ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆ ಜೊತೆಗೆ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಿ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ
ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ 32 ಕೋಟಿ ರೂಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ. ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
By shukradeshe news
editor m.rajappa vyasgondanahalli
Kannada | online news portal |Kannada news online date ನವೆಂವರ್ 10_11_2026
ತಾಲ್ಲೂಕಿನ ಬಗ್ಗೆನಹಳ್ಳಿ ಬಳಿ ಕೈಗಾರಿಕ ಸ್ಥಾಪನೆ ಸೇರಿದಂತೆ ಬಿಳುಚೋಡು ಗ್ರಾಮದ ರಸ್ತೆ ಬಿಡ್ಜ್ ಹಾಗೂ ಸಿಸಿ ರಸ್ತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು. ಐತಿಹಾಸಿಕ ಊರಿನ ಪ್ರಸಿದ್ದ ರಾಜಕಾರಣಿ ಹೆಜ್ಜೆ ಗುರುತು ಬಿಟ್ಟು ಹೋಗಿರುವ ಕಡಬನಕಟ್ಟೆ ಜಿ.ಎಚ್ ಅಶ್ವತ್ ರೆಡ್ಡಿ ಹಾಗೂ ಬಿಳಿಚೋಡು ಚನ್ನಒಡೆಯರಂತ ರಾಜಕಾರಣಿಗಳು ನಮಗೆ ಪ್ರೇರಣೆ
ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ನೂತನ ಸಚಿವರಾದ ಸನ್ಮಾನ್ಯ ಶ್ರೀ. ಟಿ.ರಘುಮೂರ್ತಿ ರವರಿಗೆ ಸನ್ಮಾನ ಮತ್ತು ರೂ.31.82 ಕೋಟಿ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಸಮಾರಂಭದಲ್ಲಿ ಮಾತನಾಡಿದರು ಪ್ರತಿಯೊಬ್ಬರು ಶಾಸಕರಾಗಿ ಆಯ್ಕೆಯಾಗಬಹುದು ಆದರೆ ಶಾಸಕರಾದ ಬಿ.ದೇವೇಂದ್ರಪ್ಪ ಅವರಂತಹ ವಿದ್ವಾಂಸರು .ಸಾಹಿತಿಗಳು .ಚಿಂತಕರಾಗಿ ಜನಪ್ರಿಯತೆ ಜನಮನ್ನಣೆ ಗಳಿಸುವುದು ಸುಲಭದ ಮಾತಲ್ಲ ನಮ್ಮ ಗ್ರಾಮದ ಮಾಜಿ ಸಚಿವರಾದ ಜಿ ಎಚ್ ಅಶ್ವಥರೆಡ್ಡಿ ಅವರು ಜಗಳೂರು ಕ್ಷೆತ್ರದಲ್ಲಿ 6 ಬಾರಿ ಶಾಸಕರಾಗಿ ಸಚಿವರಾಗಿ ಧೀರ್ಘಾವಧಿ ಆಡಳಿತ ನಡೆಸುವ ಮೂಲಕ ಅತ್ಯತ್ತಮ ಜನನಾಯಕರಾಗಿ ಮುತ್ಸದಿ ರಾಜಕಾರಣಿ ಹಾಗೂ ಬಿಳಿಚೋಡು ಗ್ರಾಮದ ಐತಿಹಾಸಿಕ . ರಾಜಕೀಯ ಹಿನ್ನೆಲೆ ಹೊಂದಿರುವ ಚನ್ನಒಡೆಯರಂತಹ ರಾಜಕಾರಣಿಗಳ ಹೆಜ್ಜೆ ಗುರುತುಗಳೆ ನಮಗೆ ಪ್ರೇರಣೆಯಾಗಿವೆ. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಮಾಜಿ ಮುಖ್ಯಮಂತ್ರಿ ಸಿದ್ಧಾರಮಯ್ಯ ಅವರು ಜಾರಿಗೆ ತಂದಂತಹ ಗ್ಯಾರಂಟಿ ಯೋಜನೆಗಳ ಜೊತೆ ಜೊತೆಗೆ ಅಭಿವೃದ್ದಿ ಕಾಮಗಾರಿ ಸ್ಥಾಪನೆ ಮಾಡುವ ಮೂಲಕ ಎರಡನೆ ಅವಧಿಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ , ಪ್ರಜಾಸೇವೆ ಎನ್ನುವ ವಿನೂತ ಕಾರ್ಯಕ್ರಮದ ಮೂಲಕ ರಾಜ್ಯದ ಜನರ ಮನೆಬಾಗಿಲಿಗೆ ಸರ್ಕಾರದ ಸೇವೆ ನೀಡುವ ಕೆಲಸ ಮಾಡುತ್ತಿದ್ದಾರೆ.