ಜಗಳೂರು:-ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಣಿಪಾಲ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ಆರೋಗ್ಯ ಕಾರ್ಡ್ ನೀಡುತ್ತಿದ್ದು ಈಗಾಗಲೇ ನೋಂದಣಿ ಪ್ರಾರಂಭವಾಗಿದ್ದು ಇದೇ ತಿಂಗಳ ಆಗಸ್ಟ್ 31 ನೋಂದಣಿಗೆ ಕೊನೆಯ ದಿನಾಂಕವಾಗಿರುತ್ತದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಚಿನ್ ಕಾರಂತ್ ತಿಳಿಸಿದರು
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿ 2926 -27 ನೇ ಸಾಲಿನ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು ಮಣಿಪಾಲ ಆರೋಗ್ಯ ಕಾರ್ಡ್ ಆಗಸ್ಟ್ -06 2026 ಕ್ಕೆ ನೋಂದಣಿ ಆರಂಭವಾಗಿದೆ ಮಣಿಪಾಲ ಆರೋಗ್ಯಕಾರ್ಡ್ ನೊಂದಣಿ ಈ ಬಾರಿ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿದ್ದು, ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಕುಟುಂಬಗಳು ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಯ ಪ್ರಯೋಜನ ಪಡೆಯುವಂತೆ ಆಹ್ವಾನಿಸಿದೆ. ಈ ನೋಂದಣಿಗೆ 2026 ರ ಆಗಸ್ಟ್ 31, ಕೊನೆಯ ದಿನಾಂಕವಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು
ಈ ಪ್ರದೇಶದ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ರಕ್ಷಣಾ ಪ್ರಯೋಜನ ಕಾರ್ಯಕ್ರಮಗಳಲ್ಲಿ ಒಂದಾದ ಮಣಿಪಾಲ ಆರೋಗ್ಯ ಕಾರ್ಡ್. ಕಳೆದ 26 ವರ್ಷಗಳಿಂದ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಹೆಚ್ಚು ಕೈಗೆಟುಕುವ ಮತ್ತು ಪ್ರವೇಶಿಸುವಂತೆ ಮಾಡುವ ಮೂಲಕ ಸಮುದಾಯಗಳ ಸೇವೆ ಸಲ್ಲಿಸುತ್ತಿದೆ, ಈ ಸೇವೆಯು ಮಣಿಪಾಲದ ಸಂಸ್ಥಾಪಕ ಡಾ.ಟಿ.ಎಂ.ಎ. ಪೈ ಅವರ ದೃಷ್ಟಿಕೋನ ಧ್ಯೆಯೆಯು ಸಮಾಜದ ಪ್ರತಿಯೊಂದು ವರ್ಗವನ್ನು, ವಿಶೇಷವಾಗಿ ಗ್ರಾಮೀಣ ಸಮುದಾಯಗಳನ್ನು ಗುಣಮಟ್ಟದ ಆರೋಗ್ಯ ಸೇವೆ ತಲುವುವಂತೆ ಮಾಡುವುದು.ಮಣಿಪಾಲದ ಈಗಿನ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ ಮಾರ್ಗದರ್ಶನದಲ್ಲಿ 2000 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು, 26 ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ತನ್ನ ಆರಂಭಿಕ ವರ್ಷದಲ್ಲಿ ಕೇವಲ 3,200 ಕುಟುಂಬಗಳನ್ನು ದಾಖಲಿಸಿಕೊಂಡಿದ್ದ ಈ ಯೋಜನೆ ಗಣನೀಯವಾಗಿ ವಿಸ್ತರಿಸಿ. ಕಳೆದ ಹಣಕಾಸು ವರ್ಷದಲ್ಲಿ, ಸುಮಾರು 2 ಲಕ್ಷ ಕುಟುಂಬಗಳು ದಾಖಲಾಗಿವೆ ಮತ್ತು ಪ್ರಸ್ತುತ ಈ ಕಾರ್ಯಕ್ರಮದಡಿ ಸುಮಾರು 6.5 ಲಕ್ಷ ಸದಸ್ಯರು ಪ್ರಯೋಜನ ಪಡೆಯುತ್ತಿದ್ದಾರೆ, ಈ ಮೂಲಕ ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದರು
ವ್ಯವಸ್ಥಾಪಕ ಕೃಷ್ಣಪ್ರಸಾದ್ ಮಾತನಾಡಿ ಮಣಿಪಾಲ ಆರೋಗ್ಯ ಕಾರ್ಡ್ ಒಂದು ವರ್ಷದ ಸದಸ್ಯತ್ವ ಕಾರ್ಯಕ್ರಮವಾಗಿದ್ದು, ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. “ಸಂಪೂರ್ಣ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ ” ಅಡಿಯಲ್ಲಿ ಕಾರ್ಡ್ ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ವ್ಯಾಪಕ ಶ್ರೇಣಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತಿದೆ. ಕಾರ್ಡ್ ಪ್ರಯೋಜನಗಳು ನೋಂದಣಿಯ ನಂತರ ತಿಂಗಳ 15ನೇ ತಾರೀಖಿನಿಂದ ಜಾರಿಗೆ ಬರುತ್ತವೆ ಮತ್ತು 15 ಆಗಸ್ಟ್ 2027 ರವರೆಗೆ ಮಾನ್ಯವಾಗಿರುತ್ತವೆ ಎಂದರು
