By shukradeshe news
editor m.rajappa vyasgondanahalli
Kannada | online news portal |Kannada news online date august 9 _9_2026

ಡಿಜೆ ದ್ವನಿವರ್ಧಕ ಬದಲು ಗ್ರಾಮೀಣ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಏರ್ಪಡಿಸಿ ಗಣೇಶ ಚತುರ್ಥಿ ಶಾಂತಿ ಸೌಹಾರ್ದ ಮೆರೆಯುವಂತೆ ಜಗಳೂರು ಪೊಲೀಸ್ ಠಾಣೆ ಪಿ.ಐ ಸಿದ್ದರಾಮಯ್ಯ ಕರೆ ನೀಡಿದರು.

​ಗಣೇಶ ಚತುರ್ಥಿ ಹಬ್ಬವನ್ನು ಪಟ್ಟಣದಲ್ಲಿ ಪರಸ್ಪರ ಪ್ರೀತಿ, ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕಾನೂನು ಪರಿಪಾಲನೆ ಅನುಸರಿಸಬೇಕು ರಾಜ್ಯದ್ಯಂತ ಡಿಜೆ ನಿಷೇಧ ಮಾಡಲಾಗಿದೆ’ ಜಗಳೂರು ಪೊಲೀಸ್ ಇಲಾಖೆ ಪಿಐ. ಸಿದ್ದರಾಮಯ್ಯ ಠಾಣೆಯಲ್ಲಿ ಕರೆಯಲಾಗಿದ್ದ ಸೌಹಾರ್ದ ಸಭೆಯಲ್ಲಿ ಸೂಚನೆ ನೀಡಿದರು.

ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ವಾರ್ಡಗಳು ಸೇರಿದಂತೆ ಪ್ರತಿ ವರ್ಷದಂತೆ ಒಟ್ಟು‌ 139‌ ಗಣಪತಿ ಪ್ರತಿಷ್ಟಾನ ಮಾಡಲಾಗುತ್ತಿದೆ ವಿವಿಧ ಯುವಕರ ಬಳಗ ಗಣೇಶ ಅಭಿಮಾನ ಸಮಿತಿಗಳ‌ ವತಿಯಿಂದ 19 ಸೋಕ್ಷ್ಮ ೧೧೯ ಸಾಮಾನ್ಯ ವಲಯ ಎಂದು ಗುರುತಿಸಲಾಗಿದೆ.
ಗಣೇಶ ಹಬ್ಬದ ಅಂಗವಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಸೌಹಾರ್ದ ತಿಳಿಸಿದ್ದಾರೆ.

‘ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದರು .

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ದರೆಪ್ಪ ಮುಖಂಡರಾದ ಇಕ್ಬಾಲ್ ಆಹಮದ್ .ನಾಯಕ ಸಮಾಜದ ಮಾಜಿ ಕಾರ್ಯದರ್ಶಿ ಲೋಕಣ್,. ವಿವಿಧ ಯುವಕ ಸಮಿತಿ ಪದಾಧಿಕಾರಿಗಳು ಹಾಜುರಿದ್ದರು

Leave a Reply

Your email address will not be published. Required fields are marked *

You missed

error: Content is protected !!