By shukradeshe news
editor m.rajappa vyasgondanahalli
Kannada | online news portal |Kannada news online July 31_7_2026
ಮಕ್ಕಳ ಮನಸ್ಸಿನಲ್ಲಿ ಸೂಪ್ತ ಪ್ರತಿಭೆ ಗುರುತಿಸಿದ ಅರ್ಥಪೂರ್ಣ ಗುರುಪೂರ್ಣಮಿ
ನಾಡಿನ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕಾಗಿ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಶ್ರೀ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ಸೇವೆ ಅವಿಸ್ಮರಣ ಯವೆಂದು ಸಂಗೀತ ಶಿಕ್ಷಕ ಶಾಂತಿನಾಥ ಬೋನಿ ಹೇಳಿದರು.
ನಗರದ ಸಾರ್ವಜನಿಕ ಮುಖ್ಯ ಗ್ರಂಥಾಲಯ ಹಿಂಭಾಗದ ಗುಜ್ಜರ್ ಬಿಲ್ಡಿಂಗ್‌ನಲ್ಲಿ, ಶ್ರೀ ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಗುರುಪೂರ್ಣಮಿ ಹಾಗೂ ಖ್ಯಾತ ಗಾಯಕಿ ಎಸ್ ಜಾನಕಿ ಅಮ್ಮನವರ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ಕಳೆದ 3 ವರ್ಷಗಳಿಂದ ಈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಣ್ಣಪ್ಪ ಅಜ್ಜೇರ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರುಗಳು ವರ್ಷದ ಹಲವಾರು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಆಸಕ್ತರಿಗೆ ಸಂಗೀತದ ಜ್ಞಾನವನ್ನು, ಮಕ್ಕಳಿಗೆ ವಯಸ್ಕರಿಗೆ ಕಲಿಸುವಲ್ಲಿ ಶ್ರಮಿಸುತ್ತಿದ್ದಾರೆ. ನಮ್ಮನಗಲಿದ ಹೇಸರಾಂತ ಗಾಯಕಿ ದಿ.ಎಸ್ ಜಾನಕಿ ಅವರ ಕುರಿತು ನುಡಿನಮನ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನಿಯ ಕಾರ್ಯವೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿತಾ ಕೆ ಮಾತನಾಡಿ, ಜನನಿ ಜನ್ಮದಾತ ಸಂಸ್ಥೆಯು ಬೇಸಿಗೆ ಶಿಬಿರಗಳ ಮೂಲಕ ಮಕ್ಕಳ ಮನಸ್ಸಿನಲ್ಲಿನ ಸೂಪ್ತ ಪ್ರತಿಭೆಗೆ ಸ್ಪಂದಿಸಿ ಪ್ರೋತ್ಸಾಹಿಸುವ ಸಂಸ್ಥೆಯಾಗಿದ್ದು. ಈ ಸಂಸ್ಥೆಯ ಸೇವೆಗೆ ಆರ್ಥಿಕ ಸಹಕಾರ ನೀಡುವ ದಾನಿಗಳು ಮುಂದೆ ಬಂದಲ್ಲಿ ಮಕ್ಕಳ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಅಜ್ಜೇರ, ಡ್ಯಾನ್ಸ್ ಮಾಸ್ಟರ್ ಗೋವಿಂದ್, ಮಹಾಂತೇಶ್, ಶೀಮಾ, ಪುಷ್ಪಾ. ರೇಖಾ, ಸಾವಿತ್ರಿ, ಪ್ರೇಮಾ, ರವಿ, ಉಮೇಶ್ ಹಾಗೂ ಶ್ರೀಗುರು ಪುಟ್ಟರಾಜ ಗವಾಯಿ ಹಿಂದುಸ್ಥಾನಿ ಸಂಗೀತ, ಕರೋಕೆ ಪಾಠಶಾಲೆಯ ಮಕ್ಕಳು, ಕಲಾವೀದರು, ತಾಯಂದಿರು ಇದ್ದರು.
