ಜಗಳೂರು ತಾಲ್ಲೂಕಿನ ಹಿರೆಮಲ್ಲನಹೊಳೆ ಕೆ.ಪಿ.ಟಿ.ಸಿ.ಎಲ್ ಕಿರಿಯ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸನತ್ ಕಡೂರು ತಾಲ್ಲೂಕಿನ ಬುಕ್ಕಸಾಗರ‌ ಬಳಿ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 14 _11_2026

ಸುದ್ದಿ ಜಗಳೂರು

ಕಡೂರು ತಾಲ್ಲೂಕಿನ ಬುಕ್ಕಸಾಗರ ಬಳಿ ಮುಂದೆ ತೆರಳುತ್ತಿದ್ದ‌ ತಾರ್ ಕಾರು ಹಾಗೂ ಮೃತ ಸನತ್ ಕಾರಿನ ನಡುವೆ ತಡ ರಾತ್ರಿ ಆಪಾಘಾತವಾಗಿದೆ. ತನ್ನ ಚಿಕ್ಕಪ್ಪನ ಮನೆಗೆ ತೆರಳುವ ವೇಳೆ ಮತ್ತೊಂದು‌ ಮಹೇಂದ್ರ ಕಾರುನ್ನು ಒವರ್ ಟೆಕ್ ಮಾಡಲು ಹೋಗಿ ರಸ್ತೆಯಲ್ಲಿ ಮಹಿಂದ್ರ ಕಾರು ಹಾಗೂ ಇಂಜಿನೀಯರ್ ಸನತ್ ಕಾರು ನಡುವೆ ಅಪಘಾತ ಸಂಭವಿಸಿ ಸನತ್ ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಶ್ರೀಯುತ ಕಿರಿಯ ಇಂಜಿನೀಯರ್ ಜಗಳೂರು ಬೆಸ್ಕಾಂ ಇಲಾಖೆ ವ್ಯಾಪ್ತಿಯ ಪಲ್ಲಾಗಟ್ಟೆ ಸಬ್ ಸ್ಟೇಷನ್ ನಲ್ಲಿ ಸುಮಾರು ವರ್ಷಳಿಂದ ಸೇವೆ ಸಲ್ಲಿಸಿ ಈ ಹಿಂದೆ ವರ್ಗಾವಣೆಗೊಂಡು ತಾಲ್ಲೂಕಿನ ಹಿರೆ ಮಲ್ಲನಹೊಳೆ ಕೆಪಿಟಿಸಿಎಲ್ ಕಿರಿಯ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೊನ್ನೆ ದೀಪಾವಳಿಯ ಹಬ್ಬಕ್ಕೆಂದು ತಮ್ಮ ಕುಟುಂಬದ ಪತ್ನಿಯ ತವರು ಮನೆಯವರೊಂದಿಗೆ ಕಡೂರಿಗೆ ಹೋಗಿದ್ದರು ತವರು ಮನೆಯಲ್ಲಿ ಅವರ ಕುಟುಂಬದ ಪತ್ನಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಸನತ್ ಅವರು ಒಬ್ಬರೆ ಅವರ ಚಿಕ್ಕಪ್ಪನ ಮನೆಗೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಬೀಕರ ಆಪಾಘಾತವಾಗಿದೆ ವಿಷಯ ತಿಳಿಯುತ್ತಿದ್ದಂತೆ ಅತ್ತಿರದ ಪೊಲೀಸ್ ಠಾಣೆಯ ಸಿಬ್ಬಂಧಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು‌ ಇನ್ನು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸನತ್ ಅವರು ಈ ಹಿಂದೆ ಬಿಳಿಚೋಡು ಹೊಬಳಿ ಪಲ್ಲಾಗಟ್ಟೆ ಗ್ರಾಮದಲ್ಲಿ ಸುಮಾರು ವರ್ಷಗಳ‌ ಕಾಲ ಸೇವೆ ಸಲ್ಲಿಸಿದ ಸನತ್ ಇಲಾಖೆ ಸಿಬ್ಬಂಧಿಗಳೊಂದಿಗೆ ಆತ್ಮಿಯತೆ ವಿಶ್ವಾಸದಿಂದ‌ ಕರ್ತವ್ಯ ನಿರ್ವಹಿಸುತ್ತಿದ್ದರು. ಶಾಖಾಧಿಕಾರಿಗಳಾದ ಸನತ್ ಅವರು ಕಾರು ಅಪಘಾತದಲ್ಲಿ ವಿಧಿವಶ..

ಶ್ರೀಯುತ ಸನತ್ ಅವರು ಜಗಳೂರು ಬೆಸ್ಕಾಂ‌ ಇಲಾಖೆ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ದೀಪಾವಳಿ ನಿಮಿತ್ತ ಕಡೂರು ಗ್ರಾಮದ ಅವರ ತವರು ಕುಟುಂಬದವರ ಮನೆಗೆ ತೆರಳಿದ ಸಂದರ್ಭದಲ್ಲಿ‌ ವಾಪಸ್ಸು ಮರಳಿ ಬರುವ ಸಂದರ್ಭದಲ್ಲಿ ಕಾರು ಆಪಾಘಾತದಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕುಟುಂಬದವರು ಪತ್ನಿ .ಮಕ್ಕಳ .ಅವರ ಪೋಷಕರು ದುಖಿತರಾಗಿ ಗೋಳಿನ ಆಕ್ರಂದನ ಮುಗಿಲು ಮುಟ್ಟಿದೆ ಇನ್ನು ಜಗಳೂರಿನ ಬೆಸ್ಕಾಂ ಇಲಾಖೆ ಅಧಿಕಾರಿ ಮಲ್ಲಿಕಾರ್ಜನ್ ಹಾಗೂ ಅಧಿಕಾರಿ ಸಿಬ್ಬಂದಿಗಳು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!