By shukradeshe news
editor m.rajappa vyasgondanahalli
Kannada | online news portal |Kannada news online date august 15_9_2026
ಜಿಲ್ಲಾ ಉಸ್ತುವಾರಿ ಸಚಿವರು ಹಾಲು ಕುಡಿದ ತುಟಿ ಒಣಗಿಲ್ಲ ನೆತ್ತಿ ಮಾಸಿಲ್ಲ ಎಂದು ಹೇಳಿರುವ ಹೇಳಿಕೆ ಹಾಸ್ಯಸ್ಪದ ಶಾಸಕ ಬಿ ದೇವೇಂದ್ರಪ್ಪ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಎಂ ಗೆ ತಿರುಗೇಟು ನೀಡಿದ್ದಾರೆ.
ನನಗೆ ಅಧಿಕಾರ ಮುಖ್ಯವಲ್ಲ ಕ್ಷೇತ್ರದ ಜನರ ಹಿತ ಮುಖ್ಯ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ನಾನೊಬ್ಬ ದಲಿತ ಶಾಸಕನೆಂದು ಈ ರೀತಿ ಹೇಳಿಕೆ ನೀಡಿದರೆ ಸಹಿಸುವುದಿಲ್ಲ ನಾನು ವಯಸ್ಸಿನಲ್ಲಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜನ ಹಾಗೂ ಸಂಸದರಾದ ಪ್ರಭಾಮಲ್ಲಿಕಾರ್ಜನ ಮತ್ತು ಶಾಸಕರಾದ ಸಮರ್ಥ ಶಾಮನೂರು ಅವರಿಗಿಂತ ನಾನು ಹಿರಿಯವನಾಗಿದ್ದೆನೆ. ಕೇವಲವಾಗಿ ಮಾತನಾಡದೇ ಜಗಳೂರು ಪ್ರದೇಶವನ್ನ ಬರಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಬಳಿ ಸರ್ವಪಕ್ಷ ನೀಯೋಗಕ್ಕೆ ತೆರಳಿ ಜಗಳೂರು ಅಭಿವೃದ್ದಿಗೆ ಸಹಕಾರ ನೀಡುವಂತೆ ಶಾಸಕರಾದ ಬಿ.ದೇವೇಂದ್ರಪ್ಪ ಅವರು ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ .
ಜಗಳೂರು ತಾಲ್ಲೂಕು ನಂಜುಂಡಪ್ಪ ವರದಿ ಆಧಾರಿತವಾಗಿ ಅತ್ಯಂತ ಹಿಂದೂಳಿದ ಪ್ರದೇಶವನ್ನು ಬರಪಟ್ಟಿಯಲ್ಲಿ ಜಗಳೂರು ಕೈತಪ್ಪಿರುವುದು ಈಗಾಗಲೇ ಕ್ಷೇತ್ರದ ಜನತೆಗೆ ತಿಳಿದಿದೆ .ರೈತ ಮುಖಂಡರು ಹೋರಾಟಗಾರರು ಪ್ರತಿಪಕ್ಷದವರು ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡುವಂತೆ ನನ್ನ ಮೇಲೆ ಮತ್ತು ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸುತ್ತಿದ್ದಾರೆ . ಜನರ ನಾಡಿಮಿಡಿತ ಬಲ್ಲವನಾದ ನನಗೆ ಕ್ಷೇತ್ರದ ಜನರ ಹಿತ ಮುಖ್ಯವಾಗಿದ್ದರಿಂದ ಕಳೆದ ಪತ್ರಕಾಗೋಷ್ಠಿಯಲ್ಲಿ ತನ್ನ ಇಂಗಿತವನ್ನ ವ್ಯಕ್ತಪಡಿಸಿ ಕ್ಷೇತ್ರದ ಜನರ ದ್ವನಿಯನ್ನ ತಿಳಿಸಿದ್ದೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರು ನನ್ನ ಬಗ್ಗೆ ತೇಜೋವಧೆ ಹೇಳಿಕೆ ಸರಿಯಲ್ಲ ನಾನು ಒಬ್ಬ ದಲಿತ ಶಾಸಕನೆಂದು ಈ ರೀತಿ ಹೇಳಿಕೆ ನೀಡುತ್ತಿದ್ದಿರಿ ಎಂದು ಸಚಿವರಿಗೆ ಟಾಂಗ್ ಕೋಟ್ಟಿದ್ದಾರೆ. ಇದೀಗ ಕ್ಷೇತ್ರವನ್ನ ಎರಡನೇ ಬರಪಟ್ಟಿಗೆ ಸೇರ್ಪಡೆ ಮಾಡಲು ಸರ್ವಪಕ್ಷನಿಯೋಗ ತೆರಳಿ ಸರ್ಕಾರಕ್ಕೆ ಒತ್ತಡ ತರುವೆ… ಎಂದು ಶಾಸಕರಾದ ಬಿ ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅತಿ ಶೀಘ್ರದಲ್ಲಿಯೇ ವಿಧಾನ ಸಭೆಯ ಮಂತ್ರಿಮಂಡಲ ಸಭೆ ಆರಂಭವಾಗಲಿದೆ ಜಗಳೂರು ಸ್ಥಿತ್ಥಿಗತಿ ಬಗ್ಗೆ ರಾಜ್ಯ ಮುಖ್ಯಕಾರ್ಯಧರ್ಶಿ ಸೇರಿದಂತೆ ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಗಮನ ಸೆಳೆದು ಬರಪಡೀತ ಪ್ರದೇಶವೆಂದು ಘೋಷಿಸುವುದು ಶತಸಿದ್ದ.