(( ಬಾಕ್ಸ್ ))
ಕಾರ್ಡಿನ ವಿಧಗಳು :
ವೈಯಕ್ತಿಕ ಸದಸ್ಯತ್ವ: ವರ್ಷಕ್ಕೆ ₹350
ಕೌಟಂಬಿಕ ಸದಸ್ಯತ್ವ: ವರ್ಷಕ್ಕೆ 1700 (ಸ್ವಯಂ, ಸಂಗಾತಿ ಮತ್ತು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಅವಿವಾಹಿತ ಮಕ್ಕಳು)ಕೌಟಂಬಿಕ ಪ್ಲಸ್ ಸದಸ್ಯತ್ವ: ವರ್ಷಕ್ಕೆ ₹900 (ಸ್ವಯಂ, ಸಂಗಾತಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಅವಿವಾಹಿತ ಮಕ್ಕಳು, ತಂದೆ ತಾಯಿ ಮತ್ತು ಸಂಗಾತಿಯ ತಂದೆ, ತಾಯಿ ಸೇರಿದಂತೆ ನಾಲ್ಕು ಪೋಷಕರು)
“ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಿಯಾಯಿತಿ ಸೌಲಭ್ಯಗಳು”
ತಜ್ಞ ಮತ್ತು ಸೂಪರ್ -ಸ್ಪೆಷಲಿಷ್ಟ್ ಸಮಾಲೋಚನೆ ಶುಲ್ಕಗಳಲ್ಲಿ ಶೇಕಡಾ 50 ರಿಯಾಯಿತಿ (ಓಪಿಡಿ ದಿನಗಳಲ್ಲಿ)
ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇಕಡಾ 25 ರಿಯಾಯಿತಿ ರೇಡಿಯಾಲಜಿ ಸೇವೆಗಳು, ಓಪಿಡಿ ಕಾರ್ಯವಿಧಾನಗಳು ಮತ್ತು ಮಧುಮೇಹ ಪಾದದ ಆರೈಕೆಯ ಮೇಲೆ ಶೇಕಡಾ 20 ರಿಯಾಯಿತಿ
ಜನರಲ್ ವಾರ್ಡ್ ಒಳರೋಗಿ ಸೇವೆಗಳಲ್ಲಿ ಹೊರಗಡೆಯಿಂದ ಬಂದ ವಸ್ತುಗಳನ್ನು ಹೊರತುಪಡಿಸಿ ಶೇಕಡಾ 25ರ ವರಗೆ ರಿಯಾಯಿತಿ ಡಯಾಲಿಸಿಸ್‌ನಲ್ಲಿ ₹100 ರಿಯಾಯಿತಿ ನೀಡುತ್ತದೆ ಎಂದರು
ಮಣಿಪಾಲ ಆರೋಗ್ಯ ಕಾರ್ಡ್ ಪ್ರಯೋಜನಗಳನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ; ಉಡುಪಿಯ ಡಾ. ಟಿಎಂಎ ಪೈ, ಆಸ್ಪತ್ರೆ: ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ: ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು; ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ: ಗೋವಾದ ಮಣಿಪಾಲ ಆಸ್ಪತ್ರೆ: ಮತ್ತು ಮಣಿಪಾಲ ಮತ್ತು ಮಂಗಳೂರಿನಲ್ಲಿರುವ ಮಣಿಪಾಲ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಪಡೆಯಬಹುದು.
ಸದಸ್ಯರು 88675 79797 ಗೆ ಮಿಸ್ ಕಾಲ್ ನೀಡುವ ಮೂಲಕ ತಮ್ಮ ಕಾರ್ಡ್ ನೋಂದಣಿ ಸ್ಥಿತಿ ಮತ್ತು ಸಿಂಧುತ್ವ ವಿವರವನ್ನು ಪರಿಶೀಲಿಸಬಹುದು. ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು, ಸದಸ್ಯತ್ವ ಪ್ರಯೋಜನಗಳು ಮತ್ತು ನೋಂದಣಿ ಕುರಿತು ವಿವರಗಳಿಗಾಗಿ, www.manipalhealthcard.com ಗೆ ಭೇಟಿ ನೀಡಿ ಅಥವಾ 99808 54700 / 0820-2923748 ಅನ್ನು ಸಂಪರ್ಕಿಸಿ.
ಮಣಿಪಾಲ ಆರೋಗ್ಯ, ಕಾರ್ಡ್ 2026 ನೋಂದಣಿಯು ನಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ಮಾಹಿತಿ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.
ಜಗಳೂರು ಭಾಗದಲ್ಲಿ ನೋಂದಣಿ ಮಾಡಿಸುವವರು ಕೆಂಚನಗೌಡ ಕೆ ಬಿ – 9731709177, ಮನೋಜ್ 8904219373,-9353720350 ಇವರನ್ನು ಸಂಪರ್ಕಿಸಬಹುದು
ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪ್ರತಿನಿಧಿಯಾದ ಶ್ರೀ ಅನಿಲ್ , ಮಣಿಪಾಲ ಆರೋಗ್ಯ ಕಾರ್ಡ್ ಮುಖ್ಯ ಸಂಯೋಜಕರಾದ ಶ್ರೀ ಕೆಂಚನಗೌಡ ಕೆ. ಬಿ. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
