನಂತ ಒಬ್ಬ ತಹಶೀಲ್ದಾರ್ ನ ಮೇಲೆ ಪ್ರಕರಣ ಧಾವೆ ಹೂಡಲು ಮುಂದಾಗಿದ್ದರು ಅದನ್ನ ನಾನು ಸವಾಲಾಗಿ ಸ್ವೀಕರಿಸಿ ಅತಿ ಶೀಘ್ರದಲ್ಲಿಯೇ ಆ ಬಡ ಕುಟುಂಬದವರಿಗೆ ಕ್ಷೇತ್ರದ ಶಾಸಕರಾದ .ಬಿ ದೇವೇಂದ್ರಪ್ಪರವರ ದೂರದೃಷ್ಟಿ ಸಹಕಾರದಿಂದ ಕಂದಾಯ ಗ್ರಾಮ ಎಂದು ಘೋಷಣೆ ಮಾಡಿ ಅವಮಾನ ಮಾಡಿದವರ ಮುಂದೆ ಸನ್ಮಾನ ಪಡೆದು ಬಡ ಜನರಿಗೆ ನಿವೇಶನ ಬಾಗ್ಯ ನೀಡಿದ್ದೆ ತೃಪ್ತಿ ನನಗಿದೆ ಇಂತ ಅನೇಕ ಸವಾಲುಗಳು ನನಗೆ ಪರಿಪಕ್ವತೆ ತಹಶಿಲ್ದಾರ್ ರಾಗಲು ಪ್ರೇರಣೆ ನೀಡಿವೆ. ಒಟ್ಟಾರೆ ಎಂತ ಸಮಸ್ಯೆತ್ಮಕ ಕಡತಗಳನ್ನ ಸಹ ನಾನು ನನ್ನ ಸಿಬ್ಬಂಧಿಗಳ ಸಹಕಾರದಿಂದ ಆತ್ಮಸ್ಥೈರ್ಯದಿಂದ ಕೆಲಸ ಮಾಡಿದ್ದೆವೆ
.ರಾಜ ಸ್ವ ನೀರಿಕ್ಷಕರ ಮತ್ತು
ನಮ್ಮ ಗ್ರಾಮ ಲೆಕ್ಕಾಧಿಕಾರಿಗಳ ಸಹಕಾರದಿಂದ ಸರ್ಕಾರದ ಪೌತಿ‌ ಖಾತೆ ಆಂದೋಲನ ಉತ್ತಮವಾಗಿ ಕಾರ್ಯನಿರ್ವಹಿಸಿ ಹಿಡಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದೆವೆ. 94 ಅಡಿ ಕಂದಾಯ ಗ್ರಾಮಗಳನ್ನಾಗಿ ಹೆಚ್ಚು ಬಡವರಿಗೆ ಹಕ್ಕುಪತ್ರ ಸೇರಿದಂತೆ ಸರ್ಕಾರದ ಪ್ರತಿ ಕಾರ್ಯಕ್ರಮಗಳನ್ನ ಚಾಚು ತಪ್ಪದೆ ಕಾರ್ಯನಿರ್ವಹಿಸಿ ಸಮರ್ಥ ಆಡಳಿತ ನೀಡಿದ ತೃಪ್ತಿ‌ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿದರು.

ಅದೇ ರೀತಿ ನೂತನ ಪ್ರಭಾರ ತಹಶೀಲ್ದಾರ್ ರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಗುರುಬಸವರಾಜ್ ರವರಿಗೂ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡಿದರೆ ಅವರು ಕೂಡ ಅನುಭವಿ ತಹಶೀಲ್ದಾರ್ ಉತ್ತಮ ಕರ್ತವ್ಯ ಮಾಡಲಿದ್ದಾರೆ ಎಂದು ಭರವಸೆ ಮೂಡಿಸಿದರು.
ಕಾರ್ಯಕ್ರಮದಲ್ಲಿ

ಸರ್ಕಾರಿ ಆದೇಶದಂತೆ ಬೆಂಗಳೂರು ಯಲಂಕ ಕ್ಷೇತ್ರಕ್ಕೆ ವರ್ಗಾವಣೆಗೊಂಡ ತಹಶೀಲ್ದಾರ್ ಸೈಯದ್ ಕಲಿಂ ಉಲಾರವರಿಗೂ ಹಾಗೂ ಕಛೇರಿ ಸಿಬ್ಬಂದಿಯಾದ ಸುರೇಶ್ ಮತ್ತು ಮಧುರವರಿಗೆ ತಾಲ್ಲೂಕು ಕಛೇರಿ ಸಿಬ್ಬಂಧಿಗಳು ಆತ್ಮೀಯವಾಗಿ ಬಿಳ್ಕೊಟ್ಟರು . ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ. ನಿವೃತ್ತ ಸಮಾಜ ಕಲ್ಯಾ ಇಲಾಖೆ ಅಧಿಕಾರಿ ಬಿ.ಮಹೇಶ್ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವರ ಧರ್ಮಪತ್ನಿ ಹಸೀನಾ.ಬಿ ಸೈಯದ್ ಕಲಿಂ ಉಲಾ.ಅವರ ತಾಯಿಯವರಾದ ಬಸೀರ್ ಬಾನು.ನೂತನ ತಹಶೀಲ್ದಾರ್ ಗುರುಬಸವರಾಜ್. ಬಿಳಿಚೋಡು‌ ನಾಡ ಕಛೇರಿ ಉಪಾ ತಹಶೀಲ್ದಾರ್ ರೂಪಾ.ಉಪಾಖಜಾನೆ ಇಲಾಖೆ ಅಧಿಕಾರಿ ಉಮೇಶ್. ಸೊಕ್ಕೆ ನಾಡ ಕಛೇರಿ ರಾಜಸ್ವನಿರಿಕ್ಷಕರಾದ ಕೀರ್ತಿ.ಗ್ರಾಮಲೆಕ್ಕಾಧಿಕಾರಿಗಳ ಒಕ್ಕೂಟದ ಸಂಘದ ಅದ್ಯಕ್ಷ ಅರುಣಕುಮಾರ್. ಚುನಾವಣೆ ಶಿರಸ್ತೆದಾರರಾದ ಚಂದ್ರಣ್ಣ. ನ್ಯಾಯಬೆಲೆ ಅಂಗಡಿ ಮಾಲಿಕಾರಾದ ಓಮಣ್ಣ. ಆಹಾರ ಇಲಾಖೆ ವಸಂತ. ಗ್ರಾಮಲೆಕ್ಕಾಧಿಕಾರಿಗಳಾದ ದುರುಗೇಶ್.ನವೀನ್.ಶಿವರಾಜ್.ಸುವರ್ಣಮ್ಮ. ಪ್ರದೀಪ್.ದಿಲಿಪ್. ಪ್ರವೀಣ್ ಸೇರಿದಂತೆ ಮುಂತಾದ ಸಿಬ್ಬಂಧಿಗಳು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!