• ಸಿಸಿ ಕ್ಯಾಮರ್ ಆಳವಡಿಸುವ ನೆಪದಲ್ಲಿ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡ ಐಟಿಐ ಕಾಲೇಜು ಪ್ರಾಂಶುಪಾಲ ವೀರೇಂದ್ರಮೂರ್ತಿ ಬಣ್ಣ ಬಯಲು

ಜಗಳೂರು‌ ಸುದ್ದಿ‌

By shukradeshe news
editor m.rajappa vyasgondanahalli
Kannada | online news portal |Kannada news online August 5_ 8_2026
ಸರ್ಕಾರಿ ಐಟಿಐ ಕಾಲೇಜಿನಲ್ಲಿ C C T V ಖರೀದಿಯಲ್ಲಿ ಗೋಲ್ಮಾಲ್ ಮಾಡಿದ ಕಾಲೇಜು ಪ್ರಾಂಶುಪಾಲರಾದ ಶ್ರೀ ವೀರೇಂದ್ರಮೂರ್ತಿ ಮತ್ತು ಕಾಲೇಜ್ ನ ಪ್ರಥಮ ದರ್ಜೆ ಸಹಾಯಕರಾದ ಸೌಮ್ಯ. ಪಿ ಇವರ ಗೋಲ್ಮಾಲ್ ಬಣ್ಣ ಬಟಬಯಲಾಗಿದೆ..
C C T V ಅಳವಡಿಕೆ ಆಗದೆ ಕಳೆದ ಮಾರ್ಚ್ ತಿಂಗಳಲ್ಲೇ ಬಿಲ್ ಪಾಸ್ ಮಾಡಿದ್ದಾರೆ.. ಇದುವರೆಗೂ ಯಾವುದೇ CCTV ಆಳವಡಿಸದೇ
ಸಂಬಂಧಿಸಿದ ಸಾಮಾನು ಖರದಿಸದೇ ಬೋಗಸ್ ವೋಚರ್ ತಯಾರಿಸಿ ಬಿಲ್ ಪಾಸ್ ಮಾಡಿ ಭ್ರಷ್ಟಚಾರ ಮಾಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ ಅಧಿಕಾರಿಗಳ ಪರಿಶೀಲನೆ ನಡೆಸಿ ಕ್ರಮಕೈಗೋಳ್ಳಬೇಕೆಂದು ವಿದ್ಯಾರ್ಥಿ ಸಂಘಟನೆ ಮುಖಂಡರು ಮತ್ತು ನಾಗರೀಕರು ಒತ್ತಾಯಿಸಿದ್ದಾರೆ

ಜಗಳೂರು ಪಟ್ಟಣದ ಅಶ್ವತ್ ರೆಡ್ಡಿ ನಗರದ ಬಳಿ ಹೊರವಲಯದಲ್ಲಿರುವ ಸರ್ಕಾರಿ ಐಟಿಐ. ಕಾಲೇಜಿನ ಗೋಲ್ ಮಾಲ್ ಅಲ್ಲಿನ ಪ್ರಾಂಶುಪಾಲರು ಹಾಗೂ ಪ್ರಥಮ ದರ್ಜೆ ಸಹಾಯಕ ‌ಸೌಮ್ಯ. ಪಿ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಕತ್ತರಿ ಹಾಕಿ ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ ಎಂಬುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸುದ್ದಿ ಹರಡಿದೆ.

2026 ನೇ ಸಾಲಿನಲ್ಲಿ ಕಾಲೇಜಿಗೆ ಸಿಸಿ ಕ್ಯಾಮರ್ ಆಳವಡಿಸುತ್ತವೆ ಎಂದು ಸರ್ಕಾರಿ ಅನುದಾನ ಮಂಜೂರು ಮಾಡಿಸಿಕೊಂಡು ಯಾವುದೇ ಕಣ್ಣಾಗಾವಲು ಕ್ಯಾಮರ್ ಆಳವಡಿಸದೆ ಅನುದಾನ ದುರುಪಯೋಗಪಡಿಸಿಕೊಂಡು ಸುಮಾರು 150.000 ಲಕ್ಷ ರೂಗಳಷ್ಟು ಹಣವನ್ನ ತನ್ನ ಜೇಬಿಗೆ ಇಳಿಸಿಕೊಂಡು ಉಂಡು ಮೆರೆಯುವ ಪ್ರಾಂಶುಪಾಲ ಮತ್ತು ಪ್ರಥಮ ದರ್ಜೆ ಸಹಾಯಕಿ ಮುಖವಾಡ ಬಯಲಾಗಿದೆ ಅದಕ್ಕೆ ಸಾಕ್ಷಿಯಂಬಂತೆ ಕಾಲೇಜಿನಲ್ಲಿ ಇದಯವರೆಗೂ ಯಾವುದೇ ಸಿಸಿ ಕ್ಯಾಮರ್ ಆಳವಡಿಸದೆ ಬೋಗಸ್ ಬಿಲ್ ಮಾಡಿಕೊಂಡು
ತಿಂದುಂಡು ಮೆರೆದು ತಮ್ಮಗಳ ಬಾಯಿಗೆ ವರೆಸಿಕೊಂಡಿದ್ದಾರೆ.
ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ದುರುಪಯೋಗ ಮಾಡಿಕೊಂಡಿರುವ ಸರ್ಕಾರದ ಹಣವನ್ನ ವಸೂಲಾತಿ ಮಾಡಿ ಸಿಸಿ ಕ್ಯಾಮರ್ ಆಳವಡಿಸಬೇಕು .ನಂತರ ಹಣ ದುರುಪಯೋಗ ಮಾಡಿಕೊಂಡಿರುವ ತಪ್ಪಿಸ್ಥರ ಸಸ್ಪೆಂಡ್ ಮಾಡಲು ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ….
.

ಸರ್ಕಾರಿ ಕೈಗಾರಿಕಾ ಉದ್ಯೋಗ ತರಬೇತಿ ಕಾಲೇಜಿನಲ್ಲಿ ನಡೆದಿರುವ ಭ್ರಷ್ಟಚಾರದ ವಿರುದ್ದ ಶೀಘ್ರದಲ್ಲಿಯೇ ಸಂಘಟನೆ ಮುಖಂಡುರುಗಳು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *

You missed

error: Content is protected !!