ಗ್ರಾಮೀಣಾಭಿವೃದ್ಧಿಗೆ 16000 ಕೋಟಿ.20.000 ಕೋಟಿ ಲೋಕೋಪಯೋಗಿ ಇಲಾಖೆಗಳಿಗೆ ಅನುದಾನವನ್ನು ಇತ್ತೀಚೆಗೆ ನಡೆದ ಕ್ಯಾಬಿನೆಟ್ ನಲ್ಲಿ ನೀಡಲಾಗಿದೆ. ಜನ ಬಯಸಿದ ಅಭಿವೃದ್ಧಿಯನ್ನು ನಿಡುವ ನಮ್ಮ ಸರ್ಕಾರದ ಕೆಲಸವಾಗಿದೆ.ವಿರೋಧ ಪಕ್ಷದವರ ಟೀಕೆ ಮಾಡಲಿ ಆದರೆ ವಯಕ್ತಿಕ ತೇಜೋವಧೆ ತರವಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 36 ಇಲಾಖೆಯು ಮುಖಾಂತರ ಅನುದಾನ ಒದಗಿಸಿ ಪರಿಶಿಷ್ಟರ ಅಭಿವೃದ್ದಿಗೆ ಬದ್ದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ ರಘುಮೂರ್ತಿ ಯವರು ಮೂರು ಬಾರಿ ಶಾಸಕರಾಗಿ ಈಗ ನೂತನ ಸಚಿವರಾಗಿದ್ದಾರೆ ಸಚಿವರ ಗ್ರಾಮ ಕಡಬನಕಟ್ಟೆ ಗ್ರಾಮದ ಅಳಿಯನಾದ ನಾನು ಶಾಸಕನಾಗಿದ್ದೆನೆ
ರಘುಮೂರ್ತಿ ಅವರು ಹಗಲಿರುಳು ಎನ್ನದೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಜನಸೇವೆ ಜನಾರ್ಧನ ಸೇವೆಯಲ್ಲಿ ತನ್ನನ್ನ ತೋಡಗಿಸಿಕೊಂಡಿಸಿಕೊಂಡು ಶಾಸಕರು ಅಭಿವೃದ್ದಿ ಕಾರ್ಯಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ ಎಂದು ಬಣ್ಣಿಸಿದರು.
ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಸಚಿವರಾದ ರಘುಮೂರ್ತಿ ಅವರು ನಮ್ಮ ಜಗಳೂರು ಎಸ್.ಟಿ ಮೀಸಲು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕಲ್ಪಿಸಿ ಅಭಿವೃದ್ದಿಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆ ಸದಾ ಶ್ರಮಿಸುತಾ ಬಂದಿರುವೆ. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡದಂತೆ ನಿಗಾವಹಿಸಿ ತಾಯಂದಿರು ಮಕ್ಕಳಿಗೆ ಸಂಸ್ಕಾರ ನೀಡಬೇಕು, ಕಿವಿ ಮಾತು ಹೇಳಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಪ್ರಾಸವಿಕವಾಗಿ ಮಾತನಾಡಿದರು ಬಿಳಿಚೋಡು ಗ್ರಾಮ ಐತಿಹಾಸಿಕವಾಗಿ ಹಿನ್ನೆಲೆ ಹೊಂದಿದ್ದು,ಚಿತ್ರದುರ್ಗದ ರಾಜಾ ಆಡಳಿತ ಅವಧಿಯಲ್ಲಿ ಅನೇಕ ಪಾಳೆಯಗಾರರು ಸಹ ಆಳ್ವಿಕೆ ನಡೆಸಿ ಬಿಳಿಚೋಡಿನ ಬೀಮಪ್ಪನಾಯಕರಂತ ನಾಯಕ ಸಮುದಾಯದವರು ತಲೆ ಎತ್ತಿರುವುದು ನಮ್ಮಹೆಮ್ಮೆಯ ಸಂಗತಿ.ಈ ಬಿಳಿಚೋಡು ಗ್ರಾಮವು ದಾವಣಗೆರೆ ಚಿತ್ರದುರ್ಗ ಹಾಗೂ ಹಲವು ಪ್ರದೇಶಗಳಿಗೆ ಸಂಪರ್ಕ ಮಾಡುವ ಕೇಂದ್ರ ಗ್ರಾಮವಾಗಿದ್ದು .ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿಗಳ ಜೊತೆ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಈ ಹೆಸರಾಂತ ಬೀಳಿಚೋಡು ಗ್ರಾಮಕ್ಕೆ 20 ಕೋಟಿ ಅನುದಾನ ನೀಡಿದೆ ಗ್ರಂಥಾಲಯ. ರಸ್ತೆ .ವಿದ್ಯುತ್ ದೀಪ,ಶಾಲಾ ಕೋಠಡಿ ..ಸೇತುವೆ ನಿರ್ಮಾಣ ಕಾಮಗಾರಿ. ವಾಲ್ಮೀಕಿ ಸಮುದಾಯ ಭವನಗಳು ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಸೇರಿದಂತೆ 32.ಕೋಟಿ ಅಧಿಕ ಅನುದಾನದ ಕಲ್ಪಿಸಲಾಗಿದೆ.ತಾಲ್ಲೂಕಿನ ಬಗ್ಗೇನಹಳ್ಳಿ ಗ್ರಾಮದ ಸಣ್ಣಕೈಗಾರಿಕೆ ಎಸ್ಟೇಟ್ ಸ್ಥಾಪನೆಗೆ ಕೇವಲ 3.50 ಕೋ ಅನುದಾನ ಲಭ್ಯತೆಯಿರುವುದನ್ನ ಮನಗಂಡ ಶಾಸಕರಾದ ಬಿ.ದೇವೇಂದ್ರಪ್ಪ ಅವರ ಮನವಿಗೆ ಸ್ಪಂದಿಸಿದ ಸಚಿವರಾದ ಟಿ.ರಘುಮೂರ್ತಿ ಅವರು 15.75 ಕೋಟಿಗೆ ಅನುದಾನ ಹೆಚ್ಚಿಸಿ ಅದೇಶಿಸಿದ್ದಾರೆ ಎಂದು ಶ್ಲಾಘಿಸಿದರು.ಚಳಕೆರೆ ಕ್ಷೇತ್ರದ ಶಾಸಕರು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು
ಟಿ.ರಘುಮೂರ್ತಿ ರವರು ಸೋಲಿಲ್ಲದ ಸರದಾರರಾಗಿ ಚಳ್ಳಕೆರೆ ತಾಲ್ಲೂಕನ್ನು ರಾಜ್ಯವೆ ತಿರುಗಿ ನೋಡುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಿ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ವ್ಯಕ್ತಿಯಾಗಿದ್ದಾರೆ ಎಂದರು.
ಮಾಜಿ ಜಿಪಂ ಸದಸ್ಯ ಕೆ.ಪಿ.ಪಾಲಯ್ಯ ಮಾತನಾಡಿ ರಾಜ್ಯದಲ್ಲಿ ಒಬ್ಬ ರಾಜಕಾರಣಿಯಾಗಿ ಅತಿಹೆಚ್ಚು ಅಭಿವೃದ್ಧಿ ಮಾಡಿದ ಕೀರ್ತಿ ಶಾಸಕ ರಘುಮೂರ್ತಿ ಯವರಿಗೆ ಸಲ್ಲುತ್ತದೆ ಸಾಧನೆಯಿಂದ ಸಚಿವರಾಗಿದ್ದಾರೆ ಎಂದು ಪ್ರಂಶಸೆ ವ್ಯಕ್ತಪಡಿಸಿ ಶಾಸಕ ದೇವೇಂದ್ರಪ್ಪ ಅವರು ಅತಿಹೆಚ್ಚು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದಾರೆ. ಶಿಕ್ಷಣ .ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಬಿಳಿಚೋಡು ಐತಿಹಾಸಿಕವಾಗಿ ಪ್ರಸಿದ್ಧವಾದ ಗ್ರಾಮವಾಗಿದೆ ಸಚಿವರು ಶಾಸಕರು ನಾಯಕ ಸಮುದಾಯದ ಭವನ ನಿರ್ಮಾಣ ಹಾಗೂ ಗಂಗಾಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಮಾಡಿದರು
ಸಚಿವ ಟಿ.ರಘುಮೂರ್ತಿಯವರು ಜಗಳೂರು ತಾಲೂಕಿಗೆ ಆಗಮಿಸುತ್ತಿದ್ದಂತೆ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಅಭಿಮಾನಿಗಳು ಬೃಹತ್ ಸೇಬೆ ಹಣ್ಣಿನ ಹಾರವನ್ನು ಹಾಕಿ ಸ್ವಾಗತಿಸಿದರು ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು ಹಾಗೂ *ವೇದಿಕೆ ಕಾರ್ಯಕ್ರಮದಲ್ಲಿ ಚಳ್ಳಕೆರೆ ಮುತ್ತುರಾಜ್ ಕಲಾತಂಡದಿಂದ ಹಾಗೂ ಬೆಂಚಿಕಟ್ಟೆ ಅಂಜಿನಪ್ಪ ಅವರ ಕಲಾತಂಡದಿಂದ ಸಂಗೀತ ಗಾಯನ ಕಾರ್ಯಕ್ರಮಗಳು ನೆರವೇರಿದವು
