ಶುಕ್ರದೆಸೆ ನ್ಯೂಸ್
ಜಗಳೂರು ಕ್ಷೇತ್ರದ ಸರ್ವೋತಮುಖ ಅಭಿವೃದ್ದಿಗೆ ಮುನ್ನಡಿ ಬರೆದ‌ ಶಾಸಕ ಬಿ.ದೇವೇಂದ್ರಪ್ಪ ಮೂರು ವರ್ಷಗಳ ಅವಧಿಯಲ್ಲಿ ಜನಪರ ಆಡಳಿತಕ್ಕೆ ಸಾಕ್ಷಿಯಾದ ಅಗ್ರಗಣ್ಯ ಜನನಾಯಕ.

ಜಗಳೂರು ಪಟ್ಟಣದ ಮುಖ್ಯ ರಸ್ತೆ ಒಂದು ಸವಾಲಾಗಿತ್ತು ಅಗಲಿಕರಣ ನನ್ನ ದ್ಯೇಯ್ಯ ನನ್ನ ಉದ್ದೇಶವಾಗಿತ್ತು ವರ್ತಕರ ವಿಶ್ವಾಸ ಪಡೆದು ರಸ್ತೆ ಅಗಲಿಕರಣ ಮಾಡಿದ್ದೆವೆ ಕೆಲವರು ಅಭಿವೃದ್ದಿಗೆ ಹಿನ್ನಡೆ ಮಾಡಿದ ವರ್ತಕರ ವಿರುದ್ದ ಏರು ದ್ವನಿಯಲ್ಲಿ ಮಾತನಾಡಿದ್ದೆನೆ ಅದು ಈ ನಾಡಿನ ಜನರ ಕ್ಷೇತ್ರದ ಅಭಿವೃದ್ದಿಗೋಸ್ಕರ್ ದ್ವನಿ‌ ಮಾಡಿರುವೆ ವಿನ ನನ್ನ ಸ್ವಾರ್ತಕ್ಕಲ ಎಂದು ಶಾಸಕರಾದ ಬಿ.ದೇವೇಂದ್ರಪ್ಪ ಮನದಾಳದ ಮಾತಿನ‌ ಮೂಲಕ ತನ್ನ ಇಂಗಿತ ವ್ಯಕ್ತಪಡಿಸಿದ್ದಾರೆ.

ನನ್ನ ಮೂರು ವರ್ಷದ ಸಾಧನೆ 650 ಕೋ ರೂ ಕಾಮಗಾರಿಗಳ ಅನುದಾನ ತಂದು ಸಮರ್ಪಕವಾಗಿ ಜಗಳೂರು ಕ್ಷೇತ್ರ ಅಭಿವೃದ್ದಿಗೆ ಮುನ್ನುಡಿ ಬರೆದು ಸೇವೆ ಮಾಡುವ ಬಾಗ್ಯ ನನ್ನದಾಗಿದೆ.

ಸುಮಾರು 75 ಲಕ್ಷ ರೂಗಳಲ್ಲಿ ಜಗಳೂರು ಪಟ್ಟಣದ ಮುಖ್ಯ ರಸ್ತೆಗೆ ಆಳವಡಿಸಲಾದ ಜಗಮಗಿಸುವ ವಿದ್ಯತ್ ದೀಪಾಲಾಂಕಾರ ಲೋಕರ್ಪಣೆಗೋಳಿಸಿ ಶಾಸಕರ ಮೂರು ವರ್ಷದ ಸಾಧನೆ ಕುರಿತು ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಿ.ದೇವೇಂದ್ರಪ್ಪ ರವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ನಮ್ಮ ಕಿಂಗ್ ಮೇಕರ್ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಡಳಿತದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅನ್ನ, ಆಹಾರ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿ 5 ಗ್ಯಾರಂಟಿ ಯೋಜನೆಗಳನ್ನು ನಾಡಿನ ಜನತೆಗೆ ಸಮರ್ಪಕವಾಗಿ ತಲುಪಿಸಿದ್ದೆವೆ. ಇದೀಗ ನೂತನ ಮುಖ್ಯಮಂತ್ರಿ ಡಿ ಕೆ.ಶಿವಕುಮಾರ್ ಯುಗಾರಂಭ ಪ್ರಾರಂಭವಾಗಿದೆ. ಜಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನಕ್ಕಾಗಿ ನಾನು ಉಭಯ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಿದ್ದೆನೆ ಈಗಾಗಲೇ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹಲವಾರು ಮಹತ್ವದ ಕಾಮಗಾರಿಗಳನ್ನು ಕೈಗೊಂಡಿದ್ದೆವೆ‌.
