By shukradeshe news
editor m.rajappa vyasgondanahalli
Kannada | online news portal |Kannada news online august 6_ 8_2026
ಸರ್ಕಾರಿ

ಶುಕ್ರದೆಸೆ ನ್ಯೂಸ್ ವರದಿಗೆ ಎಚ್ಚೆತ್ತ ಪ್ರಾಂಶುಪಾಲರು ಸಿಸಿ ಕ್ಯಾಮರ್ ಹಣ ಯಾವುದೇ ರೀತಿ ದುರ್ಬಳಕೆಯಾಗಿರುವುದಿಲ್ಲ‌ ನಾವು ಖರಿದಿಸಿದ ಸಿಸಿ‌ ಕ್ಯಾಮರ್ ಮೇಟರಿಯಲ್ ಬಂದಿದ್ದು ಶೀಘ್ರವೆ ಆಳವಡಿಸಲಾಗುವುದು ಪ್ರಾಂಶುಪಾಲ ವೀರೆಂದ್ರಮೂರ್ತಿ

ಜಗಳೂರು ಸರ್ಕಾರಿ ಐ.ಟಿ ಐ ಕಾಲೇಜಿನಲ್ಲಿ ಮನೆಯೊಂದು ಮೂರು ಬಾಗಿಲು”

ಜಗಳೂರು ಪಟ್ಟಣದ ಹೊರವಲಯದ ಅಶ್ವತ್ ರೆಡ್ಡಿ ನಗರದ ಬಳಿಯಿರುವ ಸರ್ಕಾರಿ ಐ.ಟಿ ಐ ಕಾಲೇಜಿನಲ್ಲಿ ಉಪಾನ್ಯಾಸಕರು ಮತ್ತು ಸಿಬ್ಬಂಧಿಗಳ ನಡುವೆ ಸಮನ್ವಯತೆ ಹೊಂದಾಣಿಕೆ ಕೊರತೆಯಿಂದ ಬಂದ ಅನುದಾನವನ್ನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ವಿಫಲವಾಗಿದ್ದಾರೆ.

ಅಲ್ಲಿನ ಕೆಲ ಸಿಬ್ಬಂಧಿ ವರ್ಗ ಹಾಗೂ ಸ್ಟೋರ್ ಕಿಪರ್ ವಾಮದೇವಪ್ಪ. ಕೆಲ ಉಪಾನ್ಯಾಸಕರ ಸ್ವಾರ್ಥ ಪ್ರತಿಷ್ಠೆಗಳಿಂದ ಕಾಲೇಜಿನಲ್ಲಿ ಪ್ರಾಂಶುಪಾಲರ ಸುಗಮ‌ ಆಡಳಿತ ವ್ಯವಸ್ಥೆ ಅವ್ಯವಸ್ಥೆಯಾಗಿ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ಕುಂಠಿತವಾದಂತಾಗಿದೆ .

ಶುಕ್ರದೆಸೆ ಕನ್ನಡ ನ್ಯೂಸ್ ವೆಬ್ ಮೀಡಿಯಾದಲ್ಲಿ ಜಗಳೂರು ಐಟಿಐ ಕಾಲೇಜಿನಲ್ಲಿ ಸಿಸಿ ಕ್ಯಾಮರ ಆಳವಡಿಸುವ ಹೆಸರಿನಲ್ಲಿ ಹಣ ಸಂಬಂಧಿಸಿದ ದಾವಣಗೆರೆ ಶ್ರೀ ಕೃಷ್ಣ ಟೆಕ್ನಾಲಜಿ ಅಂಗಡಿಗೆ ಹಣ ಪಾವತಿಯಾಗಿದೆ. ಆದರೆ ಖರಿದಿಸಿದ ಸಿಸಿ ಕ್ಯಾಮರದ ಮೇಟರಿಯಲ್ ನ್ನ ಯಾವುದೆ ರೀತಿ ಕಾಲೇಜಿನಲ್ಲಿ ಆಳವಡಿಕೆಯಾಗದೆ ಲೋಪವಾಗಿದೆ ದುರ್ಬಳಕೆಯಾಗಿದೆ ಎಂದು ಪತ್ರಿಕೆ ವರದಿ ಮಾಡಿರುವ ಪ್ರತಿಫಲವಾಗಿ ಅಲ್ಲಿನ ಸಂಬಂಧಿಸಿದ ಪ್ರಾಂಶುಪಾಲರಾದ ವೀರೆಂದ್ರಮೂರ್ತಿ ಎಚ್ಚೆತ್ತುಕೊಂಡು ನಮ್ಮ ಪತ್ರಿಕೆಗೆ ಪ್ರತಿಕ್ರಿಯೆಸಿ ನಮ್ಮ ಕಾಲೇಜಿನ ಸ್ಟೋರ್ ಕಿಪರ್ ಬಂದ ಮಾಲ್ ನ್ನು ಇನ್ ವರ್ಡ್ ಮಾಡಿಕೊಳ್ಳದೆ ಸ್ವಾರ್ಥಪ್ರತಿಷ್ಠೆಯಿಂದ ಪರಿಶೀಲನೆ ನಡೆಸಿ ಆಳವಡಿಸದೆ ಇರುವುದರಿಂದ ಸಿಸಿ ಕ್ಯಾಮರ ಎಲ್ಲೊ ಕಾಣುತ್ತಿಲ್ಲ ಒಂದು ಕಡೆ ಶೇಖರಿಸಲಾಗಿದೆ ಮುಂದಿನ ದಿನಗಳಲ್ಲಿ ಕ್ಯಾಮರ್ ಆಳವಡಿಸಿ ಸರಿಪಡಿಸಿಕೊಂಡು ಹೋಗಲಾಗುವುದು ಎಂದು ಪ್ರತಿಕ್ರೆಯೆ ನೀಡಿ ಖರಿದಿಸಿದ ವೊಚರ್ ಬಿಲ್ ಮಾದ್ಯಮದವರಿಗೆ ಪ್ರಸ್ತುತಪಡಿಸಿದರು ಆದರೆ ಯಾಕೆ ಆಳವಡಿ ಮಾಡಿರುವುದಿಲ್ಲ ಎಂಬುದೆ ಯಕ್ಷ ಪ್ರಶ್ನೆಯಾಗಿದೆ?

