By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 15_11_2026

ಪ್ರಜಾ ಸೇವೆ ಸಭೆಗೆ ಕೇವಲ 12 ಅರ್ಜಿ ಮಾತ್ರ ಬಂದಿದ್ದು ಆ ಸಮಸ್ಯೆಗಳ ಅರ್ಜಿಗಳಿಗೆ ಶೀಘ್ರ ಪರಿಹಾರ ಹುಡುಕಲಾಗುವುದು ತಹಶೀಲ್ದಾರ್ ಗುರುಬಸವರಾಜ.

ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ‌ ನಡೆದ ಪ್ರಜಾ ಸೇವೆ ಆಂದೋಲನ ಸಭೆಗೆ ಬಹತೇಕ ನಿರಸ ಪ್ರತಿಕ್ರಿಯೆ ವ್ಯಕ್ತಾವಾಗಿತ್ತು ಅಧಿಕಾರಿಗಳು ಸರಿಯಾದ. ರೀತಿ ಸರ್ಕಾರದ ಪ್ರಜಾ ಸೇವೆ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸದೆ ಹೆಚ್ಚು ಜನರು ಸಭೆ ಭಾಗವಹಿಸಿರಿಲಿಲ್ಲ ಎಂಬ ಕೂಗು ಕೇಳಿಬಂದಿತು.

ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮಕೈಗೊಳ್ಳುವಂತೆ ರೈತ ಸಂಘದ ಮುಖಂಡ ಮರೆನಹಳ್ಳಿ‌ ಒಬಳೇಶ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಪಡಿಸಿದ್ದಾರೆ.

​ ತಾಲ್ಲೂಕು ಆಡಳಿತದಿಂದ ಏರ್ಪಡಿಸಲಾಗಿದ್ದ ಸರ್ಕಾರದ ಪ್ರಜಾಸೇವೆ ಎಂಬ ವಿನೂತ ಸಾರ್ವಜನಿಕರ ಅಹಾವಲುಗಳ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಪ್ರಜಾಸೇವೆ ಸಭೆಯಲ್ಲಿ ರೈತ ಮುಖಂಡ ಮರೆನಹಳ್ಳಿ ಒಬಳೇಶ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು ಮರೆನಹಳ್ಳಿ ಗ್ರಾಮದಲ್ಲಿ ಕುಡಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ ಮಹಿಳೆಯರು ಬಿಂದಿಗೆ ಹಿಡಿದು ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಎಂದರು‌.ಕುಡಿಯುವ ನೀರಿನ ಭೊರವೆಲ್ ಗಳು ಅಂತರ್ಜಲ ಕಡಿಮೆಯಾಗಿ ನೀರಿನ ಅಭಾವ ಉಂಟಾಗಿದೆ ಈ ಹಿಂದೆ ಕೊರೆಸಿದ ಭೋರವೆಲ್ ಪೆಲ್ ಆಗಿದೆ ಈಗಾಗಲೇ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿದೆ ಆದರೆ ಟ್ಯಾಂಕರ್ ಒಂದು ಬೀದಿಗೆ ಬಂದರೆ ಮತ್ತೊಂದು ಬೀದಿಗೆ ಬರುತ್ತಿಲ್ಲ . . ಟ್ಯಾಂಕರ್ ನೀರು ಬಳಕೆಯಿಂದ ಗ್ರಾಮದ ಜನರಲ್ಲಿ ಅಲರ್ಜಿ ಗುಳೆ ಕಾಣಿಸಿಕೊಂಡಿವೆ.ಅನಾರೋಗ್ಯಕ್ಕಿಡಾಗುವಂತಾಗಿದೆ. ಎಂದರು ಒಟ್ಟಾರೆ ಟ್ಯಾಂಕರ್ ನೀರು ಸಾಕಾಗುತ್ತಿಲ್ಲ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು . ಶಾಶ್ವತ ನೀರು ಒದಗಿಸುವಂತೆ ತಾಕಿತು ಮಾಡಿದರು .


ಕರ್ನಾಟಕ ರಾಜ್ಯ ರೈತ ಸಂಘದ ಅದ್ಯಕ್ಷ ಭರಮಸಮುದ್ರ ಕುಮಾರ್ ಮಾತನಾಡಿ‌ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮೂಲಭೂತ ಸೌಕರ್ಯಗಳು .ಜನ ಜಾನುವಾರಗಳಿಗೆ ಅಗತ್ಯ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ನೀರಿನ ಲಭ್ಯತೆ ಬಗ್ಗೆ ಪ್ರತಿವಾರ ನಿಖರ ಮಾಹಿತಿ ನೀಡಬೇಕು. ನೀರಿನ ಅಭಾವವಿರುವ ಕಡೆಗಳಲ್ಲಿ ಅಗತ್ಯವಿದ್ದರೆ ಖಾಸಗಿ ಬೋರ್‌ವೆಲ್‌ಗಳಿಂದ ನೀರನ್ನು ಪಡೆದು ಸಾರ್ವಜನಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಾಲಾಗಿದೆ ಮುಂದಿನ ದಿನಗಳಲ್ಲಿ ಬೊರೆವೆಲ್ ಕೊರೆಸಿ ಶಾಶ್ವತ ನೀರಿನ ಸಮಸ್ಯೆಗೆ ಪರಿಹರಿಸಲಾಗುವುದುಬೆಂದು ತಾಪಂ ಇಓ ತಿಳಿಸಿದರು.
ತಹಶೀಲ್ದಾರ್ ಗುರುಬಸವರಾಜ ಮಾತನಾಡಿ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಪಂಚಾಯಿತಿಗಳೊಂದಿಗೆ ಸಕ್ರಿಯ ಸಂಪರ್ಕದಲ್ಲಿರಬೇಕು. ನೀರಿನ ಲಭ್ಯತೆಯ ದಾಖಲೆಗಳೊಂದಿಗೆ ಸಭೆಗೆ ಹಾಜರಾಗಬೇಕು .ಸದ್ಯಕ್ಕೆ ನೀರಿನ ಸಮಸ್ಯೆ ಎದುರಿಸುತ್ತಿರುವ ಮರೆನಹಳ್ಳಿ ಮತ್ತು ವಿವಿಧ ಗ್ರಾಮಗಳಲ್ಲಿ ತಕ್ಷಣವೇ ಸಮಸ್ಯೆ ಬಗೆಹರಿಸಲು ಸಭೆಯಲ್ಲಿ ಅಧಿಕಾರಿಗಳು ಗಮನಹರಿಸುವಂತೆ ತಿಳಿಸಿದರು.

ಸಭೆಯಲ್ಲಿ ಪಪಂ ಮುಖ್ಯ ಅಧಿಕಾರಿ‌ ಲೋಕ್ಯಾನಾಯ್ಕ್ . ಗ್ರಾಮೀಣ ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಸಾಧಿಕ ಉಲ್. ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಇಮಜಿನೀಯರ್ ಶಿವಮೂರ್ತಿ‌, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕರಾದ ಲಿಂಗರಾಜ್ .ಶಿಕ್ಷಣ ಇಲಾಖೆ ಬಿ.ಆರ್ ಸಿ ಹಾಲಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ರೈತ ಸಂಘದ ಪದಾಧಿಕಾರಿಗಳು ಹಾಜುರಿದ್ದರು.

Leave a Reply

Your email address will not be published. Required fields are marked *

You missed

error: Content is protected !!