ಮೂರು ವರ್ಷದ ಅವಧಿಯಲ್ಲಿ ನಡೆದ ಅಭಿವೃದ್ದಿ ಕಾಮಗಾರಿಗಳನ್ನ ಮೆಲುಕು ಹಾಕುವ ಮೂಲಕ ವಿದ್ಯುತ್ ದೀಪಾಲಾಂಕಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಂಗವಾಗಿ ,ಕಾಂಗ್ರೆಸ್ ಭಾವುಟ ಹಿಡಿದು ಬೈಕ್ ರೋಡ್ ಶೋ ನಡೆಸಿ ಮುಖ್ಯ ರಸ್ತೆಯಲ್ಲಿ ದೀಪಾ ಬೆಳಕಿನ ಆನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಕೊಣಚಗಲ್ ಬಳಿ ಕಾರ್ಮಿಕ ವಸತಿ ಶಾಲೆ ಆರಂಭ .10 ಕೋ ರೂಗಳಲ್ಲಿ ರೈತರ ದವಸ ಶೇಖರಿಸಲು ಕೂಲ್ಡ್ ಸ್ಟೋರೇಜ್ ಘಟಕ ಸ್ಥಾಪನೆ 198 ಕೋ ರೂಗಳಲ್ಲಿ ಗೌರಿಪುರದ ಬಳಿ ಕೆ.ಇ ಬಿ ಸಭ್ ಸ್ಟೇಷನ ಆರಂಭ.ನೂತನವಾಗಿ ಸರ್ಕಾರಿ ಬಸ್ ಡಿಪೋ ಸ್ಥಾಪನೆ . 12 ಕೋ ರೂಗಳಲ್ಲಿ ಪಟ್ಟಣದ ಕೆರೆ ಅಭಿವೃಧ್ದಿಪಡಿಸಿ ಕೆ.ಅರ್ ಎಸ್ ಮಾದರಿಯಲ್ಲಿ ಪ್ರವಾಸದ್ಯೋಮವನ್ನಾಗಿಸುವ ಚಿಂತನೆಯಿದೆ .
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಸೇರಿದಂತೆ ಒಟ್ಟಾರೆ 300 ಕೋಟಿಗು ಅಧಿಕ ಅನುದಾನ ಈಗಾಗಲೇ ಮಂಜೂರಾಗಿ ಜಗಳೂರು ಕ್ಷೇತ್ರಕ್ಕೆ ಸರ್ಕಾರದಿಂದ ಅನುದಾನ ತಂದು ಸರ್ವಾಗಿಣ ಅಭಿವೃಧ್ದಿಗೆ ಬದ್ದವಾಗಿದ್ದು ಜನರ ಸಹಕಾರ ಬಹುಮುಖ್ಯ ಎಂದಿದ್ದಾರೆ.