ಮಾದ್ಯಮ ಮತ್ತು ಕೆಲ ವಿದ್ಯಾರ್ಥಿ ಸಂಘಟಕರು ನೇರವಾಗಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪ್ರಾಂಶುಪಾಲರಾದ ವೀರೆಂದ್ರಮೂರ್ತಿ ಪ್ರಥಮ ದರ್ಜೆ ಸಹಾಯಕರಾದ ಸೌಮ್ಯ ರವರ ಪಾತ್ರ ಈ ಸಿಸಿ ಕ್ಯಾಮರ ಆಳವಡಿಸುವ ವಿಚಾರದಲ್ಲಿ ಯಾವುದೆ ಲೋಪವಿಲ್ಲ ಪ್ರಾಂಶುಪಾಲರ ಅನುಮತಿ ಪಡೆದು ಅವರ ಸಹಿಯೊಂದಿಗೆ ಶ್ರೀಕೃಷ್ಣ ಟೆಕ್ನಾಲಜಿಗೆ 99 ಸಾವಿರ 900 ರೂಗಳ ಪಾವತಿಸಿ ಮೆಟರಿಯಲ್ ಈಗಾಗಲೇ ಕಾಲೇಜಿಗೆ ಬಂದು ತಲುಪಿದ್ದು ಇಲ್ಲಿನ ಸ್ಟೋರ್ ಕಿಪರ್ ವಾಮದೇವಪ್ಪರವರು ಇನ್ ವರ್ಡ್ ಮಾಡಿಕೊಂಡು ಕ್ಯಾಮರ್ ಆಳವಡಿಸಲು ವಿಫಲವಾದ್ದರಿಂದ ಗೊಂದಲಮಯ ಸೃಷ್ಟಿಯಾಗಿದೆ ಎಂಬುದು ಸ್ವಷ್ಟತೆ ಕಂಡುಬಂದಿದೆ.
ಈ ಸಂಬಂಧವಾಗಿ ಮೇಲಾಧಿಕಾರಿಗಳು ಇಲ್ಲಿನ ಅವ್ಯವಸ್ಥೆಯನ್ನ ಸರಿಪಡಿಸಲು ಮುಂದಾಗಬೇಕಾಗಿದೆ…

ಕಳೆದ ದಿನಗಳ ಹಿಂದೆ ಕಾಲೇಜಿಗೆ ಕಣ್ಣಾಗಾವಲು ಸಿ‌ಸಿ ಕ್ಯಾಮರ್ ಆಳವಡಿಸಲು ಸುಮಾರು 99 ಸಾವಿರ ಹಣ ಬಂದರೂ ಸಹ ಸಿಸಿ‌ ಕ್ಯಾಮರ ಆಳವಡಿಕೆಯಾಗಿರುವುದಿಲ್ಲ
ದಿನಾಂಕ _25_3 _2026 ಸಾಲಿನಲ್ಲಿ ಶ್ರೀ‌ಕೃಷ್ಣ ಟೆಕ್ನಾಲಜಿ ದಾವಣಗೆರೆ ಇವರಿಗೆ ಸಿ ಸಿ ಕ್ಯಾಮರ ಖರಿದಿಸಲು ಹಣ ಸಂದಾಯ ಮಾಡಲಾಗಿದೆ .

