ಲೇಖನ
ಜ್ಞಾನವೇ ಶಕ್ತಿ, ಶಿಕ್ಷಣವೇ ಪ್ರಗತಿಯ ಮೂಲ”.
ಆದರೆ ಇಂದಿನ ಆಧುನಿಕ ಯುಗದಲ್ಲೂ ನಮ್ಮ ಸಮಾಜದಲ್ಲಿ ಶಿಕ್ಷಣ ಕ್ಷೇತ್ರವು ಕೆಲವು ಕಡೆ ಹಿಂದುಳಿಯಲು ಮೂಲ ಕಾರಣ ಏನಂದರೆ ಪ್ರಸ್ತುತ ಸಮಾಜದಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆಗಳು ಪ್ರಮುಖ ಕಾರಣಗಳಾಗಿವೆ. ವೈಜ್ಞಾನಿಕ ದೃಷ್ಟಿಕೋನದ ಕೊರತೆ ಮತ್ತು ಹಳೆಯ ಅನಿಷ್ಟ ಪದ್ಧತಿಗಳಿಂದ ಕೆಲವರು ಸಮಾಜದಲ್ಲಿ ದೇವರ ಹೆಸರಿನಲ್ಲಿ ಇನ್ನಿತರೆ ಸಂಪ್ರದಾಯ ಕಂದಚಾರಗಳ ಹೆಸರಿನಲ್ಲಿ ಮೌಡ್ಯತೆ ಬಿತ್ತುವುದರಿಂದ ನವನಾಗರೀಕತೆ ಕಾಲಘಟ್ಟದಲ್ಲೂ ಸಹ ಸಮಾಜದ ಬೌದ್ಧಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದೆ
.ಕೆಲ ಮೂಡ ನಂಬಿಕೆಯನ್ನ ಮೌಢ್ಯತೆ ಕೆಲ ಡೋಂಗಿ ಬಾಬಾಗಳು ಬಿತ್ತುವುದರಿಂದ ಶಿಕ್ಷಣ ಹಿಂದುಳಿಯಲು ಪ್ರಮುಖ ಕಾರಣಗಳು ಆದ್ದರಿಂದ ಸಂಬಂಧಿಸಿದ ಪೊಲೀಸ್ ಇಲಾಖೆ ಈಗಾಗಲೇ ಸರ್ಕಾರ ಜಾರಿ ಮಾಡಿರುವ ಮೌಡ್ಯ ಪ್ರತಿಬಂದಕ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ವಿಫಲವಾಗಿರುವುದು ವಿಪರ್ಯಾಸ ಸಂಗತಿ
ಸಮಾಜದಲ್ಲಿ ಇಂತ ಅನಿಷ್ಟ ಪದ್ದತಿ ತೋಲಗಲು ಸಂಬಂಧಿಸಿದ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿ ಪ್ರಕರಣ ದಾಖಲಿಸಬೇಕಾಗಿದೆ. ಎಂದು ಸಾರ್ವಜನಿಕರ ಅಗ್ರಹವಾಗಿದೆ.
ನಾಗರೀಕ ಸ್ವಾಸ್ಥ್ಯ ಸಮಾಜ ನಿರ್ಮಾಣದತ್ತ ನಮ್ಮ ಮೀಡಿಯಾ ಲೇಖನಿ ಬಿತ್ತರಿಸುವ ಮೂಲಕ ಪ್ರಯತ್ನಿಸಲಿದೆ ಇಂತ ಕೆಲ ಸರ್ಕಾರದ ಮಟ್ಟದಲ್ಲಿ ಜಾರಿಯಾದ ಕೆಲ ಕಾನೂನುಗಳು ಅಸ್ಥಿತ್ವಕ್ಕೆ ಅವಶ್ಯವಾಗಿ ಅಭಿವೃದ್ದಿಯಾಗಬೇಕಾಗಿದೆ…