ಜಗಳೂರು ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಹಿಂದೂಳಿದ ತಾಲೂಕುಗಳ ಕೇಂದ್ರದಲ್ಲಿ ಒಂದಾಗಿರುವ ಜಗಳೂರಿನಲ್ಲಿ ಅಭಿವೃದ್ಧಿ ಹಸಿರು ಕ್ರಾಂತಿಗೆ ಚಾಲನೆ ನೀಡಲಾಗಿದೆ.ಸಿರಿಗೆರೆ ಶ್ರೀಗಳ ಅಶಿರ್ವಾದಿಂದ 57 ಕೆರೆ ನೀರು ತುಂಬಿಸುವ ಯೋಜನೆ ಈ ನಾಡಿನ ರೈತಾಪಿ ಜನರ ನಿರಾವರಿ ಉಸಿರಾಗಿದೆ.
ಕಳೆದ ಮೂರು ವರ್ಷಗಳಲ್ಲಿ ನೀರಾವರಿ, ಆರೋಗ್ಯ, ರಸ್ತೆ ಮತ್ತು ಮೂಲ ಸೌಲಭ್ಯಕ್ಕಾಗಿ ಮಹತ್ವದ ಅಭಿವೃದ್ಧಿಗೆ ಕಾಮಗಾರಿಗಳಿಗೆ ಒತ್ತು ನೀಡಲಾಗಿದೆ
ಮತ್ತೊಂದು ಬಹುಮುಖ್ಯವಾದ ಯೋಜನೆ ಅಪ್ಪರ್ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಾಮಗಾರಿ ಈಗಾಗಲೇ ಶೇ.45ರಷ್ಟು ಪೂರ್ಣಗೊಂಡಿದ್ದು, ಮುಂಬರುವ ದಿನಗಳಲ್ಲಿ ವರದಾನವಾಗಲಿದೆ.
ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, ಜಗಳೂರು ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲೇ ಆಸ್ಪತ್ರೆಯ ಮೂಲಸೌಕರ್ಯ ವಿಸ್ತರಣೆ ಮತ್ತು ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದರ ಮೂಲಕ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಗುರಿ ತಾಲ್ಲೂಕಿನ ಸಿದ್ದಿಹಳ್ಳಿ ಗ್ರಾಮದ ಜಿನಿಗಿ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿ ಬಿಡ್ಜ್ ಕಂ ಬ್ಯಾರೆಜ್. ದಿ ಇಮಾಂ ಸಾಹೇಬರ ಕಾಲದ ರಸ್ತೆಗೆ ಹೊಸ ರೂಪ ನಿಡಿ
ಉದ್ಘಘಟ್ಟ ಗ್ರಾಮದ ಸಮೀಪ ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಿರ್ಮಿಸಲಾಗಿದೆ. ಇನ್ನು ಮುಂತಾದ ಹಲವು ಪ್ರಮುಖ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ. ಈಗಾಗಲೇ ಚಿಕ್ಕಮ್ಮನಹಟ್ಟಿ ಗ್ರಾಮದ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಜಗಳೂರು ಪಟ್ಟಣದ ಕೆರೆಯನ್ನು ₹12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಬರದಿಂದ ಸಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಬ್ಲಾಕ್ ಅದ್ಯಕ್ಷರಾದ ಪಿ.ಎಸ್ ಸುರೇಶಗೌಡ್ರು ರಾಜ್ಯ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಾಟೇಲ್, ಪಲ್ಲಾಗಟ್ಟೆ ಶೇಖರಪ್ಪ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಕುರಿ ಜಯ್ಯಣ್ಣ, ಸಣ್ಣ ತಾನಾಜಿ, ಮುಖಂಡರಾದ ನಾಗೇಂದ್ರರೆಡ್ಡಿ.ಕಾಂಗ್ರೆಸ್ ಎಸ್ ಸಿ ಘಟಕದ ತಾಲ್ಲೂಕು ಅದ್ಯಕ್ಷ ಬಿ.ಮಹೇಶ್. ಕಾಂಗ್ರೆಸ್ ಮಹಿಳಾ ಘಟಕದ ಸಾವಿತ್ರಮ್ಮ.ಜಯಶಿಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!