ಅದಕ್ಕೆ ಮುನ್ನ ಪೂರ್ವಭಾವಿಯಾಗಿ ತಾಲ್ಲೂಕಿನ ರೈತರು ರೈತ ಹೋರಾಟಗಾರರು ಪ್ರತಿಪಕ್ಷದವರು ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಜಗಳೂರು ಕ್ಷೇತ್ರವನ್ನ ಬರಪಟ್ಟಿಗೆ ಸೇರಿಸಲು ಸರ್ವಪಕ್ಷನಿಯೋಗ ತೆರಳವು ಸಂಭವ ಇದೆ .
ಕಳೆದ 30 ವರ್ಷಗಳಿಂದ ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಕುಂಟಿತವಾಗಿತ್ತು .ನಾನು ಶಾಸಕನಾಗಿ ಆಯ್ಕೆಯಾದ ನಂತರ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೆನೆ ನನ್ನ ಪುತ್ರ ಕೀರ್ತಿಕುಮಾರ್ ಸರ್ಕಾರಿ ನೌಕರಿಗೆ ರಾಜಿನಾಮಿ ನೀಡಿ ತಾವು ಸಂಸದರ ಆಯ್ಕೆಯಾಗುವ ಸಂದರ್ಭದಲ್ಲಿ ಹೆಚ್ಚು ಮತ ಹಾಕಿಸುವ ಮೂಲಕ ಗೆಲುವಿಗೆ ಸಹಕಾರ ನೀಡಿದ್ದೆವೆ ಆದರೆ ಅದಕ್ಕೆ ಪ್ರತಿಫಲವಾಗಿ ಜಗಳೂರು ಪ್ರದೇಶಕ್ಕೆ ನಿಮ್ಮ ಕೊಡುಗೆ ಏನು ಯಾವುದೇ ಅನುದಾನ ನೀಡದೇ ನಮ್ಮ ಕ್ಷೇತ್ರವನ್ನು ಮಲತಾಯಿಧೋರಣೆ ಮಾಡಿರುವುದು ಈಗಾಗಲೇ ಕ್ಷೇತ್ರದ ಜನತೆಗೆ ತಿಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಬರಪೀಡಿತ ಪಟ್ಟಿಗೆ ಸೇರಿಸಲು ಹೋರಾಟ ಮಾಡಲಿ ಸ್ವಾಗತ ಆದರೆ ನನ್ನ ಮೇಲೆ ವಯಕ್ತಿಕವಾಗಿ ಘೋಷಣೆ ಕೂಗಿ ತೇಜೋವಧೆ ಮಾಡುವುದು ಎಷ್ಟು ಶಾಸಕರು ಅಮೇರಿಕಾಕ್ಕೆ ಹೋದರು ಜನ ಸತ್ತುಹೋದರು ಎಂದು ಹೇಳುವುದು ತರವಲ್ಲ ನಾನು ಬರಪೀಡಿತ ಪ್ರದೇಶ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನ ನಡೆಸಿದ್ದೆನೆ ಕೆಲ ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ನಮ್ಮ ಅಭಿವೃದ್ದಿ ಕೆಲಸಕ್ಕೆ ಎಲ್ಲಾರು ಸಹಕಾರ ನೀಡಿದರೆ ಕ್ಷೇತ್ರದ ಸರ್ವಾಂಗಿಣ ಅಭಿವೃದ್ದಿಯೇ ನನ್ನ ಗುರಿ ಎಂದಿದ್ದಾರೆ.
ಜೆ.ಡಿ ಎಸ್.ಕಲ್ಲೇರುದ್ರೇಶ್ ರವರು ಕ್ಷೇತ್ರದಲ್ಲಿ ಕೇವಲ ಪ್ರೆಸ್ ಮಿಟ್ ಮಾಡುವುದನ್ನ ಬಿಟ್ಟು ನಮ್ಮೊಂದಿಗೆ ಕೈಜೋಡಿಸಲಿ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ಸಮಿತಿ ಅದ್ಯಕ್ಷ ಷಂಷೀರ್ ಆಹಮದ್. ಮಾಜಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತಿಪ್ಪೇಸ್ವಾಮಿ ಗೌಡ. ಮಾಜಿ ಪಪಂ ಅದ್ಯಕ್ಷ ಮಂಜುನಾಥ. ಕಾಂಗ್ರೆಸ್ ಮುಖಂಡರಾದ ಪ್ರಕಾಶರೆಡ್ಡಿ. ಮಾಜಿ ಪಪಂ ಅದ್ಯಕ್ಷ ವಾಲಿಬಾಲ್ ತಿಮ್ಮರೆಡ್ಡಿ. ಮುಖಂಡರಾದ ಇಕ್ಬಾಲ್ ಆಹಮದ್. ಮುಖಂಡರಾದ ಅನ್ವರಣ್ಣ. ಮಹಿಳಾ ಕಾಂಗ್ರೆಸ್ ಸಾವಿತ್ರಮ್ಮ. ಜಯಶ್ರೀ. ಶಿಲ್ಪಾ ಸೇರಿದಂತೆ ಹಾಜುರಿದ್ದರು.
