ಶುಕ್ರದೆಸೆ ನ್ಯೂಸ್:- ಕರ್ನಾಟಕ ವಿಧಾನಸಭೆ ಚುನಾವಣೆ: ಇಂದು 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!
ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ (Karnataka Election) ಇಂದು ನಡೆಯಲಿದೆ. ಬೆಳಿಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭ ಆಗಲಿದೆ.
ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ (Vote) ಮಾಡಲು ಅವಕಾಶ ಇರಲಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಹಿಂದೆಂದೂ ಕಾಣದಷ್ಟು ಭದ್ರತೆ ಕೂಡ ಕೈಗೊಳ್ಳಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ: ಇಂದು 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!
ಭಾರೀ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮೇ 10 (ಬುಧವಾರ) ಮತದಾನ ನಡೆಯಲಿದ್ದು, 224 ವಿಧಾನಸಭಾ ಕ್ಷೇತಗಳಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಈಗಾಗಲೇ ಹಿರಿಯ ನಾಗರಿಕರು, ಪೋಸ್ಟಲ್ ಮತದಾನವಾಗಿದೆ.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಆಮ್ ಆದ್ಮಿ, ಬಿಎಸ್ ಪಿ, ಎನ್ ಸಿಪಿ ಸೇರಿದಂತೆ ವಿವಿಧ ಪಕ್ಷಗಳಿಂದ 2615 ಅಭ್ಯರ್ಥಿಗಳು ಕಣದಲ್ಲಿದ್ದು, 2430 ಪುರುಷ, 184 ಮಹಿಳೆಯರು ಹಾಗೂ ಒಬ್ಬರು ತೃತೀಯ ಲಿಂಗಿ ಕಣದಲ್ಲಿದ್ದಾರೆ.
ರಾಜ್ಯದಲ್ಲಿ 5 ಕೋಟಿ, 31 ಲಕ್ಷ 33 ಸಾವಿರದ 54 ಮತದಾರರಿದ್ದು, 2,67,28,053 ಪುರುಷರು ಹಾಗೂ 2,64,00,074 ಮಹಿಳಾ ಮತದಾರರಿದ್ದಾರೆ.ರಾಜ್ಯದಲ್ಲಿ 11,71,558 ಯುವ ಜನತೆ ಮೊದಲ ಬಾರಿ ಮತದಾನ ಮಾಡಲಿದೆ. 5,71,281 ವಿಕಲಚೇತನರು (ಪಿಡಬ್ಲ್ಯೂಡಿ) ಮತ್ತು 12,15,920 80 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ.
ಇಂದು ಕರ್ನಾಟಕ ಚುನಾವಣೆ – ಐದು ಕೋಟಿಗೂ ಹೆಚ್ಚು ಜನರ ಮೇಲೆ ನಿಂತಿದೆ ರಾಜ್ಯದ ಭವಿಷ್ಯ
ಇಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ.
ಕರ್ನಾಟಕ ಅಸೆಂಬ್ಲಿ ಚುನಾವಣೆ ವಿಶೇಷ
- ಒಟ್ಟು ಮತ ಕ್ಷೇತ್ರ – 224
- ಒಟ್ಟು ಅಭ್ಯರ್ಥಿಗಳು – 2631
- ಬಿಜೆಪಿ ಅಭ್ಯರ್ಥಿಗಳು – 224
- ಕಾಂಗ್ರೆಸ್ ಅಭ್ಯರ್ಥಿಗಳು – 223
- ಜೆಡಿಎಸ್ ಅಭ್ಯರ್ಥಿಗಳು – 207
- ಮತ ಕೇಂದ್ರ – 58,282
- ಮತಗಟ್ಟೆಯ ಭದ್ರತಾ ಸಿಬ್ಬಂದಿ – 84,119
- ವಿಶೇಷ ಸಿಬ್ಬಂದಿ ಸಂಖ್ಯೆ – 2,959
- ಮತದಾರರ ಸಂಖ್ಯೆ – 5.21 ಕೋಟಿ
- ಪುರುಷ ಮತದಾರರ ಸಂಖ್ಯೆ – 2.62 ಕೋಟಿ
- ಮಹಿಳಾ ಮತದಾರರ ಸಂಖ್ಯೆ – 2.59 ಕೋಟಿ
- 112 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು
- ಫಸ್ಟ್ ಟೈಮ್ ವೋಟರ್‌ಗಳ ಸಂಖ್ಯೆ – 9.17 ಲಕ್ಷ
- 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 16,976
- ಶಾಂತಿ ಭದ್ರತೆಗೆ ನಿಯೋಜನೆಯಾದ ಪೊಲಿಸರು – 2.2 ಲಕ್ಷ
ಸುಗಮ ಕಾನೂನು ಸುವ್ಯವಸ್ಥೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