ಜಗಳೂರು ಸುದ್ದಿ
ಪಕ್ಷೇತರ ಅಭ್ಯರ್ಥಿ ಹೆಚ್.ಪಿ.ರಾಜೇಶ್ ಅಬ್ಬರದ ಪ್ರಚಾರ .ಸ್ವಾಭಿಮಾನಿ ಸ್ವತಂತ್ರ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ಪರ ಚುನಾವಣೆ ಪ್ರಚಾರದ ವೇಳೆ ಸಾಥ್ ನೀಡಿದ ಜನತೆ ಜನರ ಜೊತೆ ಹೆಜ್ಜೆ ಹಾಕಿದ ಜನ ನಾಯಕ ಪಕ್ಷೇತರ ಅಭ್ಯರ್ಥಿ ಪರ ಜನವೂ ಜನ ೯ ಶುಕ್ರದೆಸೆ ನ್ಯೂಸ್:- ಜಗಳೂರು ಸುದ್ದಿ:ತಾಲೂಕಿನ ದೇವಿಕೆರೆ,ಬಿಳಿಚೋಡು ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ
ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರು ಅದ್ದೂರಿ ರೋಡ್ ಶೊ ನೊಂದಿಗೆ ಅಬ್ಬರದ ಪ್ರಚಾರ ನಡೆಸಿದರು.
ನಂತರ ಮಾತನಾಡಿದ ಅವರು,ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದ ಬಿಳಿಚೋಡು ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಿ.ಸಿ.ರಸ್ತೆ,ಸೂರು,ನೀರು,ಸ್ವಯಂ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ,ಗಂಗಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ.ನಿಮ್ಮ ಮನೆಯ ಮಗನಾಗಿ ಸೇವೆಗೈಯಲು ಮತ್ತೊಮ್ಮೆ ಶಾಸಕ ನಾಗಿ ಆಯ್ಕೆಯಾಗಲು ಅವಕಾಶಕೊಡಿ.ಕ್ಷೇತ್ರದ ಮತದಾರರ ನಿರ್ಧಾರದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವೆ.ಪ್ರಚಾರದ ವೇಳೆ ಸ್ವಾಭಿಮಾನಿ ಅಭಿಮಾನಿ ಬಳಗ ನನ್ನನ್ನು ಅಭೂತ ಪೂರ್ವವಾಗಿ ಸ್ವಾಗತದೊಂದಿಗೆ ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿರುವುದು ಗೆಲುವಿನ ಉತ್ಸಾಹ ಹೆಚ್ಚಿಸಿದೆ.ಮೇ.10 ರಂದು ಮತದಾರರ ತೀರ್ಪು ನೀಡಲಿದ್ದಾರೆ.ಕ್ಷೇತ್ರದ ಮತದಾರರ ತೀರ್ಪಿಗೆ ಬದ್ದನಾಗಿರುವೆ ಎಂದರು.
ನನ್ನ ತೆಂಗಿನತೋಟದ ಗುರುತಿಗೆ ಮತನೀಡಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ಮಾಜಿ ಶಾಸಕ ಗುರುಸಿದ್ದನಗೌಡ್ರ ಪುತ್ರರಾದ ಪ್ರವೀಣ್.,ಅರವಿಂದ್. ಮುಖಂಡರಾದ ಎಲ್ ಬಿ.ಬೈರೇಶ್. ಸೇರಿದಂತೆ
ಮುಖಂಡರಾದ ಉದಯಶಂಕರ್ ಒಡೆಯರ್ ,ನಾಗನಗೌಡ, ಗಿರೀಶ್ ಒಡೆಯರ್, ಬಸವಾಪುರ ರವಿಚಂದ್ರ. ಬೈರೇಶ್,ಯು.ಜಿ.ಶಿವಕುಮಾರ್,ಎಂ.ಎಸ್.ಪಟೇಲ್,ವಕೀಲ ಬಸವರಾಜ್ .ತಿಮ್ಮಭೋವಿ.,ಸೇರಿದಂತೆ ಇದ್ದರು.