ಆದರೆ ಮೆಟರೀಯಲ್ ಖರಿದಿಸುವ ಮುನ್ನವೆ ಶ್ರೀಕೃಷ್ಣ ಟೆಕ್ನಾಲಜಿ ಗೆ ಹಣ ಪಾವತಿಸಿರುವುದು ಲೋಪವಾಗಿದೆ ಎಂದು ಸ್ಟೋರ್ ಕಿಪರ್ ವಾಮದೇವಪ್ಪರವರ ವಾದದಿಂದ ಈಗಾಗಲೇ ಮೆಟರಿಯಲ್ ಕಾಲೇಜಿಗೆ ಬಂದಿದ್ದರು ಸಹ ಇನ್ ವರ್ಡ್ ಮಾಡಿಕೊಳ್ಳದೆ ಮೆಲ್ನೋಟಕ್ಕೆ ಕಂಡು ಬಂದಿದೆ .

ಕಾಲೇಜಿನ ಪ್ರಾಂಶುಪಾಲ ವೀರೆಂದ್ರಮೂರ್ತಿ ಸಮರ್ಥವಾಗಿ ಆಡಳಿತ ಮಾಡಬೇಕಾದವರೆ ಎಲ್ಲೊ ಒಂದು ಕಡೆ ಇಲ್ಲಿನ ಕೆಲವರು ಸ್ವಾರ್ಥಲಾಲಸೆಯಿಂದ ಒಬ್ಬರಿಗೊಬ್ಬರು ಹೊಂದಾಣಿಕೆ ಕೊರತೆಯಿಂದ ಇಲ್ಲಿನ ಸಿಬ್ಬಂಧಿಗಳು ಅಂತರಿಕ ಕಲಹ ಗುಂಪುಗಾರಿಕೆ ಕೋಳಿ ಜಗಳವಾಡುತಾ ವಿದ್ಯಾರ್ಥಿಗಳ ಎದುರೆ ಜಟಾಪಟಿ ಜಗಳ ಆಗ ಆಗ ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಕಾಲೇಜಿನಲ್ಲಿ ಸರಿಯಾದ ರೀತಿ ಆಡಳಿತ ಕರ್ತವ್ಯಗಳನ್ನ ಪಾಲಿಸಬೇಕಾದ ಅಧಿಕಾರಿಗಳೆ ಬೇಜವಾಬ್ದರಿ ಕಾರಣವಾಗಿದೆ ಎಂದು ಸಾರ್ವಜನಿಕರ ಕೆಗ್ಗಣ್ಣಿಗೆ ಗುರಿಯಾಗಿದ್ದಾರೆ ಎಂದು ಸಾರ್ವಜನಿಕರು ಸಂಬಂಧಿಸಿದ ಮೇಲಾಧಿಕಾರಿಗಳು ಇತ್ತ ಕಡೆ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆ ಬಿನ್ನಾಭಿಪ್ರಾಯಗಳಿಂದ ಸರ್ಕಾರದ ಅನುದಾನ ಬಳಕೆಯಾಗದೆ ನಿರುಪಯುಕ್ತವಾಗುತ್ತಿದೆ ‌ಶೀಘ್ರವೆ ಸಂಬಂಧಿಸಿದ ಜಂಟಿ ನಿರ್ದೇಶಕರು ಕಾಲೇಜಿನ ಲೋಪದೋಷಗಳನ್ನ ಸರಿಪಡಿಸಿ ಉತ್ತಮ ಆಡಳಿತ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ಪಾಠ ಪ್ರವಚನ ಚಟುವಟಿಕೆಗಳನ್ನ ನಡೆಸಿಕೊಂಡು ಹೋಗಲು ಕ್ರಮಕೈಗೊಳ್ಳಬೇಕು.ತಪ್ಪಿಸ್ಥರ ವಿರುದ್ದ ನೋಟಿಸ್ ಜಾರಿ ಮಾಡಿ ಕಟ್ಟು ನಿಟ್ಟಿನ ಕ್ರಮಕೈಗೋಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಿಸಿ ಕ್ಯಾಮರ್ ಹಣ ಯಾವುದೇ ರೀತಿ ದುರ್ಬಳಕೆಯಾಗಿರುವುದಿಲ್ಲ‌ ನಾವು ಖರಿದಿಸಿದ ಸಿಸಿ‌ ಕ್ಯಾಮರ್ ಮೇಟರಿಯಲ್ ಈಗಾಗಲೇ‌ ಕಾಲೇಜಿಗೆ ಬಂದಿದ್ದು ನಮ್ಮ ಸಿಬ್ಬಂಧಿಗಳಾದ ಸ್ಟೋರ್ ಕಿಪರ್ ಇನ್ ವರ್ಡ್ ಮಾಡಿಕೊಳ್ಳದೆ ಲೋಪವಾಗಿದೆ ಸರಿಪಡಿಸಿಕೊಂಡು ಶೀಘ್ರವೆ ಸಿಸಿ ಕ್ಯಾಮರ್ ಆಳವಡಿಸಲಾಗುವುದು ಎಂದು ತಿಳಿಸಿದ್ದಾರೆ

ಪ್ರಾಂಶುಪಾಲ ವೀರೆಂದ್ರಮೂರ್ತಿ

Leave a Reply

Your email address will not be published. Required fields are marked *

You missed

error: Content is protected !!