By shukradeshe news
editor m.rajappa vyasgondanahalli
Kannada | online news portal |Kannada news online date ನವೆಂಬರ್ 24_11_2026

ಅದ್ದೂರಿ ಕನಕೋತ್ಸವ ಕಾರ್ಯಕ್ರಮಕ್ಕೆ ಹಾಲಿ ಶಾಸಕರನ್ನು ಮತ್ತು ಮಾಜಿ ಶಾಸಕರುಗಳನ್ನು ವಿವಿಧ ಗಣ್ಯರನ್ನು ಆಹ್ವಾನಿಸಿದ ತಾಲ್ಲೂಕಿನ ಚಿ‌ಕ್ಕ ಉಜ್ಜಿನಿ‌ ಟೈಗರ್ ಅಂಜಿನಪ್ಪ

ಜಗಳೂರ ಕ್ಷೇತ್ರದ ಶಾಸಕರಾದ ಚಿಕ್ಕಮನಟ್ಟಿ ಬಿ. ದೇವೇಂದ್ರಪ್ಪ ಮತ್ತು ಬಯಲು ಸೀಮೆ ಅಭಿವೃದ್ದಿ ಮಂಡಳಿ ನಿರ್ದೇಶಕರಾದ ಶ್ರೀ ಎಂ.ಡಿ‌ ಕೀರ್ತಿ ಕುಮಾರ ಮತ್ತು ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರಪ್ಪ ವಿವಿಧ ಗಣ್ಯರಿಗೆ ಕನಕೋತ್ಸವಕ್ಕೆ ಆಗಮಿಸುವಂತೆ ಪ್ರೀತಿಯ ಕರೆಯೋಲೆ ನೀಡಿದ ಟೈಗರ್ ಅಂಜಿನಪ್ಪ

ದಾಸಶ್ರೇಷ್ಠ, ಭಕ್ತ ಕನಕದಾಸರ ಜಯಂತಿ‌ ಅಂಗವಾಗಿ ಅದ್ದೂರಿ ‘ಕನಕೋತ್ಸವ’ ಕಾರ್ಯಕ್ರಮಕ್ಕೆ ಹಾಲಿ ಶಾಸಕ ಮತ್ತು ಮಾಜಿ ಶಾಸಕರುಗಳು ಸೇರಿದಂತೆ ವಿವಿಧ ಗಣ್ಯರಿಗೆ ಕರಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಚಿಕ್ಕ ಉಜ್ಜಿನಿ ಟೈಗರ್ ಅಂಜಿನಪ್ಪ .
ಇದೆ ನವೆಂಬರ್ 27-11-2026 ರಂದು ತಾಲ್ಲೂಕಿನ ಚಿಕ್ಕ ಉಜ್ಜಿನಿ ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿರುವ ಅದ್ದೂರಿ ಕನಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಸಮಾಜದ ಕೂಲಗುರುಗಳು ಹಾಗೂ ಜಿಲ್ಲಾ ಕೇಂದ್ರದ ಮಾಜಿ ಮಂತ್ರಿಗಳು. ಸಂಸದರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಬಂಧು ಬಾಂದವರನ್ನು ಕಾರ್ಯಕ್ರಮಕ್ಕೆ ಕರೆ ತರುವ ಮೂಲಕ
ಕನಕದಾಸರ ತತ್ವ, ಆದರ್ಶಗಳು ಮತ್ತು ಕೀರ್ತನೆಗಳ ಸಾರವನ್ನು ಸಾರುವ ನಿಟ್ಟಿನಲ್ಲಿ ಇದೊಂದು ಅಭೂತಪೂರ್ವ ಕಾರ್ಯಕ್ರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕನಕ ದಾಸರು ಜಾತ್ಯತೀತ ಸಮಾಜದಲ್ಲಿ ಮೇಲು ಕೀಳುಗಳನ್ನು ತೊಡೆದು ಹಾಕಲು ಶ್ರಮಿಸಿದಂತ
ಭಕ್ತ ಕನಕದಾಸರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ
ಮತ್ತು ವೇದಿಕೆ ಕಾರ್ಯಕ್ರಮ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ . ಕಾರ್ಯಕ್ರಮದಲ್ಲಿ‌ ಅನೇಕ ಗಣ್ಯರು ಹಿರಿಯರು ಬಾಗವಹಿಸಿ‌
“ಕುಲ ಕುಲ ಕುಲವೆಂದು ಹೊಡೆದಾಡದಿರಿ…”ಎನ್ನುವ ಹಾಗೆ ಅವರ ಚಿಂತನೆಗಳು ಸಾರುವ ನಿಟ್ಟಿನಲ್ಲಿ ಅದ್ದೂರಿ ಸಂಭ್ರಮವಾಗಲಿದೆ ಎಂದರು.

Leave a Reply

Your email address will not be published. Required fields are marked *

You missed

error: Content is protected !!