ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಬಿರು ಬಿಸಿನಲ್ಲಿಯೇ ಶೇ 81.17 ರಷ್ಟು ಮತದಾನ ನಡೆದಿದೆ ಎನ್ನಲಾಗಿದೆ.
- 2023 ರ ವಿಧಾನಸಭಾ ಚುನಾವಣೆಯಲ್ಲಿ ಜಗಳೂರು ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆಯಿಂದ ಶಾಂತಿಯುತ ಮತದಾನ ನಡೆದಿದೆ . ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 192958 ಜನ ಮತದಾರರಿದ್ದು, 97690 ಪುರುಷ ಮತದಾರರು, 95257 ಮಹಿಳಾ ಮತದಾರರು, ಇತರೆ 11 ಮತದಾರರಿದ್ದಾರೆ. 262 ಬೂತ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಶಾಂತಿಯುತ ಮತದಾನ ನಡೆದಿದೆ.ಮದ್ಯಾಹ್ನ 1 ಕ್ಕೆ ಶೇ 40 ರಷ್ಟು ಮತದಾನ
- ಶೇ 81 .17 ಮತದಾನ ನಡೆದಿದೆ ಎಂದು ಚುನಾವಣೆ ಅಧಿಕಾರಿ ಎಸ್ ರವಿ ತಿಳಿಸಿದ್ದಾರೆ. ಕ್ಷೇತ್ರದ ಮತದಾರರು
- ಬಿರು ಬಿಸಲಿನಲ್ಲೂ ಬಿರುಸಿನ ಮತದಾನ
- ಗಮನ ಸೆಳೆದ ಸಾಂಪ್ರದಾಯಿಕ ಮತಗಟ್ಟೆಗಳು
ಜಗಳೂರು ಪಟ್ಟಣದ ಸೇರಿದಂತೆ ಕಸಬಾ ಹೋಬಳಿ ಸೊಕ್ಕೆ .ಬಿಳಿಚೋಡು, ಹಾಗೂ ವಿವಿಧ ಗ್ರಾಮೀಣ ಪ್ರದೇಶ ಸೇರಿದಂತೆ ಗ್ರಾಮೀಣ ಬಾಗದಲ್ಲಿ ಇಂದು ಬೆಳಿಗ್ಗೆಯಿಂದ ಆರಂಭಗೊಂಡ ಮತದಾನ ಬಿರು ಬಿಸಿಲಿನಲ್ಲೂ ಬಿರುಸಿನಿಂದ ಮತದಾನ ಸಾಗಿದ್ದು ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 40 ರಷ್ಟು ಮತದಾನವಾಗಿತ್ತು. ಮುಕ್ತಾಯದ ವೇಳೆಗೆ ಶೇ 81.17 ರಷ್ಟು ಮತದಾನವಾಗಿದೆ.ಪಟ್ಟಣದಲ್ಲಿ ತುಸು
ಮುಂಜಾನೆ ಮಂದಗತಿಯಲ್ಲಿ ನಡೆದ ಮತದಾನ 11 ಗಂಟೆಯಿಂದ ಮತದಾರರು ಸಾಲಲ್ಲಿ ನಿಂತು ಮತ ಚಲಾಯಿಸಿದರು. ನಂತರ ಬಿರು ಬಿಸಿನಲ್ಲಿಯೇ ಸರದಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾಯಿಸಿದರು. , , ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಅವರ ಸ್ವಗ್ರಾಮವಾದ ಬಿದರಕೆರೆ ಗ್ರಾಮದಲ್ಲಿಯೆ ಮತ ಚಲಾಯಿಸಿದರು. , ಇನ್ನು ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಅವರ ಸ್ವಗ್ರಾಮವಾದ ಚಿಕ್ಕಮ್ಮನಹಟ್ಟಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ ಹಾಲಿ ಶಾಸಕ ಎಸ್ ವಿ ರಾಮಚಂದ್ರ ದಾವಣಗೆರೆ ನಗರದಲ್ಲಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ತಮ್ಮ, ತಮ್ಮ ಅಭ್ಯರ್ಥಿಗಳ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಬಾಗಗಳಲ್ಲಿ ಸೇರಿದಂತೆ ಹಲವಡೆ ಶತಾಯುಷಿಗಳು ಮತ ಚಲಾಯಿಸಿದ್ದಾರೆ.
ಮತಗಟ್ಟೆಗಳ ಮುಂದೆ ಸೂಕ್ತ ಬಂದೋ ಬಸ್ತು ಒದಗಿಸಿತ್ತು
ಶೇ 81.17 ರಷ್ಟು ಮತದಾನ ನಡೆದಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ತಹಶೀಲ್ದಾರ್ ಜಿ ಸಂತೋಷಕುಮಾರ್ ತಿಳಿಸಿದ್ದಾರೆ