filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48;

By shukradeshe news
editor m.rajappa vyasgondanahalli
Kannada | online news portal |Kannada news online date august 30_8_2026

ಜಗಳೂರು ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜನ ಮತ್ತು ಜಿಲ್ಲಾ ಸಂಸದರ ಕೊಡುಗೆ ಶೂನ್ಯ

ರೈತರು ಅತಂಕಪಡುವ ಅಗತ್ಯವಿಲ್ಲ ಎರಡನೇ‌‌ ಪಟ್ಟಿಯಲ್ಲಿ ಬರಘೋಷಣೆ ಶತಾಸಿದ್ದ ಶಾಸಕ ಬಿ. ದೇವೇಂದ್ರಪ್ಪ ಕ್ಷೇತ್ರದ ಜನತೆಗೆ ಭರವಸೆ ನೀಡಿದ್ದಾರೆ..

ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ನಾಮಕವ್ಯವಸ್ಥೆ ಸೇರ್ಪಡೆಯಾಗಿದೆ ನಮಗೆ ನಮ್ಮ ಪಕ್ಷದ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜನ. ಮತ್ತು ಜಿಲ್ಲಾ ಸಂಸದರಾದ ಪ್ರಭಾಮಲ್ಲಿಕಾರ್ಜನ ಕೊಡುಗೆ ಶೂನ್ಯವಾಗಿದ್ದು ಕ್ಷೇತ್ರವನ್ನ ಬರ ಪಟ್ಟಿಯಲ್ಲಿ ಸೇರಿಸಲು ನಿರ್ಲಕ್ಷ್ಯೆ ತೋರಿದ್ದಾರೆ ಎಂದು ಕಾಂಗ್ರೆಸ್ ಪಕ್ಷದವರೆ ಆದ ಜಗಳೂರು ಕ್ಷೇತ್ರದ ಶಾಸಕರಾದ ಬಿ.ದೇವೇಂದ್ರಪ್ಪ ಗುಡಗಿದ್ದಾರೆ .

ಜಗಳೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾ ಸಭನದಲ್ಲಿ ಕ್ಷೇತ್ರದ ಶಾಸಕರು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಜಿಲ್ಲಾ ಸಂಸದರು ಈ ಹಿಂದೆ ತಾಲ್ಲೂಕಿನ ಸಭೆ ಸಮಾರಂಭಗಳಲ್ಲಿ ಕ್ಷೇತ್ರವನ್ನ ವಿಶೇಷವಾಗಿ ಪರಿಗಣಿಸಿ ಅಭಿವೃದ್ದಿಗೆ ಹೆಚ್ಚು ಅನುದಾನ ನೀಡಲಾಗುವುದು ಎಂದು ಹೇಳಿದ ಹೇಳಿಕೆ ಇದೀಗ ಹುಸಿಯಾಗಿದೆ. ಈ ಹಿಂದೆ ಸಂಗೇನಹಳ್ಳಿ ಕೆರೆ ತುಂಬಿ ಕೋಡಿಬಿದ್ದು ಹರಿಯುವ ನೀರಿಗೆ ಸಾಮಾನ್ಯ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದನ್ನ ತಮ್ಮ ಗಮನಕ್ಕಿದೆ.

ಕೆರೆಗೆ ಭಾಗಿನ ಬಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ‌ದ ಸಂದರ್ಭದಲ್ಲಿ ಹಳ್ಳಕ್ಕೆ ಬೃಹತ್ ಚೆಕ್ ಡ್ಯಾಂ ನಿರ್ಮಿಸಿ ಯಾವೊಬ್ಬ ಬಡವರು ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಬಾರದು ಎಂದು ಹೇಳಿದ ಹೇಳಿಕೆಗೆ ಇದೀಗ ಎಳ್ಳು ನೀರು ಬಿಟ್ಟಿದ್ದಿರೆ ಎಂದು ಬೇಸರ ವ್ಯಕ್ತಪಡಿಸಿದರು

ಶಾಮನೂರು ಕುಟುಂಬದವರು ಮೂಲತ ರಾಜಕೀಯದಲ್ಲಿ ಅನುಭವಿ ಹೊಂದಿರುವ ಘಟಾನುಘಟಿ ನಾಯಕರೆಂದು ಹಿಡಿ ರಾಜ್ಯಕ್ಕೆ ತಿಳಿದಿದೆ ಆದರೆ ಜಗಳೂರು ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯವಾಗಿದೆ ಎಂದು ಆರೋಪಿಸಿದರು. .

