ದಿವ್ಯ ಭಾರತಿ ಶಾಲೆ ವಿಧ್ಯಾರ್ಥಿನಿ ಪಟ್ಟಣದ ಡಿ ದೆವರಾಜ್ ಅರಸು ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕೀಯರ ವಸತಿ ನಿಲಯದಲ್ಲಿ ತಂಗಿದ್ದ ವಿಧ್ಯಾರ್ಥಿನಿ ಅನಾರೋಗ್ಯ ನಿಮಿತ್ತ ಊರಿಗೆ ತೆರಳಿದ ವಿಧ್ಯಾರ್ಥಿ ಸಾವನ್ನಪ್ಪಿರುತ್ತಾಳೆ
ಜಗಳೂರು ಸುದ್ದಿ
ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ.
8 ನೇ ತರಗತಿ ಬಾಲಕಿ ಎಸ್ ಎಂ.ಹೇಮಾಲತಾ ಮೃತಪಟ್ಟಿರುತ್ತಾಳೆ
By shukradeshe news
editor m.rajappa vyasgondanahalli
Kannada | online news portal |Kannada news online date 13 _11_2026
ಮೋನ್ನೆ ಕಳೆದ ದಿನವಷ್ಟೆ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕಿಯರ ವಸತಿ ಹಾಸ್ಟೆಲ್ ನಿಂದ ಸ್ವಗ್ರಾಮಕ್ಕೆ ತೆರಳಿದ ವಿಧ್ಯಾರ್ಥಿನಿ ಸಾವು ಅನಾರೋಗ್ಯದ ನಿಮಿತ್ತ ತಂದೆ ಮಂಜಣ್ಣ ಪೋಷಕರು ಹಾಸ್ಟೆಲ್ ನಿಂದ ರಜಾ ಕೇಳಿಕೊಂಡು ತನ್ನ ಸ್ವಗ್ರಾಮವಾದ ಸಿದ್ದಮ್ಮನಹಳ್ಳಿ ಗ್ರಾಮಕ್ಕೆ ಕರೆದುಕೊಂಡ ಹೋಗಿದ್ದಾರೆ.
ಮರುದಿನ ಅನಾರೋಗ್ಯ ನಿಮಿತ್ತ ಅತ್ತಿರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪೋಷಕರು ಚಿಕಿತ್ಸೆಗೆ ಎಂದು ಕರೆ ತಂದ ವೇಳೆ ತುರ್ತುನಿಘಾ ಘಟಕದಲ್ಲಿಯೇ 8 ನೇ ತರಗತಿ ವಿಧ್ಯಾಬ್ಯಾಸ ಮಾಡುತ್ತಿದ್ದ ಬಾಲಕಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
: 8 ನೇ ತರಗತಿಯಲ್ಲಿ ಓದುತ್ತಿದ್ದ ಸುಮಾರು 15 ವರ್ಷದ ಬಾಲಕಿಯೊಬ್ಬಳು
ಮನೆಯಲ್ಲಿ ನನಗೆ ವಾಂತಿ ಬರುತ್ತಿದೆ ಎಂದು ಹೇಳಿದ್ದೆ ತಡ ಪೋಷಕರು ಅಂದು ರಾತ್ರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೋಡಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದ್ದಕ್ಕಿದ್ದಂತೆ ಬಾಲಕಿ ಮೃತಪಟ್ಟಿದ್ದಾಳೆ.ನಂತರ ಬಾಲಕಿ ಶವವನ್ನ ಶವಗಾರಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಸಾವಿಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ ವೈದ್ಯರ ಪೋಸ್ಟ್ ಮಾರ್ಟನ್ ಶವ ಪರೀಕ್ಷೆ ನಂತರ ಗೊತ್ತಾಗಲಿದೆ ಎಂದು ವೈದ್ಯರು ಮೂಲಕ ತಿಳಿದು ಬಂದಿದೆ ಎಂದು ಪೋಷಕ ಮಂಜಣ್ಣ ಪ್ರತಿಕ್ರಿಯಿಸಿದ್ದಾರೆ.
ಶವಗಾರ ಕೊಠಡಿ ಮುಂಭಾಗದಲ್ಲಿ ಬಾಲಕಿ ಪೋಷಕರ ದುಖದ ಆಕ್ರಂದನ ಮುಗಿಲು ಮುಟ್ಟುವಂತಿತ್ತು