(ಭೂಮಿಪೂಜೆ ಹಾಗೂ ಉದ್ಘಟನೆಯಾದ ವಿವಿಧ ಕಾಮಗಾರಿಗಳು ಜಗಳೂರು ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೇತುವೆ ನಿಮಾಣ ಕಾಮಗಾರಿ ಅಂದಾಜು ಮೊತ್ತ :- ರೂ. 10.00 ಕೋಟಿಗಳು ಬಿಳಿಚೋಡು ಗ್ರಾಮದ ಜಗಳೂರು ದಾವಣಗೆರೆ ರಸ್ತೆಯಲ್ಲಿ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿ ಆಂದಾಜು ಮೊತ್ತ :- ರೂ. 1.00 ಕೋಟಿಗಳು* ಬಿಳಿಚೋಡು ಗ್ರಾಮದಲ್ಲಿ ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣ ಅಂದಾಜು ಮೊತ್ತ : ರೂ.23.48ಲಕ್ಷಗಳು *ಬಿಳಿಚೋಡು ಗ್ರಾಮದ ಎಸ್ .ಟಿ. ಕಾಲೋನಿ ಪರಿಮಿತಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ
ಅಂದಾಜು ಮೊತ್ತ :- ರೂ. 25.00 ಲಕ್ಷಗಳು
ಜಗಳೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಅಂಕಣಗಳ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ:- ರೂ 2.00ಕೋಟಿಗಳು * ಬಿಳಿಚೋಡು ಹೋಬಳಿ ಬಗ್ಗೇನಹಳ್ಳಿ ಗ್ರಾಮದಲ್ಲಿ ಹೊಸ ಕೈಗಾರಿಕ ಎಸ್ಟೇಟ್ ಸ್ಥಾಪನೆ ಅಂದಾಜು ಮೊತ್ತ :- ರೂ. 15.75 ಕೋಟಿಗಳು * ಬಿಳಿಚೋಡು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ,ಅಂದಾಜು ಮೊತ್ತ :- ರೂ. 1.00 ಕೋಟಿಗಳು ಬಿಳಿಚೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಅಂದಾಜು ಮೊತ್ತ :- ರೂ. 85.37 ಲಕ್ಷಗಳು *ಬಿಳಿಚೋಡು ಗ್ರಾಮದಲ್ಲಿ ಕಾರ್ಯ ಮತ್ತು ಪಾಲಕ ತಾಖಾ ಕಛೇರಿ ನೂತನ ಕಟ್ಟಡ ನಿರ್ಮಾಣ
ಅಂದಾಜು ಮೊತ್ತ :- ರೂ. 73.50 ಲಕ್ಷಗಳು) ಒಟ್ಟು ಸುಮಾರು 31.82 ಕೋ ರೂಗಳಲ್ಲಿ ಅಭಿವೃದ್ದಿ ಕಾಮಗಾರಿಗಳೆ ಕೈಗನ್ನಡಿಯಾಗಿವೆ.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಷಂಷಿರ್ ಅಹಮದ್ .ಕೆ.ಪಿ.ಸಿ.ಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ,ಮುಖಂಡ ಸಿ.ತಿಪ್ಪೇಸ್ವಾಮಿ,ಬಿಳಿಚೋಡು ಓಮಣ್ಣ,ತಹಶಿಲ್ದಾರ್ ಗುರುಬಸವರಾಜ್, ಇಓ.ಕೆಂಚಪ್ಪ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರರಾವ್,ಮಹಾಂತೇಶ್,ಪರಿಶಿಷ್ಟ. ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ನವೀನ್ ಮಠದ್, ಬಿಇಒ ಹಾಲಮೂರ್ತಿ, ಪಿಆರ್ ಇಡಿ ಶಿವಮೂರ್ತಿ,ಪಲ್ಲಾಗಟ್ಟೆ ಶೇಖರಪ್ಪ,
ಅಂಜಿನಪ್ಪ,ಬೆಂಚಿಕಟ್ಟೆ ರಾಜಣ್ಣ ಗಿರೀಶ್ ಒಡೆಯರ್. ಸೇರಿದಂತೆ ಮುಂತಾದವರು ಹಾಜುರಿದ್ದರು.