ಮಾನ್ಯ ಮುಖ್ಯಮಂತ್ರಿ .ಡಿ ಕೆ ಶಿವಕುಮಾರ್ ರವರು ಮಲ್ಲಿಕಾರ್ಜನರವರಿಗೆ ಎರಡನೇ ಬಾರಿಯಾಗಿ ಸಚಿವಸ್ಥಾನ ನೀಡಿ ಕ್ಷೇತ್ರಕ್ಕೆ ಉತ್ತಮ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದ್ದಾರೆ ಆದರೆ ಉಸ್ತುವಾರಿ ಸಚಿವರು ಜಗಳೂರು ಕ್ಷೇತ್ರವನ್ನ ಬರಪಟ್ಟಿಗೆ ಸೇರಿಸಲು ವಿಫಲವಾಗಿದ್ದಾರೆ .
ಮೊದಲ ಬರಪಟ್ಟಿಯಲ್ಲಿ ಜಗಳೂರು ಕ್ಷೇತ್ರವನ್ನ ಕೈಬಿಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ನಾನು ಊಟ ನೀರು ಬಿಟ್ಟು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ . ಮುಖ್ಯಮಂತ್ರಿ ಡಿ.ಕೆ ಶಿವಕುಮಾರವರ ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಎರಡನೆ ಬರಪಟ್ಟಿಯಲ್ಲಿ ಜಗಳೂರು ಸೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಿದ್ದೆನೆ ರೈತರು ಅತಂಕಪಡುವ ಅಗತ್ಯವಿಲ್ಲ ಎರಡನೆ ಪಟ್ಟಿಯಲ್ಲಿ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಲಿದೆ ಎಂದು ಭರವಸೆ ನೀಡಿದರು.

ಬರಪೀಡಿತ ಪ್ರದೇಶವೆಂದು ಘೊಷಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷಿದ್ದಾರೆ ಈ‌ ಹಿನ್ನಲೆಯಲ್ಲಿ ರೈತರು ಮತ್ತು ವಿರೋಧ ಪಕ್ಷಗಳು ಮಾಡಿದ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಆದರೆ ನಾನು ಆಡಳಿತ ಪಕ್ಷದ ಜನಪ್ರತಿನಿಧಿಯಾಗಿ ಹೋರಾಟ ಮಾಡಲು ಸಾಧ್ಯವಿಲ್ಲ. ಕ್ಷೇತ್ರದ ನಾಡಿಮಿಡಿತ‌ ನನಗೆ ಗೊತ್ತಿದೆ.

ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ‌ ಶಾಸಕರು ತರಾಟೆ

ಬಡವರ ಹಿತ ಕಾಯಬೇಕಾಗಿದ್ದು ಅಧಿಕಾರಿಗಳ ಕರ್ತವ್ಯ. ಆ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಎಂದು ಎಚ್ಚರಿಸಿದರು. ಸಭೆಗೆ ಜಿಲ್ಲಾಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಪದೇ ಪದೇ ನಮ್ಮ ತಾಲೂಕಿನ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಯಾಕೆ ಈ ಸಮಸ್ಯೆ ಆಯ್ತು ಎಂದು ಜಿಲ್ಲಾಧಿಕಾರಿಗಳು ಬಂದು ಉತ್ತರ ಕೊಡುವವರೆಗೂ ನನ್ನ ತಾಲೂಕನ್ನು ಪ್ರತಿನಿಧಿಸಿ ಕೆಡಿಪಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.
ಮಾಜಿ ಜಿಪಂ‌ ಸದಸ್ಯರಾದ ಕೆ.ಪಿ ಪಾಲಯ್ಯ. ಮುಖಂಡ ಕಲ್ಲೇಶ್ ರಾಜ್ ಪಟೇಲ್. ಕಾಂಗ್ರೆಸ್ ಎಸ್ ಸಿ ಘಟಕದ ಅದ್ಯಕ್ಷ .ಬಿ ಮಹೇಶ್ವರಪ್ಪ.
ಸುದ್ದಿಗೋಷ್ಠಿಯಲ್ಲಿ .ದಲಿತ ಮುಖಂಡ ಜಿ.ಎಚ್ ಶಂಭುಲಿಂಗಪ್ಪ ಸೇರಿದಂತೆ ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!